ಕಅಬದ ಹೊಸ ಹೊದಿಕೆ ಕಿಸ್ವಾ ಸಿದ್ಧ

0
781

ಮಕ್ಕ, ಜು. 26: ಈವರ್ಷದ ಹಜ್‍ನ ವೇಳೆ ಪವಿತ್ರ ಕಅಬಕ್ಕೆ ಹೊದಿಸಲಾಗುವ ಹೊಸ ಕಿಸ್ವ ಸಿದ್ಧವಾಗಿದೆ. ಕಿಸ್ವದ ಸೂಕ್ಷ್ಮ ಪರಿಶೀಲನೆಯು ಉಮ್ಮುಜೂದ್ ಕಿಸ್ವಾ ನಿರ್ಮಾಣ ಫ್ಯಾಕ್ಟರಿಯಲ್ಲಿ ನಡೆಯಿತು. ಹಜ್ ಕರ್ಮಕ್ಕಾಗಿ ಜಗತ್ತಿನ ವಿವಿಧ ಕಡೆಗಳಿಂದ ಬರುವ ಹಾಜಿಗಳು ಅರಫಾ ಕಣಿವೆಯಲ್ಲಿ ಸಂಗಮಿಸುವ ಅರಫಾ ದಿನದಲ್ಲಿ ಹೊಸಕಿಸ್ವಾವನ್ನು ಕಅಬಕ್ಕೆ ಹೊದೆಸಲಾಗುವುದು. ಉಮ್ಮುಲ್ಜೂದ್ ಕಿಸ್ವಾ ನಿರ್ಮಾಣ ಫ್ಯಾಕ್ಟರಿಯಲ್ಲಿ ತಜ್ಞ ನೇಯ್ಗೆಗಾರರು ಒಂದು ವರ್ಷದ ಪ್ರಯತ್ನದಲ್ಲಿ ಕಿಸ್ವಾವವನ್ನು ತಯಾರಿಸಿದ್ದಾರೆ.

ಉತ್ಕೃಷ್ಟ ರೇಷ್ಮೆಯನ್ನು ಇದಕ್ಕಾಗಿ ಬಳಸಲಾಗಿದೆ. ಹದಿನಾಲ್ಕು ಮೀಟರ್ ಎತ್ತರದ ಕಿಸ್ವಾ ನಿರ್ಮಿಸಲಾಗಿದೆ. ಚಿನ್ನದ ಲಿಪಿಯಲ್ಲಿ ಅರಬಿಕ್ ಕ್ಯಾಲಿಗ್ರಫಿ, ಪವಿತ್ರ ಕುರ್‍ಆನ್ ಸೂಕ್ತಗಳು ಕಿಸ್ವಾದಲ್ಲಿ ಬರೆಯಲಾಗಿದೆ. ಹಜ್ ಕರ್ಮಗಳು ಕೊನೆಯಾಗುವವರೆಗೆ ಹೊಸ ಕಿಸ್ವಾ ಎತ್ತರಿಸಿಕಟ್ಟಲಾಗುವುದು.