ಇರಾಕ್: ಮಾಜಿ ಬೇಹುಗಾರಿಕಾ ಮುಖ್ಯಸ್ಥ ಮುಸ್ತಫಾ ಅಲ್ ಖಾದ್ಮಿ ಪ್ರಧಾನಿಯಾಗಿ ಆಯ್ಕೆ

0
415

ಸನ್ಮಾರ್ಗ ವಾರ್ತೆ

ಬಗ್ದಾದ್, ಮೇ.7:ಇರಾಕ್ ಪಾರ್ಲಿಮೆಂಟ್‍ನ ನೂತನ ಪ್ರಧಾನಿಯಾಗಿ ಮಾಜಿ ಬೇಹುಗಾರಿಕಾ ಮುಖ್ಯಸ್ಥ ಮುಸ್ತಫಾ ಅಲ್ ಖಾದ್ಮಿ ಆಯ್ಕೆಯಾದರು. ಅಮೆರಿಕದೊಂದಿಗೆ ಬಲವಾದ ಸಂಬಂಧವನ್ನು ಹೊಂದಿರುವವರು ಎನ್ನಲಾಗಿದೆ. ಪ್ರಾಯೋಗಿಕತಾವಾದವನ್ನು ಬಲವಾಗಿ ಒಪ್ಪಿರುವ ನಾಯಕ ಖಾದ್ಮಿಯಾಗಿದ್ದಾರೆ.

ಜನರು ಸರಕಾರದ ವಿರುದ್ಧ ಪ್ರತಿಭಟನೆಗಳೊಂದಿಗೆ ರಂಗಕ್ಕೆ ಬಂದದ್ದರಿಂದ ಮಾಜಿ ಪ್ರಧಾನಿ ಅಬ್ದುಲ್ ಮಹ್ದಿ ರಾಜೀನಾಮೆ ನೀಡಿದ್ದರು. ಇದು ಹೊಸ ಚುನಾವಣೆಗೆ ಅವಕಾಶ ಮಾಡಿಕೊಟ್ಟಿತ್ತು.

ಪ್ರಧಾನಿ ಆಯ್ಕೆಯಲ್ಲಿ ಪಾರ್ಲಿಮೆಂಟಿನ 25 ಸದಸ್ಯರು ಭಾಗವಹಿಸಿದ್ದು, 15 ಸಚಿವರು ಖಾದ್ಮಿಯವರನ್ನು ಬೆಂಬಲಿಸುವುದರೊಂದಿಗೆ ನೂತನ ಪ್ರಧಾನಿಯಾಗಿ ಖಾದ್ಮಿ ಆಯ್ಕೆಯಾದರು.

ಇರಾಕ್ ಸರಕಾರದ ಭಾಗವಾಗಿ ಕೆಲಸ ಮಾಡುವುದರಲ್ಲಿ ತನಗೆ ಸಂತಸವಿದೆ ಎಂದು ಖಾದ್ಮಿ ಪ್ರತಿಕ್ರಿಯಿಸಿದ್ದಾರೆ. ದೇಶ ಎದುರಿಸುತ್ತಿರುವ ಸಾಮಾಜಿಕ, ರಾಜಕೀಯ, ಆರ್ಥಿಕ ಬಿಕ್ಕಟ್ಟುಗಳ ವಿರುದ್ಧ ಪ್ರತಿಕ್ರಿಯೆ ಇದು. ಜನರ ಅಭಿವೃದ್ಧಿಗಾಗಿ ಕೆಲಸ ಮಾಡುವೆ ಎಂದು ಖಾದ್ಮಿ ಟ್ವೀಟ್ ಮಾಡಿದ್ದಾರೆ.