ನಾಳೆ ಮಂಗಳೂರಿನಲ್ಲಿ ಸೀರತ್ ‘ವಿಚಾರಗೋಷ್ಠಿ’

0
1014

ಮಂಗಳೂರು: ನವೆಂಬರ್ 16ರಿಂದ 30ರ ತನಕ ರಾಜ್ಯಾದ್ಯಂತ ‘ಪ್ರವಾದಿ ಮುಹಮ್ಮದ್(ಸ) ಮಾನವ ಕುಲದ ಶ್ರೇಷ್ಠ ಮಾರ್ಗದರ್ಶಕ’ ಎಂಬ ವಿಷಯದಲ್ಲಿ ನಡೆಸುತ್ತಿರುವ ಸೀರತ್ ಅಭಿಯಾನದ ಪ್ರಯುಕ್ತ ದ.ಕ. ಜಿಲ್ಲಾ ಸ್ವಾಗತ ಸಮಿತಿಯ ವತಿಯಿಂದ ನಾಳೆ (ನವೆಂಬರ್ 28, ಬುಧವಾರ) ಸಂಜೆ 5.00 ಗಂಟೆಗೆ ನಗರದ ಪುರಭವನದಲ್ಲಿ ‘ಸಮಾಜ ಸುಧಾರಣೆ ಪ್ರವಾದಿ ಮುಹಮ್ಮದ್(ಸ)ರ ಶಿಕ್ಷಣದ ಬೆಳಕಿನಲ್ಲಿ’ ಎಂಬ ವಿಷಯದಲ್ಲಿ ವಿಚಾರಗೋಷ್ಠಿಯನ್ನು ಆಯೋಜಿಸಲಾಗಿದೆ.

 

ಅತಿಥಿಗಳಾಗಿ ಉತ್ತರ ಪ್ರದೇಶ ಲಕ್ನೋದ ಶ್ರೀ ಶಂಕರಾಚಾರ್ಯ ಸ್ವಾಮೀಜಿಗಳು, ಜಮಾಅತೆ ಇಸ್ಲಾಮೀ ಹಿಂದ್ ರಾಷ್ಟ್ರೀಯ ಕಾರ್ಯದರ್ಶಿ ಮೌಲಾನಾ ಮುಹಮ್ಮದ್ ಇಕ್ಬಾಲ್ ಮುಲ್ಲಾ, ಖ್ಯಾತ ಕಾದಂಬರಿಕಾರರಾದ ಶ್ರೀ ಕುಂ. ವೀರಭದ್ರಪ್ಪ, ‘ಪ್ರಜಾವಾಣಿ’ ದೈನಿಕದ ಹಿರಿಯ ಉಪ ಸಂಪಾದಕರಾದ ಬಿ.ಎಂ. ಹನೀಫ್, ಶಾಂತಿ ಪ್ರಕಾಶನದ ಅಧ್ಯಕ್ಷರಾದ ಜ| ಮುಹಮ್ಮದ್ ಅತ್ಹರುಲ್ಲಾ ಶರೀಫ್, ಮಂಗಳೂರು ವಿ.ವಿ. ಕನ್ನಡ ಪ್ರಾಧ್ಯಾಪಕರಾದ ಪ್ರೊ| ಬಿ. ಶಿವರಾಮ ಶೆಟ್ಟಿ ಮುಂತಾದ ಗಣ್ಯರು ಭಾಗವಹಿಸಲಿದ್ದಾರೆ.

ಶಾಂತಿ ಪ್ರಕಾಶನದ ವ್ಯವಸ್ಥಾಪಕರಾದ ಮುಹಮ್ಮದ್ ಕುಂಞಿ ವಿಚಾರ ಮಂಡನೆ ನಡೆಸಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೀರತ್ ಕಮಿಟಿಯ ಅಧ್ಯಕ್ಷರಾದ ಡಾ| ಸಿ.ಪಿ. ಹಬೀಬ್ ರಹ್ಮಾನ್ ವಹಿಸಲಿದ್ದಾರೆ ಎಂದು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.