ವಿದ್ಯಾರ್ಥಿಗಳ ಬೇಡಿಕೆ ಒಪ್ಪಿಗೆ; ಪ್ರತಿಭಟನೆ ಮುಕ್ತಾಯಗೊಳಿಸಿದ ಜಾಮೀಯ ಮಿಲ್ಲಿಯ ವಿದ್ಯಾರ್ಥಿಗಳು

0
415

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಅ.24: ಜಾಮಿಯ ಮಿಲ್ಲಿಯಾ ಇಸ್ಲಾಮಿಯ ಕೇಂದ್ರ ವಿಶ್ವವಿದ್ಯಾನಿಲಯದ ಉಪಕುಲಪತಿ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಿ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆ ಮುಕ್ತಾಯವಾಗಿದೆ. ವಿದ್ಯಾರ್ಥಿಗಳ ಬೇಡಿಕೆಗೆ ಅಂಗೀಕಾರ ನೀಡಲು ವಿಶ್ವವಿದ್ಯಾನಿಲಯದ ಆಡಳಿತ ಒಪ್ಪಿಕೊಂಡಿದ್ದರಿಂದ ಪ್ರತಿಭಟನೆ ಕೊನೆಗೊಂಡಿದೆ.

ಬುಧವಾರ ರಾತ್ರೆಯವರೆಗೆ ಸಾವಿರದಷ್ಟು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದರು. ವಿಶ್ವವಿದ್ಯಾನಿಲಯದ ಎಲ್ಲ ವಿದ್ಯಾರ್ಥಿಗಳು ಕ್ಲಾಸು ತೊರೆದು ಕ್ಯಾಂಪಸ್‍ನಲ್ಲಿ ಧರಣಿ ನಡೆಸುತ್ತಿದ್ದರು. ನಂತರ ವಿಶ್ವವಿದ್ಯಾನಿಲಯದ ಅಧಿಕಾರಿಗಳು ಚರ್ಚೆಗೆ ಮುಂದಾದರು.

ವಿದ್ಯಾರ್ಥಿಗಳನ್ನು ಬೆಂಬಲಿಸಿ ಬುಧವಾರ ಟಿಎನ್ ಪ್ರತಾಪನ್ ಕ್ಯಾಂಪಸ್‍ಗೆ ಭೇಟಿ ನೀಡಿದ್ದರು. ವಿರೋಧಿ ಧ್ವನಿಗಳನ್ನು ದಮನಿಸುವ ಅಧಿಕಾರಿಗಳ ವರ್ತನೆಯನ್ನು ಅವರು ಖಂಡಿಸಿದ್ದಾರೆ. ನಿನ್ನೆ ಕೆಲವು ದುಷ್ಕರ್ಮಿಗಳು ಕ್ಯಾಂಪಸ್‍ಗೆ ಪ್ರವೇಶಿಸಿ ವಿದ್ಯಾರ್ಥಿನಿಯರ ಸಹಿತ ವಿದ್ಯಾರ್ಥಿಗಳಿಗೆ ಹಲ್ಲೆ ನಡೆಸಿದ್ದಾರೆ.

ಇದೇ ವೇಳೆ, ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಂಘದ ಚುನಾವಣೆ ನಡೆಸಬೇಕೆಂದು ಎಸ್‍ಐಒ ಆಗ್ರಹಿಸಿದೆ. ವಿದ್ಯಾರ್ಥಿಗಳ ಸಮಸ್ಯೆ ಪರಿಹರಿಸಲು ವಿದ್ಯಾರ್ಥಿ ಸಂಘ ಅಗತ್ಯವಾಗಿದೆ. ಸಮಸ್ಯೆ ಪರಿಹರಿಸಲು ಅಧಿಕಾರಿಗಳು ಮುಂದೆ ಬರದಿದ್ದರೆ ಬಲವಾದ ಹೋರಾಟ ನಡೆಸಲಾಗುವುದು ಎಂದು ಎಸ್‍ಐಒ ಪ್ರಧಾನ ಕಾರ್ಯದರ್ಶಿ ಸಯ್ಯಿದ್ ಅಝರುದ್ದೀನ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.