ಬ್ಲ್ಯಾಕ್ ಫಂಗಸ್‌ನ್ನು ಸಾಂಕ್ರಾಮಿಕ ರೋಗವಾಗಿ ಘೋಷಿಸಿದ ತೆಲಂಗಾಣ

0
370

ಸನ್ಮಾರ್ಗ ವಾರ್ತೆ

ಹೈದರಾಬಾದ್: ರೋಗಪೀಡಿತರ ಸಂಖ್ಯೆ ಭಾರೀ ಹೆಚ್ಚಳಗೊಂಡ ನಂತರ ತೆಲಂಗಾಣ ಮ್ಯೂಕರ್ ಮೈಕೊನಸಿಸ್ ಬ್ಲ್ಯಾಕ್ ಫಂಗಸ್ ರೋಗವನ್ನು ಸಾಂಕ್ರಾಮಿಕ ರೋಗವೆಂದು ಘೋಷಿಸಿದೆ. 1897ರ ಸಾಂಕ್ರಾಮಿಕ ರೋಗ ಕಾನೂನು ಪ್ರಕಾರ ಪಬ್ಲಿಕ್ ಹೆಲ್ತ್ ಡಿಪಾರ್ಟ್ಮೆಂಟ್ ಘೋಷಣೆ ಮಾಡಿದೆ.

ಸರಕಾರಿ-ಖಾಸಗಿ ಆಸ್ಪತ್ರೆಯಲ್ಲಿ ಬ್ಲ್ಯಾಕ್ ಫಂಗಸ್ ಪ್ರಕರಣವೆಂದು ಶಂಕೆಯಿರುವ ಪ್ರಕರಣಗಳನ್ನು ಆರೋಗ್ಯ ಇಲಾಖೆಗೆ ವರದಿ ಮಾಡಬೇಕಾಗುತ್ತೆ. ರಾಜ್ಯದಲ್ಲಿ ಸರಿಯಾದ ರೀತಿಯಲ್ಲಿ ರೋಗ ಬಾಧೆಯಿಲ್ಲ. ಅನವಶ್ಯಕವಾಗಿ ಪ್ರಕರಣಗಳ ಸಂಖ್ಯೆ ಹೆಚ್ಚಿಸಲಾಗುತ್ತಿದೆ ಎಂದು ವೈದ್ಯಕೀಯ ಶಿಕ್ಷಣ ನಿರ್ದೇಶಕರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ ಬೆನ್ನಿಗೆ ಬ್ಲ್ಯಾಕ್ ಫಂಗಸ್ ರೋಗವನ್ನು ಅಂಟು ರೋಗವಾಗಿ ಸರಕಾರ ಘೋಷಿಸಿತು. ರೋಗವನ್ನು ಹೇಗೆ ಪ್ರತಿರೋಧಿಸಬೇಕಾಗಿದೆ ಮತ್ತು ಯಾವೆಲ್ಲದನ್ನು ಬಳಕೆ ಮಾಡಬೇಕೆಂದು ವಿವರಿಸುವ ಹೇಳಿಕೆಯನ್ನು ಸರಕಾರ ಹೊರಡಿಸಿದೆ.