ಭಾರತೀಯರ ಮಾಹಿತಿ ಇಸ್ರೇಲಿನಿಂದ ಸೋರಿಕೆ- ವಾಟ್ಸಪ್ ಹೇಳಿಕೆ

0
550

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಅ.31: ಭಾರತೀಯ ಪತ್ರಕರ್ತರು, ಮಾನವಹಕ್ಕು ಕಾರ್ಯಕರ್ತರು, ರಾಜತಾಂತ್ರಿಕ ಪ್ರತಿನಿಧಿಗಳೂ, ರಾಜಕಾರಣಿಗಳ ವಿವರಗಳನ್ನು ಇಸ್ರೇಲ್ ಸೋರಿಕೆ ಮಾಡಿದೆ ಎಂದು ವಾಟ್ಸಪ್ ತಿಳಿಸಿದೆ.

ಇಸ್ರೇಲಿನ ಸ್ಪೈವೇರ್ ಆದ ಪೆಗಸ್ಸ್ ಉಪಯೋಗಿಸಿ ಭಾರತೀಯರನ್ನು ನಿರೀಕ್ಷಿಸಲಾಗುತ್ತಿದೆ ಎಂದು ವರದಿ ಬಹಿರಂಗವಾಗಿದೆ. 2019 ಮೇ ಯಿಂದ ಎರಡು ವಾರಗಳ ನಿಗಾವಿರಿಸುವ ಕೆಲಸ ನಡೆದಿದೆ.

ಸ್ಪೈವೇರ್ ಪೆಗಾಸ್ ಅನ್ನು ಇಸ್ರೇಲಿ ಕಂಪೆನಿ ಎನ್‍ಎಸ್‍ಒ ತಯಾರಿಸಿದ್ದು ಸರಕಾರಿ ಏಜೆನ್ಸಿಗಳಿಗೆ ಮಾತ್ರ ಸ್ಪೈವೇರ್ ನೀಡಲಾಗುತ್ತದೆ ಎಂದು ಎನ್‍ಎಸ್‍ಒ ಹೇಳುತ್ತಿದೆ. ಸ್ಪೈವೇರ್ ದಾಳಿಯ ವಿರುದ್ಧ ವಾಟ್ಸಪ್ ಸನ್‍ಫ್ರಾನ್ಸಿಸ್ಕೊ ಫೆಡರಲ್ ಕೋರ್ಟಿನಲ್ಲಿ ದೂರು ಸಲ್ಲಿಸಿದೆ.

ವೀಡಿಯೊ ಕಾಲಿಂಗ್ ಸಿಸ್ಟಂ ಮೂಲಕ ವೈರಸ್ ಬರುತ್ತಿದೆ ಎಂದು ವಾಟ್ಸಪ್ ಹೇಳುತ್ತಿದೆ. ಬಳಕೆದಾರರಿಗೆ ಗೊತ್ತಿಲ್ಲದೆ ಫೋನ್‍ಗೆ ಬರುವ ಪೆಗಾಸಸ್ ವೈರಸ್ ವ್ಯಕ್ತಿ ವಿವರಗಳು ಪಾಸ್‍ವರ್ಡ್, ಕಾಂಟೆಕ್ಟ್, ಕ್ಯಾಲಂಡರ್ ಸೋರಿಕೆ ಮಾಡುತ್ತಿದೆ.

ಭಾರತವಲ್ಲದೆ ಇತರ ಕೆಲವು ದೇಶಗಳ ವ್ಯಕ್ತಿಗಳ ವಿವರಗಳನು ಈ ರೀತಿಯಲ್ಲಿ ಸೋರಿಕೆ ಮಾಡಲಾಗುತ್ತಿದೆ. ಇದೇವೇಳೆ, ಎನ್‍ಎಸ್‌ಒ ಆರೋಪ ನಿರಾಕರಿಸಿದೆ. ಅಂಗೀಕೃತ ಸರಕಾರಿ ಏಜೆನ್ಸಿಗಳಿಗೆ ಮತ್ತು ಗುಪ್ತಚರ ವಿಭಾಗಗಳಿಗೆ ಮಾತ್ರ ಸೇವೆ ಒದಗಿಸಲಾಗಿದೆ ಎಂದಿದೆ. ಜಗತ್ತಿನ 150 ಕೋಟಿ ವಾಟ್ಸಪ್‍ಗರಲ್ಲಿ 40 ಕೋಟಿ ಭಾರತೀಯರಿದ್ದಾರೆ.