ರಾಖ್ನೆ ಹಿಂಸಾಚಾರಕ್ಕೆ ದೇಣಿಗೆ: ಸಿಂಗಪುರ್‌ನಿಂದ ಮ್ಯಾನ್ಮಾರ್ ಪ್ರಜೆಗಳ ಗಡಿಪಾರು

0
619
A Rohingya refugee girl carries a baby inside a refugee camp in Sitwe, in the state of Rakhine, Myanmar March 4, 2017. Picture taken March 4, 2017. REUTERS/Soe Zeya Tun - RTX313NW

ಮ್ಯಾನ್ಮಾರ್‌ ನಲ್ಲಿ ರೋಹಿಂಗ್ಯಾ ಜನಾಂಗೀಯ ಮುಸ್ಲಿಮರ ಮೇಲೆ ನಡೆದ ಸೇನಾ ದಾಳಿಗಳನ್ನು ಸಮರ್ಥಿಸಿ ಪ್ರತಿಭಟನೆ‌ ನಡೆಸಿದ ಹಾಗೂ ದೇಣಿಗೆಯನ್ನು ನೀಡಿದ ಮ್ಯಾನ್ಮಾರ್ ಪ್ರಜೆಗಳನ್ನು ಸಿಂಗಪುರ್ ಸರಕಾರವು ದೇಶದಿಂದ ಗಡಿಪಾರು ಮಾಡಲು ತೀರ್ಮಾನಿಸಿದೆ.
ಮ್ಯಾನ್ಮಾರ್ ನಲ್ಲಿರುವ ರಾಜಕೀಯ ಗಲಭೆಗಳನ್ನು ಸಿಂಗಪುರ್ ಗೆ ಎಳೆದು ತರಬೇಡಿ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದು, ರೋಹಿಂಗ್ಯನ್ನರ ಮೇಲೆ ದಾಳಿ ನಡೆಸಿದ ಬೌದ್ಧ ಭಯೋತ್ಪಾದಕ ಸಂಘಟನೆಯಾದ ಅರ್ಕಾನ್ ಆರ್ಮಿ(ಎಎ) ಗೆ ದೇಣಿಗೆಗಳನ್ನು ನೀಡಿದ ವ್ಯಕ್ತಿಗಳನ್ನು ಮತ್ತು ಸಂಸ್ಥೆಗಳನ್ನು ಸಿಂಗಪುರ್ ಅಧಿಕಾರಿಗಳು ಬಂಧನಕ್ಕೊಳಪಡಿಸಿದ್ದಾರೆ.
2017 ರಲ್ಲಿ ನಡೆದ ಬೌದ್ಧರ ಹಾಗೂ ಸೇನಾ ದಾಳಿಯಿಂದಾಗಿ 7,3೦೦೦೦ ರೋಹಿಂಗ್ಯನರು ಜೀವ ರಕ್ಷಣೆಗಾಗಿ ಮ್ಯಾನ್ಮರ್ ತೊರೆದು ಬಾಂಗ್ಲಾದೇಶಕ್ಕೆ ಪಲಾಯನಗೈದಿದ್ದು ಜಾಗತಿಕ ಮಟ್ಟದಲ್ಲಿ ಸುದ್ದಿಯಾಗಿತ್ತು. ಮ್ಯಾನ್ಮಾರ್ ಸರಕಾರವು ರೋಹಿಂಗ್ಯನ್ನರ ನಿವೇಶನಗಳನ್ನೆಲ್ಲ ಸುಟ್ಟುಹಾಕಿ ನೆಲಸಮಗೊಳಿಸಿತ್ತು.
ಈ ಕುರಿತು ಪ್ರತಿಕ್ರಿಯಿಸಿದ ಮ್ಯಾನ್ಮಾರ್ ಪೋಲಿಸರು, “ದೇಣಿಗೆಗಳನ್ನು ನೀಡಿದ್ದಕ್ಕಾಗಿ ಮ್ಯಾನ್ಮಾರ್ ಪ್ರಜೆಗಳನ್ನು ಬಂಧಿಸಲಾಗಿದೆ ಎಂಬ ವಿಷಯವು ನಮಗೆ ತಿಳಿದಿರಲಿಲ್ಲ ಮತ್ತು ಇದನ್ನು ನಮ್ಮ‌ ಗಮನಕ್ಕೂ ತರಲಾಗಿಲ್ಲ “ಎಂದು ತಿಳಿಸಿದ್ದಾರೆ.