ಮ್ಯಾನ್ಮಾರ್ ಸೇನೆಯೊಂದಿಗೆ ಸಂಬಂಧವಿಲ್ಲ ಎಂದಿದ್ದ ಅದಾನಿ ಕಂಪೆನಿ: ಸಾಕ್ಷ್ಯಗಳು ಬಹಿರಂಗ

0
790
2019 ರಲ್ಲಿ ಮಂದ್ರಾ ಬಂದರಿ ನಲ್ಲಿ ಅದಾನಿ ಬಂದರುಗಳ ಮುಖ್ಯಸ್ಥ ಕರಣ್ ಅದಾನಿ ಮತ್ತು ಮ್ಯಾನ್ಮಾರ್ ಮಿಲಿಟರಿ ಮುಖ್ಯಸ್ಥ ಮಿನ್ ಆಂಗ್ ಹೇಲಿಂಗ್.

ಸನ್ಮಾರ್ಗ ವಾರ್ತೆ

ಯಾಂಗೂನ್: ಮಾನವ ಹಕ್ಕು ಉಲ್ಲಂಘನೆ, ವಂಶಹತ್ಯೆಗೆ ಕುಖ್ಯಾತಿ ಪಡೆದಿರುವ ಮ್ಯಾನ್ಮಾರ್ ಸೇನೆಯೊಂದಿಗೆ ಸಂಬಂಧವಿರುವ ಆರೋಪದ ಬಗ್ಗೆ ನಿರಾಕರಿಸಿದ್ದ ಅದಾನಿ ಗ್ರೂಪ್ ಗೆ ಸಂಬಂಧ ಇರುವ ಬಗ್ಗೆ ಸಾಕ್ಷ್ಯಗಳು ಬಹಿರಂಗಗೊಂಡಿವೆ.

ಕಂಪೆನಿಯ ಬಂದರು ಯೋಜನೆಯೊಂದಿಗೆ ಅದಾನಿ ಗ್ರೂಪ್ ಸಹಕರಿಸುವ ಕುರಿತ ಸಾಕ್ಷ್ಯಗಳು ಬಹಿರಂಗವಾಗಿದೆ. ಮಾನವ ಹಕ್ಕು ಉಲ್ಲಂಘನೆಯ ಕಾರಣದಿಂದ ಅಮೆರಿಕ ಮ್ಯಾನ್ಮಾರ್ ಸೇನೆಗೆ ದಿಗ್ಬಂಧನ ವಿಧಿಸಿದೆ. ಈ ಸೇನೆಯ ಕೈಕೆಳಗಿನ ಕಂಪೆನಿಯೊಂದಿಗೆ ಅದಾನಿ ಗ್ರೂಪ್ 52 ಮಿಲಿಯನ್ ಅಮೆರಿಕನ್ ಡಾಲರ್ ಸುಮಾರು 380.60 ಕೋಟಿ ರೂಪಾಯಿ ನೀಡುತ್ತಿದೆ ಎಂದು ಎಬಿಸಿ ನ್ಯೂಸ್ ವರದಿ ಮಾಡಿದೆ.

ಮಾನವ ಹಕ್ಕು ಕಾರ್ಯಕರ್ತರು, ಹೋರಾಟಗಾರರು ತಯಾರಿಸಿದ ರಹಸ್ಯ ವರದಿಯಲ್ಲಿ ಯಾಂಗೂನಿನ ಕಂಟೈನರ್ ಬಂದರಿಗಾಗಿ ಅದಾನಿ ಗ್ರೂಪ್ ಮ್ಯಾನ್ಮಾರ್ ಸೇನೆಯೊಂದಿಗೆ ಸಹಕರಿಸುತ್ತಿರುವುದು ಬಹಿರಂಗವಾಗಿದೆ.

ಅದಾನಿ ಪೋರ್ಟ್ಸ್ಇ ದರ ಉನ್ನತಾಧಿಕಾರಿಗಳು ಮತ್ತು ಮ್ಯಾನ್ಮಾರ್ ಸೇನೆಯ ಉನ್ನತ ಪ್ರತಿನಿಧಿಗಳು 2019ರಲ್ಲಿ ಭೇಟಿಯಾಗಿದ್ದುದರ ವೀಡಿಯೊ ದೃಶ್ಯಗಳು ಫೋಟೊಗಳನ್ನು ಎಬಿಸಿ ನ್ಯೂಸ್ ಹೊರಬಿಟ್ಟಿದೆ. ಮ್ಯಾನ್ಮಾರ್ ಸೇನೆಯೊಂದಿಗೆ ಯಾವುದೇ ರೀತಿಯಲ್ಲಿ ವ್ಯವಹಾರ ತಮಗಿಲ್ಲ ಎಂದು ಅದಾನಿ ಗ್ರೂಪ್ ಹೇಳಿದರೂ ಅದೆಲ್ಲ ಸುಳ್ಳೆಂದು ಸಾಬೀತುಪಡಿಸುವ ಸಾಕ್ಷ್ಯಗಳಿಗೆ ಜನರು ಸಾಕ್ಷಿಯಾಗಿದ್ದಾರೆ.

ಮ್ಯಾನ್ಮಾರ್ ರಾಜಧಾನಿ ಯಾಂಗೂನಿನಲ್ಲಿ ಕಂಟೈನರ್ ಪೋರ್ಟ್ ನಿರ್ಮಿಸಲು 290 ದಶಲಕ್ಷ ಅಮೆರಿಕನ್ ಡಾಲ ರ್ ಸುಮಾರು 20,45,08,00,000 ಭಾರತೀಯ ರೂಪಾಯಿ ಒಪ್ಪಂದಕ್ಕೆ ಅದಾನಿ ಗ್ರೂಪ್ ಸಹಿ ಹಾಕಿದೆ.

ಸೇನೆಯ ನಿಯಂತ್ರಣದ ಮ್ಯಾನ್ಮಾರ್ ಇಕಾನಮಿಕ್ ಕಾರ್ಪೊರೇಶನ್ (ಎಂಇಸಿ) ಅಮೆರಿಕದಿಂದ ದಿಗ್ಬಂಧಕ್ಕೊಳಗಾಗಿದೆ. ಸೈನ್ಯದಿಂದ ಅಧಿಕಾರ ಬುಡಮೇಲು ಕೃತ್ಯ ನಡೆದ ಬಳಿಕ ಅಮೆರಿಕ ಅಧ್ಯಕ್ಷ ಜೊ ಬೈಡನ್ ಮ್ಯಾನ್ಮಾರ್ ಸೇನೆಗೆ ದಿಗ್ಬಂಧನ ವಿಧಿಸಿದ್ದರು. ಅಮೆರಿಕ ಮ್ಯಾನ್ಮಾರಿಗೆ ಕೊಟ್ಟ ಸಹಾಯ ಒಂದು ಬಿಲಿಯನ್ ಅಮೆರಿಕನ್ ಡಾಲರ್ ಅನ್ನು ಸೇನೆ ಉಪಯೋಗಿಸುವುದಿಲ್ಲ ಎಂದು ಖಚಿತಪಡಿಸುವ ಕ್ರಮಗಳನ್ನು ಬೈಡನ್ ಸ್ವೀಕರಿಸಿದ್ದಾರೆ.

ಅದಾನಿಯ ಕಂಪೆನಿ 30 ದಶಲಕ್ಷ ಅಮೆರಿಕನ್ ಡಾಲರ್ ಮ್ಯಾನ್ಮಾರ್ ಇಕಾನಮಿಕ್ ಕಾರ್ಪೊರೇಷನ್ ಎಂಇಸಿ ಜಮೀನು ಲೀಸ್ ಆಗಿ ನೀಡುತ್ತಿದೆ ಎಂದು ಯಾಂಗೂ ನ್ ರೀಜಿಯನ್ ಇನ್‍ವೆಸ್ಟ್‍ಮೆಂಟ್ ಕಮಿಶನ್‍ನಿಂದ ಸೋರಿಕೆಯಾಗಿ ಸಿಕ್ಕಿದ ದಾಖಲೆಗಳು ತೋರಿಸುತ್ತಿವೆ. ಇನ್ನೂ 22 ದಶಲಕ್ಷ ಅಮೆರಿಕನ್ ಡಾಲರ್ ಲ್ಯಾಂಡ್ ಕ್ಲಿಯರೆನ್ಸ್ ಶುಲ್ಕ ಎಂಬ ನೆಲೆಯಲ್ಲಿಯೂ ಎಂಇಸಿಗೆ ಸಿಗುತ್ತಿದೆ ಎಂದು ದಾಖಲೆಯು ತೋರಿಸಿಕೊಟ್ಟಿದ್ದು ಈಗ ಎಂಇಸಿಗೆ ಆಸ್ಟ್ರೇಲಿಯನ್ ಸೆಂಟರ್ ಫಾರ್ ಇನ್‍ಟರ್‍ನ್ಯಾಶನಲ್ ಜಸ್ಟಿಸ್, ಆಕ್ಟಿವಿಸ್ಟ್ ಗ್ರೂಪ್ ಜಸ್ಟಿಸ್ ಫರ್ ಮ್ಯಾನ್ಮಾರ್ ವರದಿ ತಯಾರಿಸಿದೆ.

ಫೆಬ್ರುವರಿ ಒಂದಕ್ಕೆ ಸೈನಿಕ ಬುಡಮೇಲು ವೇಳೆ ಯಾಂಗೂನ್ ರೀಜಿಯನ್ ಇನ್ವೆಸ್ಟ್ ಮೆಂಟ್ ಆಯೋಗದ ದಾಖಲೆ ಸೋರಿಕೆಯಾಯಿತು ಎಂದು ಇದರ ಹಿಂದೆ ಕೆಲಸ ಮಾಡಿದ ಮಾನವ ಹಕ್ಕುಗಳ ಹೋರಾಟಗಾರ, ವಕೀಲ ರವಾನ್ ಅರಫ್ ಹೇಳುತ್ತಾರೆ. ಮ್ಯಾನ್ಮಾರ್ ಸೇನೆಗೆ ಆರ್ಥಿಕ ನೆರವು ನೀಡುವ ಕಂಪೆನಿಯೊಂದಿಗೆ ಅದಾನಿ ಕಂಪೆನಿಯ ವ್ಯವಹಾರ ಇದೆ. ಮ್ಯಾನ್ಮಾರ್ ಸೇನೆಗೆ ಅದಾನಿ ಗ್ರೂಪ್ ಸಹಾಯ ಮಾಡುತ್ತಿರುವ ಸುದ್ದಿ ಈ ಹಿಂದೆಯೂ ಹರಡಿಕೊಂಡಿತ್ತು. ಆದರೆ ಆದಾನಿ ಕಂಪನಿ ಆ ಆರೋಪವನ್ನು ನಿರಾಕರಿಸಿತ್ತು. ಆದರೂ ಎಂಇಸಿಯೊಂದಿಗಿ ಒಪ್ಪಂದದಿಂದ ಹಿಂದೆ ಸರಿಯಲು ಅದಾನಿ ಸಿದ್ಧವಾಗಿಲ್ಲ. ಎಂಇಸಿಗೆ ಲಭಿಸುವ ಲಾಭದ ಹಣವನ್ನು ಕ್ರೂರಕೃತ್ಯಗಳಿಗೆ ನೇತೃತ್ವ ನೀಡಲು ಮ್ಯಾನ್ಮಾರ್ ಸೇನೆಯು ವಿನಿಯೋಗಿಸುತ್ತಿದೆ ಎಂದು ಅವರು ಹೇಳಿದರು.