ಮಂಗಳೂರು: ಜಮಾಅತೆ ಇಸ್ಲಾಮೀ ಹಿಂದ್ ನ ಹಿರಿಯ ಸದಸ್ಯ ಮೀರ್ ಮುಹಿಯುದ್ದೀನ್ ನಿಧನ

0
1246

ಸನ್ಮಾರ್ಗ ವಾರ್ತೆ

ಮಂಗಳೂರು: ಜಮಾಅತೆ ಇಸ್ಲಾಮೀ ಹಿಂದ್ ನ ಹಿರಿಯ ಸದಸ್ಯ ಹಾಗೂ ಸನ್ಮಾರ್ಗ ಪತ್ರಿಕೆಯ ಬೆಳವಣಿಗೆಗೆ ಶ್ರಮಿಸಿದ್ದ ಮಂಗಳೂರಿನ ಜೆಪ್ಪು ನಿವಾಸಿ ಮೀರ್ ಮೊಹ್ಯುದ್ದೀನ್ ರವರು ಇಂದು ನಿಧನರಾದರು.

ಅವರಿಗೆ 85 ವರ್ಷ ವಯಸ್ಸಾಗಿತ್ತು. ‘ಸನ್ಮಾರ್ಗ’ ದ ದೊಡ್ಡ ಹಿತಾಕಾಂಕ್ಷಿಯಾಗಿದ್ದ ಇವರು, ಅಭಿಯಾನದ ಸಂದರ್ಭಗಳಲ್ಲಿ ಹಗಲಿರುಳೆನ್ನದೆ ಶ್ರಮಿಸುತ್ತಿದ್ದರು. ಜಮಾಅತೆ ಇಸ್ಲಾಮೀ ಹಿಂದ್ ನ ಎಲ್ಲಾ ಕೆಲಸ ಕಾರ್ಯಗಳಲ್ಲಿ ಶಿಸ್ತಿನ ಸಿಪಾಯಿಯಾಗಿ ಗುರುತಿಸಿಕೊಂಡಿದ್ದ ಅವರು, ಮೃತರು ಪತ್ನಿ, ಮೂವರು ಗಂಡು ಮಕ್ಕಳು, ಮೂವರು ಹೆಣ್ಣು ಮಕ್ಕಳ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಮೃತರಿಗೆ ಅಲ್ಲಾಹನು ಮಗ್ಫಿರತ್, ಮರ್ಹಮತ್ ನೀಡಲಿ, ಜನ್ನತುಲ್ ಫಿದೌ೯ಸ್ ದಯ ಪಾಲಿಸಲಿ. ಅಲ್ಲಾಹ್ ಅವರ ಸೇವೆಯನ್ನು ಸ್ವೀಕರಿಸಲಿ ಎಂದು ಜಮಾಅತೆ ಇಸ್ಲಾಮೀ ಹಿಂದ್ ನ ಮಂಗಳೂರು ನಗರ ಸಂಚಾಲಕರಾದ ಕೆ. ಎಂ. ಅಶ್ರಫ್ ಸಂತಾಪ ಸೂಚಿಸಿದ್ದಾರೆ.