ಜಾರ್ಖಂಡ್: ಕಾಣೆಯಾದ ಮಹಿಳೆಯ ಮೃತದೇಹ ಕೊಲೆಗೈದ ಸ್ಥಿತಿಯಲ್ಲಿ ಪತ್ತೆ

0
146

ಸನ್ಮಾರ್ಗ ವಾರ್ತೆ

ರಾಂಚಿ: ಜಾರ್ಖಂಡಿನಲ್ಲಿ 45 ವರ್ಷದ ಮಹಿಳೆಯನ್ನು ಆರು ತುಂಡುಗಳನ್ನಾಗಿ ಕತ್ತರಿಸಿ ನದಿಯ ದಡದಲ್ಲಿ ಹೂತು ಹಾಕಿದ ಘಟನೆ ಪಕೂರ್ ಜಿಲ್ಲೆಯಲ್ಲಿ ನಡೆದಿದೆ.

ಸೋನಾ ಮರಾಂಡಿ ಎಂಬವರು ಫೆಬ್ರುವರಿ 23ಕ್ಕೆ ಕಾಣೆಯಾಗಿದ್ದು ಅವರ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ನದಿಯ ದಡದಲ್ಲಿ ಕಾಲಿನ ಒಂದು ಭಾಗ ಕಂಡದ್ದರಿಂದ ಊರವರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ನಂತರ ಆ ಸ್ಥಳವನ್ನು ಅಗೆದು ದೇಹದ ಇತರ ಭಾಗಗಳನ್ನು ಪತ್ತೆ ಮಾಲಾಯಿತು. ಸೋನಾರ ಪುತ್ರ ಮನೋಜ್ ಮೃತದೇಹವನ್ನು ಗುರುತಿಸಿದ್ದಾರೆ.

ತಾಯಿ ನಾಪತ್ತೆಯಾದ ಬಳಿಕ ಫೆಬ್ರುವರಿ 24ರಂದು ಮನೋಜ್ ಪೊಲೀಸರಿಗೆ ದೂರು ನೀಡಿದ್ದರು. ಮೃತದೇಹದ ಭಾಗಗಳನ್ನು ಪೋಸ್ಟ್‌ಮಾರ್ಟಂಗೆ ಕಳುಹಿಸಿಕೊಡಲಾಗಿದೆ. ಘಟನೆಯಲ್ಲಿ ತನಿಖೆ ಆರಂಭಿಸಿದ್ದಾಗಿ ಪೊಲೀಸರು ತಿಳಿಸಿದ್ದಾರೆ.