ಶಹಾದತ್ ಕಲಿಮ ಹೇಳಿಕೊಟ್ಟ ಡಾ.ರೇಖಾ ಕೃಷ್ಣನ್; ಶೇಮ ಯಿಸರಾಯೇಲ್ ಹೇಳಿಕೊಟ್ಟ ಫೆಲಸ್ತೀನಿನ ಇಬ್ರಾಹೀಂ ಮಾಹಿರ್: ಕೊರೋನ ಸಾವಿನ ಕೊನೆಯ ಕ್ಷಣಗಳು

0
1019

ಸನ್ಮಾರ್ಗ ವಾರ್ತೆ

ಪರಧರ್ಮ ದ್ವೇಷ ತಾರಕಕ್ಕೇರಿರುವ ಈ ಕಾಲದಲ್ಲ ಮನುಷ್ಯ ಎಷ್ಟು ಅಸಹಾಯಕ ಎನ್ನುವುದನ್ನು ಕೊರೋನ ಮಹಾರೋಗ ತೋರಿಸಿಕೊಟ್ಟಿದೆ. ಯಾರೂ ಪರಿಚಾರಕರಿಲ್ಲದೇ ಅಂತರ ಕಾಯ್ದುಕೊಳ್ಳುವ ಅಸಹಾಯಕ ಸನ್ನಿವೇಶಗಳಿವೆ. ರೋಗದಲ್ಲಿ ಸಾವು ಕೂಡ ವೇದನಾಜನಕ. ಎಲ್ಲ ಸಾವುಗಳು ನೋವು ತರುವುದೇ ಆದರೂ ಕೊರೋನ ಪೀಡಿತರ ಸಾವು ಅವರ ಕೊನೆಯ ಕ್ಷಣಗಳು ಎಂತಹ ನೋವಿನದ್ದೆಂದು ನಮಗೆ ಗೊತ್ತಿಲ್ಲ.

ಸಂಬಂಧಿಕರು ಹತ್ತಿರವಿಲ್ಲದೆ ವೆಂಟಿಲೇಟರ್ ಕೋಣೆಯ ಶೀತ ವಾತಾವರಣದಲ್ಲಿ ಮಲಗಿ ಅವರು ಇಹಲೋಕ ತ್ಯಜಿಸುತ್ತಾರೆ. ಧಾರ್ಮಿಕ ಕೊನೆಯ ಕರ್ಮಗಳು ಕೂಡ ಅವರಿಗೆ ಸಿಗುವುದಿಲ್ಲ. ಹೀಗಿರುವ ಸಮಯದಲ್ಲಿ ಕೇರಳದ ಪಟ್ಟಾಂಬಿಯ ಡಾ.ರೇಖಾ ಕೃಷ್ಣನ್‍ರ ಕಥೆಯನ್ನು ನಾವು ಕೇಳುತ್ತೇವೆ.

ನಗರದ ಖಾಸಗಿ ಆಸ್ಪತ್ರೆಯ ವೈದ್ಯೆ ಅವರು. ಕೊರೋನ ಪೀಡಿತ ಸಾವಿನ ಕ್ಷಣಗಣನೆಯಲ್ಲಿದ್ದ ಹಿರಿಯ ಜೀವ ಇನ್ನೆಂದು ಮರಳದು ಎಂಬ ಸ್ಥಿತಿಯಲ್ಲಿ ವೆಂಟಿಲೇಟರ್ ತೆಗೆಯಲು ಕುಟುಂಬ ಒಪ್ಪಿಕೊಂಡಿತು. ಕೊರೋನ ಆದ್ದರಿಂದ ಸಂಬಂಧಿಕರು ಆ ವೃದ್ಧೆ ತಾಯಿಯ ಕೊನೆ ಕ್ಷಣದಲ್ಲಿ ಹತ್ತಿರದಲ್ಲಿಲ್ಲ. ಡಾ.ರೇಖಾ ಆ ಸಮಯದಲ್ಲಿ ಅಲ್ಲಿದ್ದರು. ವೈದ್ಯೆ ವೆಂಟಿಲೇಟರ್ ತೆಗೆದರು. ಸಾವಿನ ಯಾತ್ರೆಯಲ್ಲಿ ಅವರು ಕಷ್ಟ ಅನುಭವಿಸುವುದು ಕಂಡಾಗ ರೇಖಾರಿಗೆ ಸುಮ್ಮನಿರಲು ಆಗಲಿಲ್ಲ. ಎದೆ ಬಡಿತ ರಕ್ತದೊತ್ತಡ ನಾಡಿಮಿಡಿತ ಎಲ್ಲ ಕಡಿಮೆಯಾಯಿತು. ಅವರು ಅವರು ಉಸಿರು ಎಳೆಯುವ ದಯನೀಯತೆ ನೋಡಿದಾಗ ಮನಸಿಗೆ ತುಂಬ ನೋವಾಯಿತು. ಕುಟುಂಬ ಸದಸ್ಯರು ಬಳಿಯಿಲ್ಲ. ನಮಗೆ ಯಾರಿಗೂ ಏನೂ ಮಾಡಲು ಆಗದ ಅವಸ್ಥೆ ಅದು. ಅವರಿಗಾಗಿ ಪ್ರಾರ್ಥಿಸಬೇಕೆಂದು ಮೊದಲು ಅನಿಸಿತು. ಯಾಕೆ ಅವರ ವಿಶ್ವಾಸದಂತೆ ಅವರ ಕೊನೆಯುಸಿರು ಆಗಬಾರದು ಎಂದು ರೇಖಾ ಯೋಚಿಸಿದರು.

ಮತ್ತೆ ಚಿಂತಸಲಿಲ್ಲ. ಅವರ ಕಣ್ಣುಗಳನ್ನು ಮುಚ್ಚಿದೆ. ಅವರ ಕಿವಿಯಲ್ಲಿ ಶಹಾದತ್ ಕಲಿಮಾ ಹೇಳಿಕೊಟ್ಟೆ. ನಾನು ಹೇಳಿಕೊಡಲು ತೊಡಗಿದೊಡನೆ ಅವರು ಎರಡು ಬಾರಿ ದೀರ್ಘ ಉಸಿರೆಳೆದರು. ಅದರೊಂದಿಗೆ ಅವರ ನಾಡಿಬಡಿತ ನಿಂತಿತು. ಆ ತಾಯಿಗೆ ಭೂಮಿಯಿಂದ ಹೋಗಲು ತಡೆಯಾಗಿದ್ದಾಗ ಯಾರೋ ನನಗೆ ಹಾಗೆ ಮಾಡಬೇಕೆಂದು ಹೇಳಿಕೊಟ್ಟು ಮಾಡಿಸಿದಂತೆ ನಾನು ಈಗಲೂ ನಂಬುತ್ತಿದ್ದೇನೆ ಎಂದು ಡಾ. ರೇಖಾ ಹೇಳುತ್ತಿದ್ದಾರೆ.

ಇಂತಹದೊಂದು ಪರಿಸ್ಥಿತಿ ಮೂರು ತಿಂಗಳ ಹಿಂದೆ ಇಸ್ರೇಲಿನ ಉತ್ತರ ನಗರ ಅಫೂಲದಲ್ಲಿ ನಡೆದಿತ್ತು. ಅಲ್ಲಿ ಹಾಯಿಮೆಕ್ ಮೆಡಿಕಲ್ ಸೆಂಟರ್‌ನಲ್ಲಿ ಕೊರೋನ ಪೀಡಿತರಾಗಿ ಚಿಕಿತ್ಸೆಯಲ್ಲಿದ್ದ ಯಹೂದಿ ವಿಭಾಗದ ಶಬಾದ್ನ್ ವ್ಯಕ್ತಿ ಶಲೊಮೊ ಗಾಲ್‍ಸ್ಟರ್. ಅವರು ಹಣ್ಣುಹಣ್ಣು ಮುದುಕ. ಯಾವ ಕ್ಷಣದಲ್ಲಿಯೂ ಸಾವು ಸಂಭವಿಸಬಹುದೆಂದು ಅವರ ಕುಟುಂಬಕ್ಕೆ ವೈದ್ಯರು ಹೇಳಿದರು. ತೀವ್ರ ಧರ್ಮ ವಿಶ್ವಾಸಿಯಾಗಿದ್ದ ಅವರಿಗೆ ಅಂತ್ಯ ಪ್ರಾರ್ಥನೆ ಶೆಮ ಯಿಸರಾಯೇಲ್ ಹೇಳಿಕೊಡಲು ಕುಟುಂಬ ಆಸ್ಪತ್ರೆಗೆ ಬರುತಿತ್ತು.

ಆದರೆ ಕುಟುಂಬ ತಲುಪುವವರೆಗೆ ಅವರ ಬದುಕಿ ಉಳಿಯುವ ಸಾಧ್ಯತೆಯಿರಲಿಲ್ಲ. ಇದು ಅಲ್ಲಿನ ಸಿಬ್ಬಂದಿಗೆ ಅರಿವಾಯಿತು. ಕೊರೋನ ವಿಭಾಗದಲ್ಲಿ ಗಾಲ್ಸಟರ್ ಇದ್ದರು. ಅಲ್ಲಿಂದ ಅವರನ್ನು ಉಪಚರಿಸುತ್ತಿದ್ದು ಫೆಲಸ್ತೀನಿನ ನಿವಾಸಿ ಇಬ್ರಾಹೀಂ ಮಾಹಿರ್. ಶೇಮ ಯಿಸ್ರೇಯೀಲ್ ಅವರಿಗೆ ಗೊತ್ತಿತ್ತು. ಸಂಪೂರ್ಣ ಗೊತ್ತಿಲ್ಲದಿದ್ದರೂ ಇಬ್ರಾಹೀಂ ತಡಮಾಡಿಲ್ಲ.

ಅವರಿಗಾಗಿ ಕುಟುಂಬ ಪ್ರಾರ್ಥಿಸುವುದು ಅವರ ಮಟ್ಟಿಗೆ ಎಷ್ಟು ಪ್ರಾಮುಖ್ಯವಿದೆ ಎಂದು ನನಗೆ ಗೊತ್ತಿತ್ತು. ಪ್ರಾರ್ಥನೆ ಸಂಪೂರ್ಣ ಗೊತ್ತಿರಲಿಲ್ಲ. ಆದರೆ ಶೇಮ ಯಿಸ್ರೇಯಿಲಿ ಸಾಲುಗಳನ್ನು ಕೊನೆಯದಾಗಿ ಅವರು ಕೇಳುವುದು ಮುಖ್ಯವಾಗಿತ್ತು. ಹಾಗೆ ನನಗೆ ಅನಿಸಿತು. ಅವರ ಕುಟುಂಬವನ್ನು ನಾವು ಉಪಚರಿಸಿದ್ದೇವೆ. ಅವರಿಗಾಗಿ ನಾನು ಆ ಪ್ರಾರ್ಥನೆ ಹೇಳಿಕೊಟ್ಟೆ ಎಂದು ಇಬ್ರಾಹೀಂ ಹೇಳಿದರು. ನಾವು ಪ್ರಾರ್ಥನೆ ಹೇಳಲು ಅವರು ಕೊನೆಯದಾಗಿ ಬಯಸಿದ್ದರೆಂದು ನನಗೆ ವಿಶ್ವಾಸವಿತ್ತು. ನಮಗೆಲ್ಲರಿಗೂ ಒಬ್ಬನೇ ದೇವನಿರುವುದು ಎಂದು ಇಬ್ರಾಹೀಮ ಹೇಳಿದರು.

ಕುಟುಂಬ ಆಸ್ಪತ್ರೆಗೆ ತಲುಪಿದಾಗ ಗಾಲ್‍ಸ್ಟರ್ ನಿಧನರಾಗಿದ್ದರು. ನಂತರ ಅವರ ಮಗಳು ಇಸ್ರಾಯೀಲಿ ಮಾಧ್ಯಮಗಳಿಗೆ ಈ ಘಟನೆ ವಿವರಿಸಿದರು. ಆಸ್ಪತ್ರೆಯ ಬೆಡ್‍ನಲ್ಲಿ ಇಬ್ರಾಹೀಂ ಕುರಿತು ಯಾವಾಗಲೂ ಗಾಲ್‍ಸ್ಟರ್ ಮಾತಾಡುತ್ತಿದ್ದರು ಎಂದು ಮಗಳು ಹೇಳಿದರು.