ನೆರೆ ಪೀಡಿತರ ಸೇವೆಯಲ್ಲಿ ನಿರತರಾದ ಜಮಾಅತೆ ಇಸ್ಲಾಮಿ ಕರ್ನಾಟಕದ ಕಾರ್ಯಕರ್ತರು: ಚರ್ಚ್ ಗೆ ಹೊಳಪು ಕೊಟ್ಟರು, ಮನೆ ಸ್ವಚ್ಛಗೊಳಿಸಿದರು.. 

0
754

ಜಮಾಅತೆ ಇಸ್ಲಾಮಿ ಹಿಂದ್ ಕರ್ನಾಟಕದ ಸಮಾಜ ಸೇವಾ ವಿಭಾಗವಾದ ಹೆಚ್ ಆರ್ ಎಸ್ (ಹ್ಯುಮಾನಿಟೇರಿಯನ್ ರಿಲೀಫ್ ಸೊಸೈಟಿ) ಸ್ವಯಂ ಸೇವಕರು ನೆರೆ ಪೀಡಿತ ಕೇರಳದ ಪುನರ್ ವಸತಿ ಕಾರ್ಯಗಳಲ್ಲಿ ತೊಡಗಿಕೊಂಡಿದ್ದು, ಈಗಾಗಲೇ ಅಲ್ಲಿ ನಡೆಯುತ್ತಿರುವ ಸೇವಾ ಕಾರ್ಯಗಳಿಗೆ ಬಲ ತುಂಬಿದ್ದಾರೆ. ಹೆಚ್ ಆರ್ ಎಸ್ ನ 60 ಸದಸ್ಯರ ಮೊದಲ ತಂಡ ಆಗಸ್ಟ್ 24 ರಂದು ಮಂಗಳೂರಿಂದ ಹೊರಟು ಕೇರಳ ತಲುಪಿದೆ. ಕೇರಳ ಜಮಾಅತೆ ಇಸ್ಲಾಮಿಯ ಸೇವಾ ವಿಭಾಗವಾದ ಐ ಆರ್ ಡಬ್ಲ್ಯೂ ನ ಜೊತೆ ಸೇರಿ ಈ ತಂಡ ಕಾರ್ಯ ತತ್ಪರವಾಗಿದ್ದು, ಹತ್ತು ದಿನಗಳ ಬಳಿಕ ಇನ್ನೊಂದು ತಂಡ ಕರ್ನಾಟಕದಿಂದ ಹೊರಡಲಿರುವುದು ಎಂದು ಮೂಲಗಳು ತಿಳಿಸಿವೆ. ಇದೆ ವೇಳೆ ಐ ಆರ್ ಡಬ್ಲ್ಯೂ ನ ಕಾರ್ಯಕರ್ತರು ಚರ್ಚ್ ಶುಚಿಗೊಳಿಸಿದ ಪ್ರಕರಣವು ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದ್ದು, ಸೌಹಾರ್ದಕ್ಕೆ ಮಾದರಿಯಾಗಿ ಬಿಂಬಿಸಲಾಗಿದೆ. ಪ್ರವಾಹದಿಂದ ತೀವ್ರವಾಗಿ ಹಾನಿಗೀಡಾದ ಇಡುಕ್ಕಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು ಶುಕ್ರವಾರದ ಜುಮಾ ನಮಾಜ್ ನಿರ್ವಹಿಸಲು ಕ್ರೈಸ್ತರು ಚರ್ಚ್ ನಲ್ಲಿ ಈ ಕಾರ್ಯಕರ್ತರಿಗೆ ಸ್ಥಳಾವಕಾಶ ಒದಗಿಸಿಕೊಟ್ಟರು ಎಂದು ವರದಿಗಳು ತಿಳಿಸಿವೆ. ಇಲ್ಲಿ 50 ಮನೆಗಳನ್ನು ಈ ಕಾರ್ಯಕರ್ತರು ಶುಚಿಗೊಳಿಸಿದರು.
ಇದೇವೇಳೆ, ಜಮಾಅತ್ ನ ಸ್ವಯಂ ಸೇವಕರ ಒಂದು ತಂಡವು ಕೊಡಗಿನ ಮಡಿಕೇರಿ ಮತ್ತಿತರ ನೆರೆ ಪೀಡಿತ ಪ್ರದೇಶಗಳಲ್ಲಿ ಸಕ್ರಿಯವಾಗಿದ್ದು, ಮುಖ್ಯವಾಗಿ ಮನೆ ಸ್ವಚ್ಛ ಗೊಳಿಸುವ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ.