ತಮಿಳುನಾಡು ವಿಧಾನಸಭಾ ಚುನಾವಣೆ: 154 ಸೀಟುಗಳಲ್ಲಿ ಎಂಎನ್‌ಎಂ‌ ಸ್ಪರ್ಧೆಗೆ

0
422

ಸನ್ಮಾರ್ಗ ವಾರ್ತೆ

ಚೆನ್ನೈ: ತಮಿಳುನಾಡಿನ ವಿಧಾನಸಭಾ ಚುನಾವಣೆಯಲ್ಲಿ ನಟ ಕಮಲ್ ಹಾಸನ್‍ ಪಾರ್ಟಿಯಾದ ಮಕ್ಕಳ್‍ ನೀದಿ ಮಯ್ಯಂ(ಎಂಎನ್‍ಎಂ) 154 ಸೀಟುಗಳಲ್ಲಿ ಸ್ಪರ್ಧಿಸಲಿದೆ. 234 ವಿಧಾನಸಭಾ ಸೀಟುಗಳಲ್ಲಿ ಉಳಿದ 80ರಲ್ಲಿ ಸಖ್ಯ ಪಕ್ಷಗಳಿಗೆ ಬಿಟ್ಟುಕೊಡಲಾಗಿದೆ. ಇಂಡಿಯಾ ಜನನಾಯಕ ಪಾರ್ಟಿ ಮತ್ತು ಇಂಡಿಯಾ ಸಮತ್ವ ಪಾರ್ಟಿ ಕಮಲ್‍ ಹಾಸನ್‍ರೊಂದಿಗೆ ಮೈತ್ರಿ ಬೆಳೆಸಿಕೊಂಡಿದೆ.

ಸೋಮವಾರ ರಾತ್ರೆ ಸೀಟು ಹಂಚಿಕೆ ವಿವರವನ್ನು ಎಂಎನ್‌ಎಂ ಹೊರಬಿಟ್ಟಿತು. 2019ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಶೇ.4ರಷ್ಟು ಮತಗಳು ನೀದಿ ಮಯ್ಯಂಗೆ ಸಿಕ್ಕಿತ್ತು. ಇದನ್ನು ಈ ಚುನಾವಣೆಯಲ್ಲಿ ಶೇ.10ಕ್ಕೇರಿಸಲು ಅದು ಪ್ರಯತ್ನಿಸಲಿದೆ. ಆನ್‍ಲೈನ್‌ನಲ್ಲಿ ಅರ್ಜಿ ಆಹ್ವಾನಿಸಿ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದೆ.

ಭ್ರಷ್ಟಾಚಾರ, ನಿರುದ್ಯೋಗ, ಗ್ರಾಮೀಣಾಭಿವೃದ್ಧಿ ಸರಕಾರ ವ್ಯವಸ್ಥೆಯಲ್ಲಿ ಜನೋಪಕಾರಿಯಾಗಿಸುವುದು ಇತ್ಯಾದಿ ಕಮಲ್ ಹಾಸನ್ ನೇತೃತ್ವದ ಮೈತ್ರಿ ಕೂಟದ ಚುನಾವಣಾ ಪ್ರಚಾರ ವಿಷಯವಾಗಿದೆ. ಗೃಹಿಣಿಯರಿಗೆ ಪ್ರತೀ ತಿಂಗಳು ಸಂಬಳ. ಪ್ರತಿಯೊಂದೂ ಮನೆಗೆ ಕಂಪ್ಯೂಟರ್ ಇಂಟರ್ನೆಟ್ ಸೌಕರ್ಯವನ್ನು ಕಮಲ್‍ ಹಾಸನ್ ಪಾರ್ಟಿ ಭರವಸೆ ನೀಡಿದೆ.