ಜಮಾಅತೆ ಇಸ್ಲಾಮೀ ಹಿಂದ್ ರಾಷ್ಟ್ರೀಯ ಅಧ್ಯಕ್ಷರಿಂದ ಈದ್ ಸಂದೇಶ

0
194

ಸನ್ಮಾರ್ಗ ವಾರ್ತೆ

ನವದೆಹಲಿ: ಜಮಾಅತೆ ಇಸ್ಲಾಮಿ ಹಿಂದ್ ರಾಷ್ಟ್ರೀಯ ಅಧ್ಯಕ್ಷರಾದ ಸೈಯದ್ ಸಾದತುಲ್ಲಾ ಹುಸೇನಿಯವರು ಈದ್-ಉಲ್-ಅಝ್ಹಾ ಸಂದರ್ಭದಲ್ಲಿ ಮುಸ್ಲಿಮರು ಮತ್ತು ಎಲ್ಲಾ ದೇಶವಾಸಿಗಳಿಗೆ ಶುಭಾಶಯ ಕೋರಿದ್ದಾರೆ.

ಈದ್ ಉಲ್ ಅಝ್ಹಾ ಸಂದರ್ಭದಲ್ಲಿ ಮುಸ್ಲಿಮರಿಗೆ ಮತ್ತು ಎಲ್ಲಾ ದೇಶವಾಸಿಗಳಿಗೆ ಶುಭಾಶಯಗಳನ್ನು ಸಲ್ಲಿಸುತ್ತೇನೆ. ಪ್ರವಾದಿ ಇಬ್ರಾಹಿಂ (ಅ.) ಮತ್ತು ಪ್ರವಾದಿ ಇಸ್ಮಾಯಿಲ್(ಸ) ಅಲ್ಲಾಹನ ಮೇಲಿನ ಪ್ರೀತಿಯನ್ನು ನೆನಪಿಟ್ಟುಕೊಳ್ಳಲು ಪ್ರಪಂಚದಾದ್ಯಂತದ ಮುಸ್ಲಿಮರು ಈದ್ ಉಲ್ ಅಝ್ಹಾ ದಿನವನ್ನು ಆಚರಿಸುತ್ತಾರೆ‌. ಅಲ್ಲಾಹನ ಸಂಪ್ರೀತಿ ಮತ್ತು ಕೃಪೆ ಪಡೆಯುವ ಸಲುವಾಗಿ ಸರ್ವರೀತಿಯ ತ್ಯಾಗವನ್ನು ಮಾಡಲು ಸಿದ್ಧರಾಗುತ್ತಾರೆ. ಈ ಬ್ರಹ್ಮಾಂಡದ ಸೃಷ್ಟಿಕರ್ತನಿಗೆ ಸಂಪೂರ್ಣ ಶರಣಾಗತಿ ಮತ್ತು ಸಮರ್ಪಣೆ, ತತ್ವಗಳಿಗೆ ಬಲವಾದ ಬದ್ಧತೆ ಮತ್ತು ಆ ತತ್ವಗಳಿಗಾಗಿ ಎಲ್ಲವನ್ನೂ ತ್ಯಾಗ ಮಾಡಲು ನಡೆಸುವ ಸಿದ್ಧತೆಯು ಈದ್ ಉಲ್ ಅಝ್ಹಾ ಸಾರುವ ಪ್ರಮುಖ ಸಂದೇಶವಾಗಿದೆ.

ಈ ದೃಢತೆ ಮತ್ತು ಸಮರ್ಪಣಾ ಮನೋಭಾವವು ಮಾನವನ ಗುಣದ ಪ್ರತಿರೂಪವಾಗಿದೆ ಮತ್ತು ಈ ಗುಣವು ಮಾನವನ ಯಶಸ್ಸಿನ ಮೂಲಭೂತ ಅಂಶವಾಗಿದೆ. ಮುಸ್ಲಿಮರು ಈ ಉದಾತ್ತ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ಮತ್ತು ಅನುಕರಿಸಲು ಪ್ರಯತ್ನಿಸುತ್ತಾರೆ. ಆ ಸೃಷ್ಟಿಕರ್ತನು ನಮ್ಮ ದೇಶವನ್ನು ಶಾಂತಿ ಮತ್ತು ಸಮೃದ್ಧಿಯಿಂದ ಆಶೀರ್ವದಿಸಲಿ. ಆದರ್ಶ ಮತ್ತು ನ್ಯಾಯಯುತ ಸಮಾಜದ ಕಡೆಗೆ ನಮ್ಮ ಪ್ರಯಾಣದಲ್ಲಿ ಬಲವಾಗಿ ಮತ್ತು ಒಗ್ಗಟ್ಟಿನಿಂದ ಉಳಿಯಲು ಅನುಗ್ರಹವನ್ನು ನೀಡಲಿ ದೇವರನ್ನು ಪ್ರಾರ್ಥಿಸುತ್ತೇನೆ ಎಂದು ಅವರು ತಮ್ಮ ‌ಈದ್ ಸಂದೇಶದಲ್ಲಿ ತಿಳಿಸಿದ್ದಾರೆ.