ಹತ್ತು ಸಾವಿರ ರೂಪಾಯಿ ಸಾಲಕ್ಕೆ ಐದು ವರ್ಷದಿಂದ ಜೀತ: ಕಾಂಚಿಪುರಂ ನಲ್ಲಿ ಮನಕಲಕುವ ಕ್ರೌರ್ಯ; 42 ಬಂಧಿಗಳಿಗೆ ಮುಕ್ತಿ

0
3974

ಚೆನ್ನೈ, ಜು. 12: ಕಾಂಚಿಪುರಂ ಖಾಸಗಿ ಮರಕಡಿಯುವ ಯುನಿಟ್‍ನಲ್ಲಿ ಜೀತಕ್ಕಿದ್ದ 16 ಮಕ್ಕಳ ಸಹಿತ 42 ಮಂದಿ ಗುತ್ತೆ ಕಾರ್ಮಿಕರನ್ನು ರೆವನ್ಯೂ ಅಧಿಕಾರಿಗಳು ಬಿಡುಗಡೆಗೊಳಿಸಿದ್ದಾರೆ. ಕಾಂಚಿಪುರಂ, ರಾನ್ನಿಪೇಟೆ ವಿಭಾಗಾಧಿಕಾರಿಯವರ ಆದೇಶ ಅನ್ವಯ ದಾಳಿ ನಡೆದಿತ್ತು. ನಟರಾಜನ್ ಎಂಬಾತ ಮರದ ಮಿಲ್ ಮಾಲಕ ಆಗಿದ್ದು ಈತನಿಂದ ಹತ್ತು ಸಾವಿರ ರೂಪಾಯಿ ಸಾಲ ಪಡೆದಿದ್ದಕ್ಕೆ ಐದು ವರ್ಷದಿಂದ ಕಾರ್ಮಿಕರು ಜೀತ ಮಾಡುತ್ತಾ ಬಂದಿದ್ದಾರೆ.

ಕಾರ್ಮಿಕರು ಮತ್ತು ಅವರ ಮಕ್ಕಳನ್ನು ಹೊರಗೆ ಹೋಗಲು ಬಿಡುತ್ತಿರಲಿಲ್ಲ. ಮಕ್ಕಳು ಮತ್ತು ಗರ್ಭಿಣಿಯರನ್ನೂ ಕಟ್ಟಿಗೆ ಕಡಿಯಲು ಹಚ್ಚಲಾಗುತ್ತಿತ್ತು. ಸಾಲದ ಮೊತ್ತ ಕೊಡಬೇಕಾಗಿಲ್ಲ. ನಿಮ್ಮ ಗ್ರಾಮಗಳಿಗೆ ಹೋಗಬಹುದು ಎಂದು ಜೀತ ಮಾಡುತ್ತಿದ್ದ ಕಾರ್ಮಿಕರಿಗೆ ಹೋಗಲು ಅಧಿಕಾರಿಗಳು ಹೇಳಿದ್ದಾರೆ. ಇವರ ಪುನರ್ವಸತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿ ಹೇಳಿದರು.