ಜೈಪುರ: ಬಡಿಗೆಗಳ ಮೂಲಕ ಆತ್ಮ ರಕ್ಷಣಾ ತರಬೇತಿ ಪಡೆಯುತ್ತಿರುವ ಜೈನ ಸನ್ಯಾಸಿನಿಯರು

0
998

ಆರೆಸ್ಸೆಸ್ ನ ಅಂಗ ಸಂಸ್ಥೆಯಾದ ರಾಷ್ಟೀಯ  ಸೇವಿಕಾ  ಸಮಿತಿಯ ದೈಹಿಕ ತರಬೇತಿಯ ಅಧ್ಯಕ್ಷೆ   ಚಂಚಲ ಟೋಕ್ರವತ್ ಅವರು ಸೂರತ್ ನ  ಕೈಲಾಶ್ ನಗರದಲ್ಲಿರುವ  ಜೈನ್ ಉಪಶ್ರೇ (ಸನ್ಯಾಸಿಯ ನಿವಾಸ) ಯಲ್ಲಿ  40 ಜೈನ ಸಾಧ್ವಿಗಳಿಗೆ ಬಡಿಗೆಗಳನ್ನು ಹೇಗೆ ಬಳಸಬೇಕೆಂದು  ನಿರ್ದೇಶಿಸುತ್ತಾರೆ.

ಮಹಿಳಾ ಸನ್ಯಾಸಿಗಳ ಮೇಲೆ ಲೈಂಗಿಕ ಕಿರುಕುಳದ ಘಟನೆಗಳು ಹೆಚ್ಚಿದ ತರುವಾಯ ಕಳೆದ ಸೋಮವಾರದಿಂದ  ತರಬೇತಿಯನ್ನು ಪ್ರಾರಂಭಿಸಲಾಗಿದೆ.

“ಈ ಮೂಲಕ  ಮಹಿಳಾ ಸನ್ಯಾಸಿಗಳು ಆತ್ಮರಕ್ಷಣೆಯ ತರಬೇತಿ ಪಡೆಯುತ್ತಾರೆ, ಹಾಗಾಗಿ  ಅವರು ಯಾವುದೇ ಅನಿಶ್ಚಿತ ಪರಿಸ್ಥಿತಿಯಲ್ಲಿ ತಮ್ಮನ್ನು ರಕ್ಷಿಸಿಕೊಳ್ಳಬಹುದು” ಎಂದು 50 ವರ್ಷಗಳಿಂದ ಸನ್ಯಾಸಿನಿಯಾಗಿರುವ  ಜೈನ ಸಾಧ್ವಿಯೊಬ್ಬರು  ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದರು.

ಇಂತಹ  ತರಬೇತಿಯು  ಜೈನ ಧರ್ಮದ ಅಹಿಂಸೆಯ   ಬೋಧನೆಗಳಿಗೆ ವಿರೋಧವಾಗಿಲ್ಲವೇ ಎಂದು ಕೇಳಿದಾಗ,  25 ವರ್ಷ ವಯಸ್ಸಿನ ಸನ್ಯಾಸಿನಿಯೊಬ್ಬರು, “ಯಾವುದೇ ಜೀವಿಗೆ ಹಾನಿ  ಮಾಡಬಾರದೆಂದು ನಮ್ಮ ಧರ್ಮವು  ನಮಗೆ ಕಲಿಸುತ್ತದೆ, . ಆದರೆ ಇದಲ್ಲದೆ, ನಮ್ಮ ಧರ್ಮ ನಮ್ಮನ್ನು ಸಹ  ಅಪಾಯದಿಂದ ರಕ್ಷಿಸಲು  ಕಲಿಸುತ್ತದೆ. ಈ ತರಬೇತಿಯ ಮೂಲಕ, ನಾವು ನಮ್ಮ ಕೈಗಳಲ್ಲಿರುವ ಬಡಿಗೆಗಳಿಂದ  ನಮ್ಮನ್ನು ರಕ್ಷಿಸಿಕೊಳ್ಳಬಹುದು. ಇದು ನಮಗೆ ಸಹಾಯ ಮಾಡುತ್ತದೆ ಮತ್ತು ನನ್ನ ಅಭಿಪ್ರಾಯದಲ್ಲಿ ಪ್ರತಿ ಸಾಧ್ವಿ ಇಂತಹ ತರಬೇತಿಯನ್ನು ತೆಗೆದುಕೊಳ್ಳಬೇಕು.  ಆದ್ದರಿಂದ ಅವರು ದೈಹಿಕವಾಗಿ ಪ್ರಬಲರಾಗಬಹುದು ಮತ್ತು ಅನಿವಾರ್ಯ ಸಂದರ್ಭಗಳಲ್ಲಿ ನಮ್ಮನ್ನು ನಾವು ರಕ್ಸಿಸಿಕೊಳ್ಳಬಹುದು” ಎಂದು ಹೇಳಿದರು.

ಸೂರತ್ ನ  ಜೀವನ್ ಕಲ್ಯಾಣ್ ಟ್ರಸ್ಟ್ ನ ಅಧ್ಯಕ್ಷರಾದ ಆಶಿತ್ ಗಾಂಧಿ ಅವರು ಜೈನ್ ಸಾಧ್ವಿಗಳಿಗೆ ತರಬೇತಿ ನೀಡಲು ಟೋಕ್ರಾವತ್ ರನ್ನು  ಸಂಪರ್ಕಿಸಿದ್ದರು.

“ಗೋಪೀಪುರದ ಘಟನೆಯ ನಂತರ, ನಮ್ಮ ಮುಖ್ಯ ಗುರುಗಳನ್ನು  ನಾನು ಸಂಪರ್ಕಿಸಿದೆ  ಮತ್ತು ಮಹಿಳಾ ಸನ್ಯಾಸಿಗಳು ಆತ್ಮರಕ್ಷಣೆಯ  ತರಬೇತಿ ಪಡೆಯುವುದಕ್ಕಾಗಿ ಜೈನ ಮುಖ್ಯ ಅರ್ಚಕರಿಂದ ಅನುಮತಿ ಪಡೆದೆ. ಅಂತಿಮವಾಗಿ, ಸಾದ್ವಿಯರೊಂದಿಗೆ  ಮಾತನಾಡಿದೆ.  ಅವರು ತರಬೇತಿ ಪಡೆಯಲು ಒಪ್ಪಿಕೊಂಡರು” ಎಂದು ಗಾಂಧಿ ಹೇಳಿದರು.

ಟೋಕ್ರಾವತ್ ರು ಇತರ ಮೂರು ಮಹಿಳಾ ಸಹಾಯಕರೊಂದಿಗೆ ಸೇರಿ ವಾರದಲ್ಲಿ ಮೂರುದಿನ ಎರಡು ಗಂಟೆಗಳ  ತರಬೇತಿ ನೀಡುತ್ತಾರೆ . ತರಬೇತಿ ಮೂರು ತಿಂಗಳ ಕಾಲ ಇರುತ್ತದೆ. “ಬಡಿಗೆಗಳೊಂದಿಗೆ ಮತ್ತು ತಮ್ಮ ಕೈ ಮತ್ತು ಕಾಲುಗಳ ಸಹಾಯದಿಂದ ಹೇಗೆ ಆತ್ಮ ರಕ್ಷಣೆ ಮಾಡಬೇಕೆಂದು ನಾವು ಅವರಿಗೆ ಕಳಿಸುತ್ತೇವೆ.  ಅವರನ್ನು ಮಾನಸಿಕವಾಗಿ ಮತ್ತು ದೈಹಿಕವಾಗಿ ಪ್ರಬಲಗೊಳಿಸಬೇಕೆಂದು ಬಯಸುತ್ತೇವೆ. ನನ್ನ ಬಾಲ್ಯದಿಂದಲೇ, ನಾನು ರಾಷ್ಟ್ರೀಯ  ಸೇವಿಕಾ ಸಮಿತಿಯೊಂದಿಗೆ ಸಂಬಂಧ ಹೊಂದಿದ್ದೇನೆ ಮತ್ತು ಆತ್ಮರಕ್ಷಣೆ ತರಬೇತಿಯನ್ನು ಪಡೆಯುತ್ತಿದ್ದೇನೆ. ಕಳೆದ ಕೆಲವು ವರ್ಷಗಳಿಂದ  ನಾನು ಮಹಿಳೆಯರಿಗೆ ಸ್ವರಕ್ಷಣೆ ತರಬೇತಿಯನ್ನು ನೀಡುತ್ತಿದ್ದೇನೆ ” ಎಂದು ಜೈನ ಧರ್ಮೀಯರಾಗಿರುವ ಟೋಕ್ರವತ್ ಹೇಳಿದರು.

(ಸಂಕ್ಷಿಪ್ತಾನುವಾದ)
ಕನ್ನಡಕ್ಕೆ: ಆಯಿಷತುಲ್ ಅಫೀಫ
ಕೃಪೆ: ದಿ ಇಂಡಿಯನ್ ಎಕ್ಸ್‌ಪ್ರೆಸ್‌