ಕಾಶ್ಮೀರ ವಿಧಿ 370ನ್ನು ಮೃತದೇಹಕ್ಕೆ ಹೋಲಿಸಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ!

0
584

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಅ.28: ಜಮ್ಮು-ಕಾಶ್ಮೀರದ 370ನೆ ವಿಧಿಯ ಕುರಿತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮೃತದೇಹ ಎಂದು ವರ್ಣಿಸಿದ್ದಾರೆ. ಅದು ಹೋಯಿತು ಇನ್ನು ಬರುವುದಿಲ್ಲ ಎಂದು ಅವರು ಹೇಳಿದರು. ನಿಮಗೆ ಶೋಕಾಚರಣೆ ಮಾಡಬೇಕಲ್ಲ. ಮೃತದೇಹವನ್ನು ಇಟ್ಟು ಹತ್ತು, ಹನ್ನೊಂದು ದಿನ ಆಚರಣೆ ಮಾಡಬಹುದು. ಆದರೆ ಸತ್ತ ಹೆಣ ಸತ್ತದ್ದೇ. ಅದು ಮರಳಿ ಬರುವುದಿಲ್ಲ. 370ನೆ ವಿಧಿ ತೆರವಾಗಿದೆ; ಇನ್ನೆಂದೂ ಅದು ಮರಳಿ ಬಾರದು ಎಂದು ರಾಮ್ ಮಾಧವ್ ಹೇಳಿದರು.

ಡಾ.ಶ್ಯಾಮ್ ಪ್ರಸಾದ್ ಮುಖರ್ಜಿ ನ್ಯಾಸ ಜಮ್ಮು ಇದರ ಸಹಯೋಗದಲ್ಲಿ ಆಚರಿಸಲಾದ ಎಕ್ಸೆಸ್ ಡೇಯಲ್ಲಿ ಭಾಗವಹಿಸಿ ಅವರು ಮಾತಾಡುತ್ತಿದ್ದರು. ಜವಾಹರಲಾಲ್ ನೆಹರೂ ಮತ್ತು ಶೇಖ್ ಅಬ್ದುಲ್ಲ ಇಬ್ಬರು ವ್ಯಕ್ತಿಗಳ ನಡುವಿನ ಒಂದು ಒಪ್ಪಂದವಾಗಿತ್ತು. ಇದು ಯಾವುದೇ ರಾಜಕೀಯ ಪಾರ್ಟಿ ಮತ್ತು ಸಂವಿಧಾನ ಸಭೆಯ ಬೆಂಬಲ ಹೊಂದಿದ್ದಲ್ಲ. 370ನ್ನು ಕೇವಲ ಇಬ್ಬರು ಮಾತ್ರ ನಿರ್ಧರಿಸಿದ್ದರು ಎಂದು ರಾಮ್ ಮಾಧವ್ ಹೇಳಿದರು. 370ಅನ್ನು ಪ್ರಜಾಪ್ರಭುತ್ವ ರೀತಿಯಲ್ಲಿ ಸಂವಿಧಾನಕ್ಕೆ ಸೇರಿಸಲಾಗಿರಲಿಲ್ಲ. ಆದರೆ ಅದನ್ನು ಸಂಪೂರ್ಣ ಪ್ರಜಾಪ್ರಭುತ್ವ ರೀತಿಯಲ್ಲಿ ತೆರವುಗೊಳಿಸಲಾಗಿದೆ ಎಂದು ಅವರು ತಿಳಿಸಿದರು.