ಸನ್ಮಾರ್ಗ ವಾರ್ತೆ
ಆಗ್ರಾ,ನ.1: ಶಿಯಾ ಧರ್ಮ ಗುರು ಕಲ್ಬೆ ಜವ್ವಾದ್ ಬಾಬರಿ ಮಸೀದಿ-ರಾಮಜನ್ಮ ಭೂಮಿ ಕುರಿತು ನ್ಯಾಯಾಲಯ ನೀಡುವ ಯಾವುದೇ ತೀರ್ಪನ್ನು ಮುಸ್ಲಿಮ್ ಸಮಾಜ ಸ್ವೀಕರಿಸಲಿದೆ ಎಂದು ಹೇಳಿದ್ದಾರೆ.
ಇಮಾಮ್ ಹುಸೈನ್ರ ಸಂದೇಶ ಸಂಪೂರ್ಣ ಜಗತ್ತಿಗೆ ಇರುವುದಾಗಿ. ಹುಸೈನಿಯತ್ ಒಂದು ಚಿಂತನೆಯ ಹೆಸರು. ಅದು ಎಲ್ಲಿಯೂ ಕಂಡು ಬರುವಂತಹದ್ದು. ದೇಶದಲ್ಲಿ ಎಲ್ಲಿಯೂ ಇಮಾಮ್ರಲ್ಲಿ ವಿಶ್ವಾಸ ಇರಿಸುವವರಿಂದ ಆಗುವುದಿಲ್ಲ. ಅಜ್ಞಾಧಾರಿಗಳಿಗೆ ಈಗಿನ ಸರಕಾರ ಹಿಂದಿನ ಸರಕಾರಕ್ಕಿಂತ ಉತ್ತಮವಾಗಿದೆ.
ಉತ್ತರ ಪ್ರದೇಶದ ಸಿದ್ಧಾರ್ಥ ನಗರ ಹಲ್ಲೋರಿನ ನಡೆದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಬಂದಿದ್ದ ಅವರು ಪತ್ರಕರ್ತರೊಂದಿಗೆ ಮಾತಾಡುತ್ತಾ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
ಸರಕಾರ ಹಾಗೂ ಸುಪ್ರೀಂಕೋರ್ಟಿನ ತೀರ್ಪು ನಮಗೆ ಸರ್ವಮಾನ್ಯವಾದುದು ಕೆಲವು ಸಮಾಜ ವಿರೋಧಿ ಶಕ್ತಿಗಳು ವಾತಾವರಣ ಕೆಡಿಸಿ ಹಾಕಲು ನೋಡುತ್ತಿದ್ದು ಇದರಿಂದ ಸುರಕ್ಷಿತರಾಗಿರಲು ಪ್ರಯತ್ನಿಸುವ ಅಗತ್ಯವಿದೆ ಎಂದು ಅವರು ಹೇಳಿದರು. ಜೊತೆಗೆ, ಸಂವಿಧಾನವನ್ನು ಗೌರವಿಸಿ ಮತ್ತು ಪ್ರೀತಿ ವಿಶ್ವಾಸದ ಪ್ರತೀಕವಾಗಿ ಎಂದು ಮುಸ್ಲಿಮರಿಗೆ ಕರೆ ನೀಡಿದ್ದಾರೆ.












