ಸನ್ಮಾರ್ಗ ವಾರ್ತೆ
ಅಮೆರಿಕಾದ ಉಪಾಧ್ಯಕ್ಷ ಜೆಡಿ ವಾನ್ಸ್ ಮತ್ತು ವಿದೇಶಾಂಗ ಕಾರ್ಯದರ್ಶಿ, ಮಾರ್ಕೊ ರುಬಿಯೋ ಇವರ ನಡುವೆ ಭಿನ್ನಾಭಿಪ್ರಾಯ ಇದೆ ಎಂದು ವರದಿಯಾಗಿದೆ. ಮಧ್ಯ ಪ್ರಾಚ್ಯದ ವಿಷಯದಲ್ಲಿ ಇಬ್ಬರು ನಡುವಿನ ವ್ಯತ್ಯಾಸಗಳು ಪದೇ ಪದೇ ಗೋಚರಿಸುತ್ತಿವೆ. ಇರಾನ್ ಜೊತೆಗಿನ ಮಾತುಕತೆಗಳಲ್ಲಿ ಜೆಡಿ ವಾನ್ಸ್ ಮುಂಚೂಣಿಯಲ್ಲಿದ್ದಾರೆ.. ಲೆಬನಾನ್ ನಲ್ಲಿ ಇಸ್ರೇಲ್ ನ ಕ್ರಮಗಳನ್ನು ಸಾರ್ವಜನಿಕವಾಗಿ ಅವರು ಟೀಕಿಸಿದ್ದಾರೆ. ಆದರೆ ರುಬಿಯೋ ಇಸ್ರೇಲ್ ಗೆ ಸಂಪೂರ್ಣ ಬೆಂಬಲ ನೀಡುತ್ತಿದ್ದಾರೆ. ಕಳೆದ ವಾರ ಲೆಬನಾನ್ ವಿಷಯದ ಕುರಿತು ಪ್ರಾಥಮಿಕ ಒಪ್ಪಂದವನ್ನು ರೂಪಿಸುವಲ್ಲಿ ರುಬಿಯೋ ನಿರ್ಣಾಯಕ ಪಾತ್ರ ವಹಿಸಿದ್ದಾರೆ.
ಇರಾನ್ ಮಾತುಕತೆಗಳಿಂದ ಪ್ರಭಾವಿತರಾಗದ ರುಬಿಯೋ ಪಾಕಿಸ್ತಾನದಲ್ಲಿ ಅಮೆರಿಕದ ತಂಡವನ್ನು ಮುನ್ನಡೆಸಲು ನಿರಾಕರಿಸಿದ್ದರು. ನಂತರ ವ್ಯಾನ್ಸ್ ಆ ಪಾತ್ರವನ್ನು ವಹಿಸಿಕೊಂಡರು. ಇರಾನ್ ವಿರುದ್ಧ ಕಠಿಣ ಕ್ರಮಗಳಲ್ಲಿ ರುಬಿಯೋ ಅವರು ಆಸಕ್ತಿ ವಹಿಸಿದ್ದಾರೆ. ಇದು ವ್ಯಾನ್ ಅವರ ನೀತಿಗೆ ವಿರುದ್ಧವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ಇಬ್ಬರು 2028ರ ಅಧ್ಯಕ್ಷೀಯ ಚುನಾವಣೆಗೆ ಸಂಭಾವ್ಯ ಅಭ್ಯರ್ಥಿಗಳು ಎಂದು ಹೇಳಲಾಗಿದೆ. ಟ್ರಂಪ್ ಆಡಳಿತದಲ್ಲಿ ಹಲವಾರು ಉನ್ನತ ಮಟ್ಟದ ಹುದ್ದೆಗಳಿಗೆ ತನ್ನದೇ ಆದ ಬೆಂಬಲಿಗರನ್ನು ನೇಮಿಸುವ ಮೂಲಕ ರೂಬಿಯೋ ತನ್ನ ಪ್ರಭಾವವನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ ಎಂದು ವರದಿಯಾಗಿದೆ.












