ಅಮೇರಿಕ, ಲಂಡನ್, ಸಿಂಗಾಪುರ್‌ನಲ್ಲಿ ಏರ್ ಇಂಡಿಯಾ ಬುಕ್ಕಿಂಗ್ ಆರಂಭ: ನಾಳೆಯಿಂದ ಪ್ರಯಾಣಿಕರಿಗೆ ಸೇವೆ

0
410

ಸನ್ಮಾರ್ಗ ವಾರ್ತೆ

ದಿಲ್ಲಿ, ಮೇ.7: ಕೊರೋನಾ ಹಿನ್ನೆಲೆಯಲ್ಲಿ ಲಂಡನ್, ಸಿಂಗಾಪುರ, ಅಮೆರಿಕಗಳಲ್ಲಿ ಸಿಲುಕಿದ ಭಾರತೀಯರು ಭಾರತಕ್ಕೆ ಮರಳಲು ಬಯಸಿದರೆ ಅವರನ್ನು ಕರೆ ತರಲು ಶುಕ್ರವಾರದಿಂದ ಏರ್ ಇಂಡಿಯಾ ಸರ್ವಿಸ್ ನಡೆಸಲಿದೆ. ಮೇ ಎಂಟರಿಂದ 15ರವರೆಗೆ ಏರ್ ಇಂಡಿಯಾ ಸರ್ವಿಸ್ ನಡೆಸುತ್ತಿದೆ. ಇದಕ್ಕಾಗಿ ಟಿಕೇಟ್ ಬುಕ್ಕಿಂಗ್ ಆರಂಭವಾಗಿದೆ. ಏರ್ ಇಂಡಿಯಾದ ವೆಬ್‍ಸೈಟ್ ಮೂಲಕ ಬುಕ್ಕಿಂಗ್ ಆರಂಭವಾಗಿದೆ.

ಏರ್ ಇಂಡಿಯಾ ಮೇ 9 ರಿಂದ 15ರವರೆಗೆ ಅಮೆರಿಕದ ವಿವಿಧ ಕಡೆಗಳಿಗೆ ಸೇವೆಯನ್ನು ಆರಂಭಿಸಲಿದೆ ಎಂದು ವಾಷಿಂಗ್ಟನ್‍ನಲ್ಲಿರು ಭಾರತೀಯ ರಾಯಭಾರಿ ಕಚೇರಿ ತಿಳಿಸಿದೆ. ವಿಮಾನ ಪ್ರಯಾಣಕ್ಕೆ ವಿವಿಧ ನಿಯಮಗಳ ಪಾಲನೆ ಅಗತ್ಯವಾಗಿದ್ದು ಇದನ್ನು ಪಾಲಿಸಿದ ಜನರನ್ನು ಊರಿಗೆ ಏರ್‌ ಇಂಡಿಯಾ ಕರೆ ತರಲಿದೆ.

ಇದೇ ವೇಳೆ, ನಿನ್ನೆ ಇಲ್ಲಿ ವಿಮಾನ ಹಾರಾಟ ಆರಂಭ ವಾಗಬೇಕಿತ್ತು. ಆದರೆ ಸಿಬ್ಬಂದಿಗಳ ಆರೋಗ್ಯ ತಪಾಸಣೆ ಪೂರ್ಣಗೊಳ್ಳದ್ದರಿಂದ ತಡವಾಗಿ ಸೇವೆಯನ್ನು ಆರಂಭಿಸಲಾಗಿದೆ. ಸ್ಯಾನ್‍ಪ್ರಾಸಿಸ್ಕೊ ಹೋಗುವ ವಿಮಾನ ಶುಕ್ರವಾರ ಬೆಳಗ್ಗೆ 3.30ಕ್ಕೆ ಹೋರಡಲಿದೆ. ಇದು ಇಂದು ದಿಲ್ಲಿಯಿಂದ ಹೋಗಬೇಕಾಗಿತ್ತು. ಜೊತೆಗೆ ಮುಂಬೈ -ಲಂಡನ್ ವಿಮಾನಯಾನ ಆರಂಭಕ್ಕೂ ಇದರಿಂದಾಗಿ ವಿಳಂಬವಾಗಿತ್ತು.