ಸನ್ಮಾರ್ಗ ವಾರ್ತೆ
ಬೆಂಗಳೂರು: ಸದ್ಭಾವನ ವೇದಿಕೆ ಕರ್ನಾಟಕ ಇದರ ರಾಜ್ಯಾಧ್ಯಕ್ಷರು ಹಾಗೂ ಬಸವ ಸಮಿತಿಯ ಮುಖ್ಯಸ್ಥ ಶ್ರೀ ಅರವಿಂದ ಜತ್ತಿಯವರನ್ನು ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ಕಾರ್ಯದರ್ಶಿ ಜ| ಮುಹಮ್ಮದ್ ಕುಂಞಯವರು ಏಪ್ರಿಲ್ 1 ರಂದು ಬಸವ ಸಮಿತಿಯ ಕಚೇರಿಯಲ್ಲಿ ಭೇಟಿಯಾದರು.
ಈ ಸಂಧರ್ಭದಲ್ಲಿ ಸದ್ಭಾವನ ವೇದಿಕೆಯ ಮುಂದಿನ ಕಾರ್ಯಕ್ರಮಗಳು ಹಾಗೂ ಸರ್ವಧರ್ಮ ಗ್ರಂಥಗಳ ಸಂದೇಶ ಸಾರುವ ವಿಶೇಷ ಆನ್ಲೈನ್ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಬಗ್ಗೆ ಸುದೀರ್ಘ ಚರ್ಚೆ ನಡೆಸಲಾಯಿತು.
ಜಮಾಅತ್ ಪಿ.ಆರ್. ಮುಹಮ್ಮದ್ ನವಾಝ್ ಹಾಗೂ ಆಸ್ಟ್ರೇಲಿಯಾದಲ್ಲಿ ಬಸವ ತತ್ತ್ವಗಳ ಪ್ರಚಾರಕ ಶ್ರೀ ಸತೀಶ್ ರಾಜಶೇಖರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.












