ಹಲ್ದ್ವಾನಿಗೆ ಭೇಟಿ ನೀಡಿದ ಜಮಾಅತೆ ಇಸ್ಲಾಮೀ ಹಿಂದ್ ನಿಯೋಗ

0
1324

ಸನ್ಮಾರ್ಗ ವಾರ್ತೆ

ಹಲ್ದ್ವಾನಿ: ಉತ್ತರಾಖಂಡದ ಹಲ್ದ್ವಾನಿಗೆ ಭೇಟಿ ನೀಡಿರುವ ಜಮಾಅತೆ ಇಸ್ಲಾಮಿ ಹಿಂದ್ ಮತ್ತು ಜಮೀಯತೆ ಉಲಮಾಯೇ ಹಿಂದ್ ನ ಮುಖಂಡರ ನಿಯೋಗವು ಅಲ್ಲಿನ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದೆ.

ಶಂಕೆಯ ಹೆಸರಲ್ಲಿ ಮನಬಂದಂತೆ ಬಂಧಿಸುವುದನ್ನು ನಿಲ್ಲಿಸುವಂತೆ ಕೋರಿಕೊಂಡಿರುವ ನಿಯೋಗವು ಕರ್ಫ್ಯೂವನ್ನು ಸಡಿಲಿಸುವಂತೆ ಮತ್ತು ಜನಸಾಮಾನ್ಯರು ಅಗತ್ಯ ವಸ್ತುಗಳನ್ನು ಖರೀದಿಸುವುದಕ್ಕೆ ಪೂರಕ ವಾತಾವರಣವನ್ನು ನಿರ್ಮಿಸುವಂತೆ ಕೋರಿದೆ.

ಹಲ್ದ್ವಾನಿ ಜಿಲ್ಲಾಧಿಕಾರಿ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳನ್ನು ಭೇಟಿಯಾಗಿ ನಿಯೋಗ ಚರ್ಚಿಸಿದೆ. ಪೊಲೀಸರು ಗುಂಡು ಹಾರಿಸಿ, ಐವರ ಪ್ರಾಣಾಹುತಿಗೆ ಕಾರಣವಾದದ್ದು, ಹಲವು ಮಂದಿ ಗಾಯಗೊಂಡದ್ದು ಮತ್ತು ಅನೇಕರ ಮೇಲೆ ಎಫ್ ಐಆರ್ ದಾಖಲಿಸಿದ ಬಗ್ಗೆ ನಿಯೋಗ ಆತಂಕ ವ್ಯಕ್ತಪಡಿಸಿದೆ. ಹಾಗೆಯೇ ಪೊಲೀಸರು ಮತ್ತು ಪೊಲೀಸ್ ಠಾಣೆಯ ವಿರುದ್ಧ ನಡೆದ ದಾಳಿಗೂ ಬೇಸರ ವ್ಯಕ್ತಪಡಿಸಿದೆ.

ನಿಯೋಗದಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ನ ಉಪಾಧ್ಯಕ್ಷ ಮಲಿಕ್ ಮುಹ್ ತಸಿಂ ಖಾನ್, ಜಮೀಯತೆ ಉಲಮಾಯೆ ಹಿಂದ್ ನ ಪ್ರಧಾನ ಕಾರ್ಯದರ್ಶಿ ಮೌಲಾನ ಹಕಿಮುದ್ದೀನ್ ಕಾಸ್ಮಿ, ಜಮಾಅತೆ ಇಸ್ಲಾಮಿ ಹಿಂದ್ ರಾಷ್ಟ್ರೀಯ ಕಾರ್ಯದರ್ಶಿ ಮೌಲಾನ ಶಫಿ ಮದನಿ ಮತ್ತು ಜಮಾಅತೆ ಇಸ್ಲಾಮಿ ಹಿಂದ್ ನ ರಾಷ್ಟ್ರೀಯ ಸಹ ಕಾರ್ಯದರ್ಶಿ ಲಯೀಕ್ ಅಹಮದ್ ಖಾನ್ ಇದ್ದರು.

LEAVE A REPLY

Please enter your comment!
Please enter your name here