ಗಾಝದಲ್ಲಿ ನಿರಾಶ್ರಿತರಿರುವ ಶಾಲೆಯ ಮೇಲೆ ಇಸ್ರೇಲಿನ ಬಾಂಬಿಂಗ್; 29 ಮಂದಿ ಸಾವು

0
106

ಸನ್ಮಾರ್ಗ ವಾರ್ತೆ

ಗಾಝ, ಜು 10: ಖಾನ್ ಯೂನಿಸ್ ಸಮೀಪ ನಿರಾಶ್ರಿತರು ವಾಸಿಸುವ ಶಾಲೆಯ ಮೇಲೆ ಇಸ್ರೇಲ್ ಬಾಂಬಿಂಗ್ ನಡೆಸಿದ್ದು 29 ಮಂದಿ ಕೊಲ್ಲಲ್ಪಟ್ಟಿದ್ದಾರೆ.

ಅಬಸಾನ್ ಟೌನ್‍ನಲ್ಲಿ ಸ್ಕೂಲ್‍ನ ಹೊರಗೆ ನಿರಾಶ್ರಿತರು ವಾಸಿಸುವ ಟೆಂಟ್‍ಗಳಿಗೆ ಇಸ್ರೇಲ್ ಬಾಂಬು ಸುರಿಸಿದೆ. ಗಾಝ ಸರಕಾರದ ಮೀಡಿಯ ಕಚೇರಿಯಲ್ಲಿದ್ದ 29 ಮಂದಿ ಕೊಲ್ಲಲ್ಪಟ್ಟಿದ್ದಾರೆ.

ಇದು ನಾಲ್ಕನೆ ಬಾರಿ ನಿರಾಶ್ರಿತರು ವಾಸಿಸುವ ಶಾಲೆಗಳಿಗೆ ಇಸ್ರೇಲ್ ದಾಳಿ ನಡೆಸಿದೆ. ನಾಲ್ಕು ದಿವಸಗಳಲ್ಲಿ ನಾಲ್ಕು ದಾಳಿಗಳು ಇಸ್ರೇಲ್ ನಡೆಸಿದೆ. ಈ ಹಿಂದೆ ಖಾನ್ ಯೂನಿಸ್‍ನಿಂದ ಹೊರಟು ಹೋಗಬೇಕೆಂದು ಜನರಿಗೆ ಇಸ್ರೇಲ್ ಎಚ್ಚರಿಕೆ ನೀಡಿತ್ತು. ಇದು ಹತ್ತು ಸಾವಿರಕ್ಕೂ ಹೆಚ್ಚು ಜನರು ಪಲಾಯಣಕ್ಕೆ ಇಸ್ರೇಲ್ ನಿರ್ಬಂಧಿಸುತ್ತಿದೆ. ಖಾನ್ ಯುನಿಸ್‍ನ ಮೂರು ಆಸ್ಪತ್ರೆಗಳನ್ನು ಈಗ ಮುಚ್ಚಿಡಲಾಗಿದೆ.

ಇದರ ನಡುವೆ ಗಾಝದ ಜನರನ್ನು ಇಸ್ರೇಲ್ ಹಸಿವಿನೆಡಗೆ ದೂಡಿದೆ. ಇದು ವ್ಯಾಪಕವಾಗಿ ಟೀಕೆಗೆ ತುತ್ತಾಗಿದ್ದು ವಿಶ್ವಸಂಸ್ಥೆಯ ಮಾನವ ಹಕ್ಕು ಕಾರ್ಯಕರ್ತರು ಇದನ್ನು ಪ್ರತಿಭಟಿಸಿದ್ದಾರೆ. ಗಾಝದಲ್ಲಿ ಪೋಷಕಾಹಾರ ಕೊರತೆ ಆಗಿದೆ. ಹೈಡ್ರೋಸನ್‍ನಿಂದ ಹಲವು ಮಕ್ಕಳು ಪ್ರತಿದಿನ ಸಾಯುತ್ತಿದ್ದಾರೆ ಎಂದು ಅವರು ತಿಳಿಸಿದರು.

ಇದೇ ವೇಳೆ, ಗಾಝದಲ್ಲಿ ಕದನ ವಿರಾಮದ ಚರ್ಚೆಗಳು ಕೂಡ ಮುಂದುವರಿಯುತ್ತಿದೆ. ಕತರ್ ಈಜಿಪ್ಟ್ ಮಧ್ಯಸ್ಥಿಕೆ ವಹಿಸುತ್ತಿದೆ. ಇದರ ಭಾಗವಾಗಿ ಸಭೆ ಇಂದು ಕೂಡ ಇದೆ. ಇದುವರೆಗೆ 38,43 ಮಂದಿಯನ್ನು ಇಸ್ರೇಲ್ ಕೊಂದಿದೆ. 88, 224 ಜನರು ಗಾಯಗೊಂಡಿದ್ದಾರೆ.