ಡಿಎಂಕೆ ಅಧ್ಯಕ್ಷ ಎಂಕೆ ಸ್ಟಾಲಿನ್‌ರ ಪುತ್ರಿಯ ಮನೆಗೆ ಐಟಿ ದಾಳಿ

0
562

ಸನ್ಮಾರ್ಗ ವಾರ್ತೆ

ಚೆನ್ನೈ: ತಮಿಳ್ನಾಡಿನ ವಿಧಾನಸಭಾ ಚುನಾವಣೆಯು ನಡೆಯಲಿರುವಂತೆ ಡಿಎಂಕೆ ನಾಯಕ ಎಂಕೆ ಸ್ಟಾಲಿನ್‍ರ ಮಗಳ ಮನೆಗೆ ಆದಾಯ ತೆರಿಗೆ ಇಲಾಖೆ ದಾಳಿ ಮಾಡಿದೆ. ಸ್ಟಾಲಿನ್ ಪುತ್ರಿ ಸೆಂದೊಮರೈ, ಅಳಿಯ ಶಬರೀಶರ ನಿವಾಸಕ್ಕೆ ಐಟಿ ಅಧಿಕಾರಿಗಳು ದಾಳಿ ಮಾಡಿ ಮನೆ ಪರಿಶೀಲನೆ ನಡೆಸಿದ್ದಾರೆ.

ಶುಕ್ರವಾರ ಬೆಳಗ್ಗೆ ಚೆನ್ನೈ ನೀಲಂಗರೈಯ ಸ್ಟಾಲಿನ್ ಮಗಳು ಮತ್ತು ಅಳಿಯನ ಮನೆಗೆ ಆದಾಯ ತೆರಿಗೆಯವರು ದಾಳಿ ಮಾಡಿದ್ದು ಎಪ್ರಿಲ್ ಆರಕ್ಕೆ ಚುನಾವಣೆ ಘೋಷಣೆಯಾದ ಬಳಿಕ ಡಿಎಂಕೆ ನಾಯಕರ ಮನೆ ಮತ್ತು ಸಂಸ್ಥೆಗಳ ಮೇಲೆ ದಾಳಿ ಆರಂಭವಾಗಿದೆ. ಕಳೆದ ತಿಂಗಳು ಹಿರಿಯ ಡಿಎಂಕೆ ನಾಯಕ ಮತ್ತು ಅಭ್ಯರ್ಥಿ ಕೂಡ ಆಗಿರುವ ಇ.ವಿ.ವೇಲುರ ಮನೆಗೆ ಆದಾಯ ತೆರಿಗೆ ಅಧಿಕಾರಿಗಳು ಬಂದು ಪರಿಶೀಲನೆ ನಡೆಸಿದ್ದರು.

ಚುನಾವಣಾ ಪ್ರಚಾರದಲ್ಲಿ ಹಣ ಹರಿದಾಡುತ್ತಿದೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸುತ್ತಿರುವುದಾಗಿ ಆದಾಯ ತೆರಿಗೆ ಇಲಾಖೆ ಹೇಳಿಕೆ ನೀಡಿದೆ.