ಪ್ರಥಮ ಪಿಯುಸಿ ಪರೀಕ್ಷೆಗೆ ಸುಪ್ರೀಂ ಕೋರ್ಟ್ ಹಸಿರು ನಿಶಾನೆ

0
416

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಪ್ರಥಮ ಪಿಯುಸಿ ಪರೀಕ್ಷೆಯನ್ನು ಭೌತಿಕವಾಗಿ ನಡೆಸಲು ಸುಪ್ರೀಂ ಕೋರ್ಟು ಅನುಮತಿ ನೀಡಿದೆ. ಕೇರಳ ಸರಕಾರದ ಅರ್ಜಿಯಲ್ಲಿ ಸುಪ್ರೀಂ ಕೋರ್ಟು ತೀರ್ಪು ನೀಡಿದ್ದು ಕೊರೋನ ಮಾನದಂಡ ಪಾಲಿಸಿ ಪರೀಕ್ಷೆ ನಡೆಸಬಹುದೆಂದು ಸೂಚಿಸಿತು.

7 ಲಕ್ಷ ಮಂದಿ ಭೌತಿಕವಾಗಿ ನೀಟ್ ಪರೀಕ್ಷೆ ಬರೆದಿದ್ದಾರೆ. ಇದನ್ನು ಪರಾಮರ್ಶಿಸಿದ ಜಸ್ಟಿಸಿ ಎಎಂ ಕಾನ್ವಿಲ್ಕರ್ ಅಧ್ಯಕ್ಷತೆಯ ಪೀಠ ಪರೀಕ್ಷೆಗೆ ಅನುಮತಿ ನೀಡಿತು. ಎಲ್ಲ ಕೊರೋನ ಮಾನದಂಡಗಳನ್ನು ಪಾಲಿಸಿ ಕೇರಳ ಪರೀಕ್ಷೆ ನಡೆಸುತ್ತಿದ್ದು ನಾಲ್ಕೂವರೆ ಲಕ್ಷ ವಿದ್ಯಾರ್ಥಿಗಳು ಎಸೆಸೆಲ್ಸಿ, ಪಿಯುಸಿ ದ್ವಿತೀಯ ಪರೀಕ್ಷೆಗಳನ್ನು ಸುರಕ್ಷಿತವಾಗಿ ಬರೆದಿದ್ದಾರೆ ಎಂದು ಕೇರಳ ಸರಕಾರ ಅಫಿದಾವಿತ್ ಸಲ್ಲಿಸಿತ್ತು.

ಅಕ್ಬೋಬರಿನಲ್ಲಿ ಮೂರನೆ ಅಲೆ ಆಗುತ್ತದೆ. ಅದಕ್ಕಿಂತ ಮುಂಚೆ ಪರೀಕ್ಷೆ ನಡೆಸಲು ಕೇರಳ ಸುಪ್ರೀಂಕೋರ್ಟಿನಿಂದ ಅನುಮತಿ ಕೇಳಿ ಅರ್ಜಿ ಸಲ್ಲಿಸಿತ್ತು. ಸೆಪ್ಟಂಬರ್ ಆರಕ್ಕೆ ಪರೀಕ್ಷೆ ಆರಂಭಿಸಲು ಕೇರಳ ಸರಕಾರ ನಿರ್ಧರಿಸಿತ್ತು. ಸುಪ್ರೀಂ ಕೋರ್ಟಿನ ತಡೆಯಾಜ್ಞೆಯಿಂದಾಗಿ ಪರೀಕ್ಷೆ ನಡೆದಿರಲಿಲ್ಲ.