ಜಮಾಅತೆ ಇಸ್ಲಾಮಿ ಹಿಂದ್ ಸಮ್ಮೇಳನದಲ್ಲಿ ಭಾಗವಹಿಸಿ ಅಚ್ಚರಿ ವ್ಯಕ್ತಪಡಿಸಿದ್ದ ನಯ್ಯರ್

0
867

 

ಏ ಕೆ ಕುಕ್ಕಿಲ

1981 ರಲ್ಲಿ ಹೈದರಾಬಾದ್ ನಲ್ಲಿ ನಡೆದ ಜಮಾಅತೆ ಇಸ್ಲಾಮಿ ಹಿಂದ್ ನ ಅಖಿಲ ಭಾರತ ಸಮ್ಮೇಳನದಲ್ಲಿ ಭಾಗವಹಿಸಿದ ಕುಲದೀಪ್ ನಯ್ಯರ್ ಅವರು ಸೇರಿದ ಜನಸ್ತೋಮವನ್ನು ಕಂಡು ಅಚ್ಚರಿಪಟ್ಟಿದ್ದರು. ಮಾತ್ರವಲ್ಲ ತನ್ನ ಪಕ್ಕವೇ ಇದ್ದ ದಾವತ್ ಎಂಬ ಉರ್ದು ಪತ್ರಿಕೆಯ ಸಂಪಾದಕ ಮುಹಮ್ಮದ್ ಮುಸ್ಲಿಂ ಅವರ ಜೊತೆ ಅದನ್ನು ಹಂಚಿಕೊಂಡೂ ಇದ್ದರು. ಆಗ ಮುಸ್ಲಿಂ ಅವರು ನಯ್ಯರ್ ಅವರಿಗೆ ನಯವಾಗಿ ಮರುಪ್ರಶ್ನೆಯೊಂದನ್ನು ಹಾಕಿದ್ದರು:
ಸರ್, ಆದರೂ ನಿಮ್ಮ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯು ಈ ಸಮ್ಮೇಳನದ ಬಗ್ಗೆ ಸಣ್ಣ ಸುದ್ದಿಯನ್ನೂ ಪ್ರಕಟಿಸಲಿಲ್ಲವಲ್ಲ, ಯಾಕೆ?

ಆಗ ನಯ್ಯರ್ ಮಾತಾಡಿರಲಿಲ್ಲ. ಆದರೆ, ಮರುದಿನದಿಂದ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯು ಈ ಸಮ್ಮೇಳನದ ಬಗ್ಗೆ ವಿವರವಾದ ವರದಿಯನ್ನು ಮುಂದಿನ ನಾಲ್ಕು ದಿನಗಳವರೆಗೆ ನಿರಂತರ ಪ್ರಕಟಿಸಿತು. ಆ ಬಳಿಕ ಮುಖ್ಯವಾಹಿನಿಯ ಉಳಿದ ಪ್ರಮುಖ ಪತ್ರಿಕೆಗಳೂ ಸಮ್ಮೇಳನದ ಸುದ್ದಿಯನ್ನು ಮಹತ್ವಕೊಟ್ಟು ಪ್ರಕಟಿಸಿದುವು… ಎಂದು ದುನಿಯಾ ಪತ್ರಿಕೆಯ ಸಂಪಾದಕ ಏ ಯು ಆಸಿಫ್ ಸ್ಮರಿಸಿಕೊಂಡಿದ್ದಾರೆ.
ಪ್ರಮಾದವನ್ನು ಒಪ್ಪಿಕೊಳ್ಳುವ ಮತ್ತು ತಿದ್ದಿಕೊಳ್ಳಲು ಮುಜುಗರಪಡದ ಸಹೃದಯ ಕುಲದೀಪ್ ನಯ್ಯರ್ ಅವರಿಗಿತ್ತು. ಇವತ್ತಿನ ಹೆಚ್ಚಿನ ಸಂಪಾದಕರು ಮತ್ತು ಪತ್ರಕರ್ತರಲ್ಲಿ ಇಲ್ಲದಿರುವುದೇ ಇದು.

ಕುಲದೀಪ್ ನಯ್ಯರ್ ರಿಗೆ ಒಳಿತಾಗಲಿ. ಅವರ ಪರಲೋಕ ಜೀವನ ಸುಖವಾಗಿರಲಿ.