ಜಾತಿ- ಧರ್ಮ ಶಕ್ತಿಗಳ ವಿರುದ್ಧ ತೀರ್ಪು: ಸಿಪಿಎಂ

0
732

ಸನ್ಮಾರ್ಗ ವಾರ್ತೆ

ತಿರುವನಂತಪುರಂ,ಅ.24: ಚುನಾವಣೆ ರಾಜಕೀಯದಲ್ಲಿ ಜಾತಿ-ಧರ್ಮ ಶಕ್ತಿಗಳ ಹಸ್ತಕ್ಷೇಪದ ವಿರುದ್ಧ ಐದು ವಿಧಾನಸಭಾ ಉಪಚುನಾವಣೆಯಲ್ಲಿ ಜನರು ತೀರ್ಪು ನೀಡಿದ್ದಾರೆ ಎಂದು ಸಿಪಿಎಂ ಕೇರಳ ಪ್ರಧಾನ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ ಹೇಳಿದ್ದಾರೆ.

ಎಲ್‍ಡಿಎಫ್‍ಗೆ ಭರ್ಜರಿ ಜಯ ಸಿಕ್ಕಿದೆ. ಎನ್‍ಎಸ್‍ಎಸ್ ಜಾತಿ ಧ್ರುವೀಕರಣಕ್ಕೆ ಯತ್ನಿಸಿತ್ತು ಎಂದು ಕೊಡಿಯೇರಿ ಹೇಳಿದರು. ಬಿಜೆಪಿಗೆ ದೊಡ್ಡ ಮಟ್ಟದ ಹಿನ್ನಡೆಯಾಗಿದೆ. ಅರೂರಿನಲ್ಲಿ ಸೋಲು ಯಾಕೆ ಆಯಿತು ಎಂದು ಪಾರ್ಟಿ ಪರಿಶೀಲನೆ ನಡೆಸಲಿದೆ.

ರಾಜ್ಯ ಸರಕಾರದ ಜವಾಬ್ದಾರಿಯನ್ನು ಈ ಉಪಚುನಾವಣೆ ಹೆಚ್ಚಿಸಿದೆ ಎಂದು ಬಾಲಕೃಷ್ಣನ್ ಅಭಿಪ್ರಾಯ ವ್ಯಕ್ತಪಡಿಸಿದರು. ಗೆಲುವಿನಲ್ಲಿ ಎಲ್‍ಡಿಎಫ್ ಸಂಯಮದಿಂದ ವರ್ತಿಸಬೇಕೆಂದು ಅವರು ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. ಪಾರ್ಟಿಯ ಕಚೇರಿ ಮುಂದೆ ವಿಜಯಾಚರಣೆ ಮಾಡಬಾರದೆಂದು ಅವರು ಮನವಿ ಮಾಡಿದ್ದಾರೆ.

ಕೇರಳದ ಉಪಚುನಾವಣೆಯಲ್ಲಿ ಎಲ್‍ಡಿಎಫ್ ಎರಡು ಸ್ಥಾನ ಮತ್ತು ಯುಡಿಎಫ್ ಮೂರು ಸ್ಥಾನಗಳಿಸಿದೆ. ಬಿಜೆಪಿ ಯಾವುದೇ ಸ್ಥಾನಗಳನ್ನು ಗಳಿಸಲು ಸಫಲವಾಗಿಲ್ಲ.