ಹೊಸದಿಲ್ಲಿ,ಅ.28: ಹೊಸದಿಲ್ಲಿಯ ಜಾಮಿಯ ಮಿಲ್ಲಿಯ ವಿದ್ಯಾರ್ಥಿಗಳು ಇಸ್ರೇಲಿನ ಪ್ರತಿನಿಧಿಗಳ ವಿರುದ್ಧ ಪ್ರತಿಭಟನೆ ನಡೆಸಿದ್ದು ವಿಶ್ವವಿದ್ಯಾನಿಲಯದ ಕ್ಯಾಂಪಸ್ನ ಒಳಗೆ ಬರದಂತೆ ತಡೆದಿದ್ದಾರೆ. ವರದಿಯಾಗಿರುವ ಪ್ರಕಾರ ಜಾಮಿಯ ಮಿಲ್ಲಿಯ ವಿದ್ಯಾರ್ಥಿಗಳು ವಿಶ್ವವಿದ್ಯಾನಿಲಯ ಕಾರ್ಯಕ್ರಮಕ್ಕೆ ಇಸ್ರೇಲಿನ ಪ್ರತಿನಿಧಿಗಳಿಗೆ ಆಹ್ವಾನ ನೀಡಿದ್ದರ ವಿರುದ್ಧ ಕಳೆದ ಒಂಬತ್ತು ದಿವಸಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.
ವಿಶ್ವವಿದ್ಯಾನಿಲಯ ಆಡಳಿತ ವಿದ್ಯಾರ್ಥಿಗಳ ವಿರೋಧ ಕುರಿತು ಪ್ರತಿಕ್ರಿಯೆ ನೀಡಿದ್ದು ಯಾವುದೇ ಕಾರ್ಯಕ್ರಮದಲ್ಲಿ ಇಸ್ರೇಲಿನ ಪ್ರತಿನಿಧಿಗಳಿಗೆ ಭಾಗವಹಿಸಲು ಅವಕಾಶ ನೀಡಲಾಗದು ಎಂದು ತಿಳಿಸಿತು. ಭಾರತೀಯ ಮುಸ್ಲಿಮರು ಮತ್ತು ಜಾಮಿಯ ಮಿಲ್ಲಿಯ ಝಿಯೊನಿಸ್ಟ್ ಪ್ರತಿನಿಧಿಗಳನ್ನು ಮುಸ್ಲಿಮರ ವಿರೋಧಿಗಳು ಎಂದು ಭಾವಿಸಿದೆ.ಇಸ್ರೇಲ್ ಫೆಲಸ್ತೀನಿಯರ ನರಹತ್ಯೆ ಮಾಡುತ್ತಿದ್ದೆ. ಮತ್ತು ಅದರ ಅಪರಾಧದ ವಿರುದ್ಧ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.












