ಬಹುಪತ್ನಿತ್ವ ಮುಸಲ್ಮಾನರಲ್ಲಿ ಮಾತ್ರವೇ..?
ವಾಸ್ತವತೆ ಏನು ?

0
258

ಸನ್ಮಾರ್ಗ ವಾರ್ತೆ

ಅನಸ್ ಕೊಡಿಪ್ಪಾಡಿ
(ವಿದ್ಯಾರ್ಥಿ SUAC ತೋಡಾರು)

ವಾರದ ಹಿಂದೆ ಮಾನ್ಯ ಸಂಸದರ ಅಮಾನ್ಯ ಹೇಳಿಕೆ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಗೃಹಲಕ್ಷ್ಮಿ ಯೋಜನೆಯ ಟೀಕಿಸುವ ಭರದಲ್ಲಿ ಹೇಳಿಕೆ ನೀಡುತ್ತಾ ” ಸಾಬರ ಮನೆಯಲ್ಲಿ 2-3 ಹೆಂಡತಿಗಳಿದ್ದಾರೆ..ಯಾರಿಗೆ ಗೃಹ ಲಕ್ಷ್ಮಿ ನೀಡೂದು” ಎಂದು ಕೆಣಕಿದ್ದರು. ಮೊದಲೇ ವಾಟ್ಸಪ್ ಯುನಿವರ್ಸಿಟಿಯ ಪಧವೀದರರಾದರಿಂದ ಇಂತಹ ಹೇಳಿಕೆಗಳು ನಿರೀಕ್ಷಣೀಯ.

ಹಾಗಿದ್ದಲ್ಲಿ ಮುಸಲ್ಮಾನರು ಮಾತ್ರ ಬಹುಪತ್ನಿತ್ವ ಹೊಂದಿರುವವರಾ..? ಅನ್ಯ ಧರ್ಮೀಯರು ಬಹುಪತ್ನಿತ್ವದಿಂದ ಮುಕ್ತರಾಗಿದ್ದಾರೆಯೇ..?
ಇಲ್ಲ…ಖಡಾಖಂಡಿತವಾಗಿಯೂ ಸರ್ವ ಧರ್ಮೀಯರಲ್ಲೂ ಬಹುಪತ್ನಿತ್ವ ಇಂದಿಗೂ ಅಸ್ತಿತ್ವದಲ್ಲಿದೆ. ಕೋಮುಧ್ರುವೀಕರಣದ ಬೇಳೆ ಬೇಯಿಸಲು ಮುಸಲ್ಮಾನರೊಂದು ದಾಳವಾಗಿ ಬಲಿಯಾಗುತ್ತಿದ್ದಾರೆ.

ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-5 (2019-20)ಇದರ ಪ್ರಕಾರ ಬಹುಪತ್ನಿತ್ವವು ಕ್ರಿಶ್ಚಿಯನ್ನರಲ್ಲಿ 2.1% , ಮುಸ್ಲಿಮರಲ್ಲಿ 1.9%, ಹಿಂದೂಗಳಲ್ಲಿ 1.3% ಮತ್ತು ಇತರ ಧಾರ್ಮಿಕ ಗುಂಪುಗಳಲ್ಲಿ 1.6% ಎಂದು ತೋರಿಸಲಾಗಿದೆ .
ದತ್ತಾಂಶವು ಬಹುಪತ್ನಿತ್ವದ ವಿವಾಹಗಳು ಬುಡಕಟ್ಟು ಜನಸಂಖ್ಯೆಯನ್ನು ಹೊಂದಿರುವ ಈಶಾನ್ಯ ರಾಜ್ಯಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿವೆ ಎಂದು ತೋರಿಸುತ್ತದೆ .
ಅತ್ಯಧಿಕ ಬಹುಪತ್ನಿತ್ವ ದರವನ್ನು ಹೊಂದಿರುವ 40 ಜಿಲ್ಲೆಗಳ ಪಟ್ಟಿಯು ಹೆಚ್ಚಿನ ಬುಡಕಟ್ಟು ಜನಸಂಖ್ಯೆಯನ್ನು ಹೊಂದಿರುವ ಜೆಲ್ಲೆಗಳಾಗಿವೆ.

ಸದ್ಯ ಕಪೋಲಕಲ್ಪಿತ ಸುದ್ದಿಗಳು ಸದ್ದಾಗೂದು ಸರ್ವೇ ಸಾಮಾನ್ಯ . ಒರ್ವ ಸಂಸದನಾಗಿ ಜನಪ್ರತಿನಿಧಿ ಎಂಬೂದನ್ನೇ ಮೈಮರೆತು ತನ್ನ ಕುಬುಧ್ಧಿ ಪ್ರದರ್ಶಿಸೂದು ಉಚಿತವಲ್ಲ.ಬರೇ ಮುಸ್ಲಿಮ್ ಜನಾಂಗದಲ್ಲಿ ಮಾತ್ರ ಬಹುಪತ್ನಿತ್ವ ತಾಂಡವಾಡುತ್ತಿದ್ದರೆ ಈ ಹೇಳಿಕೆ ಅರ್ಥಪೂರ್ಣಗುತ್ತಿತ್ತು. ಜನಾಂಗೀಯ ದ್ವೇಷವೇ ಹೇಳಿಕೆಯ ಇರಾದೆಯೆಂದು ಸತ್ಯಾಂಶಗಳಾದ ದತ್ತಾಂಶಗಳಿಂದ ಕಂಡುಕೊಳ್ಳಬಹುದು.

ಬಹುಪತ್ನಿತ್ವ ಎಲ್ಲಾ ಧರ್ಮಗಳಲ್ಲೂ ಹಂಚಿಹೋಗಿದ್ದರಿಂದ ಸೀಮಿತ ಧರ್ಮವೊಂದನ್ನು ಗುರಿಯಾಗಿಸೂದು ಅಸಹ್ಯವೇ ಸರಿ.1993ರಲ್ಲಿ ಪುಣೆಯ ಗೋಖಲೆ ಇನ್ಸ್ಟಿಟ್ಯೂಟ್ ಆಫ್ ಪಾಲಿಟಿಕ್ಸ್ ಆಂಡ್ ಎಕನಾಮಿಕ್ಸ್ ನ ಮಲ್ಲಕಾ ಬಿ ಮಿಸ್ತ್ರಿ ನಡೆಸಿದ ಸರ್ವೇ ಹಾಗೂ ಜಾನ್ ದಯಾಳ್ ಅವರ ದಾಖಲೆಯ ಪ್ರಕಾರ “ಬಹುಪತ್ನಿತ್ವ ವಿವಾಹಗಳು ಮುಸ್ಲಿಮರಲ್ಲಿ ಹಿಂದೂಗಳಿಗಿಂತ ಶೇಖಡವಾರು ಹೆಚ್ಚು ಎನ್ನುವುದಕ್ಕೆ ಯಾವುದೇ ಪುರಾವೆಗಳಿಲ್ಲ” ಎನ್ನುತ್ತದೆ ಇವರ ದಾಖಲೆಗಳು.

ತಪ್ಪುಎತ್ತ ಕಂಡರೂ ನಖಶಿಕಾಂತವಾಗಿ ವಿರೋಧಿಸಬೇಕಾದುದು ಸೌಹರ್ದ ಪ್ರೇಮಿಯ ಧರ್ಮ. ಧ್ವೇಷವೇ ಓಟಿನ ಭೇಟೆಗೆ ಬ್ರಹ್ಮಾಸ್ತ್ರವೆಂದು ನಂಬಿದ್ದ ಅನೇಕರು ದಿಕ್ಕುಪಾಲಾಗಿದ್ದಾರೆ. ಇಸ್ಲಾಮೋಫೋಬಿಯಾವನ್ನೇ ಬಂಡವಾಳವಾಗಿಸಿ ದಿನದೂಡುವ ರಾಜಕೀಯ ನಾಯಕರು ಕಳೆದ ವಿಧಾನಸಭಾ ಚುನಾವಣೆಯ ಫಲಿತಾಂಶದತ್ತ ತಿರುಗಿ ನೋಡಿದರೆ ಕೊಂಚ ಒಳಿತು.

ಬಹುಪತ್ನಿತ್ವದ ವೃಧ್ದಿಗೆ ಧರ್ಮವೇ ಮೂಲಕಾರಣವೆಂಬೂದು ತಪ್ಪುಕಲ್ಪನೆ.2006 ರಲ್ಲಿ ನಡೆಸಲಾದ ರಾಷ್ಟ್ರೀಯ ಕೌಟುಂಬಿಕ ಆರೋಗ್ಯ ಸಮೀಕ್ಷೆಯ ಪ್ರಕಾರ ಬಹುಪತ್ನಿತ್ವ ಘಟನೆಗಳು ಶಿಕ್ಷಣದ ಕೊರತೆ , ಪತಿ-ಪತ್ನಿಯರ ಹೊಂದಾಣಿಕೆಯ ಕೊರತೆ ಹಾಗೂ ದಂಪತಿಗಳಲ್ಲಿ ಮಕ್ಕಳಾಗದಿರುವಿಕೆಯ ಕೊರತೆಯಿಂದ ಉಂಟಾಗುತ್ತದೆ ಎಂದು ಸಬಬುಗಳನ್ನು ನೀಡಿತ್ತು.

ಬಹುಪತ್ನಿತ್ವ ಮುಸಲ್ಮಾನರಲ್ಲಿ ಮಾತ್ರ ಅಸ್ತಿತ್ವದಲ್ಲಿದೆ ಎಂಬೂದು ಫ್ಯಾಶಿಸ್ಟರ ಅಜೆಂಡವಷ್ಟೇ…ಈ ವದಂತಿಗಳು ಮತಗಳಿಕೆಗೆ ಸಹಾಯಕವಾದರೂ ಪರಸ್ಪರ ನಂಬಿಕೆ ಮತ್ತು ಸ್ನೇಹಕ್ಕೆ ದೊಡ್ಡಮಟ್ಟದ ಏಟು ನೀಡುತ್ತದೆ.
ಯಾವುದೇ ವಿಚಾರಧಾರೆಯ ಉಲ್ಲೇಖಕ್ಕೆ ಆಧಾರಗಳು ಮಾನದಂಡವಾಗಿರಬೇಕು ಆಗ ಮಾತ್ರ ಮಾತಿಗೆ ಮೌಲ್ಯ ಕಟ್ಟಲು ಸಾದ್ಯ..ವಿವಿಧತೆಯಲ್ಲಿ ಏಕತೆಯ ಭಾರತವನ್ನು ಮತ್ತೊಮ್ಮೆ ಭಧ್ರಪಡಿಸೋಣ..ಜೈ ಹಿಂದ್