ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ​​ಅಧ್ಯಕ್ಷರಾಗಿ ಹಿರಿಯ ವಕೀಲ ಕಪಿಲ್ ಸಿಬಲ್ ಆಯ್ಕೆ

0
414

ಸನ್ಮಾರ್ಗ ವಾರ್ತೆ

ಹಿರಿಯ ವಕೀಲರಾದ ಕಪಿಲ್ ಸಿಬಲ್ ಅವರು ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ​​(SCBA) ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

23 ವರ್ಷಗಳ ನಂತರ ಅವರು ಈ ಪದವಿಗೆ ಮರಳಿದ್ದು, SCBA ಅಧ್ಯಕ್ಷರಾಗಿ ಇದು ಕಪಿಲ್ ಸಿಬಲ್ ಅವರ ನಾಲ್ಕನೇ ಅವಧಿಯಾಗಿದೆ.

ಸಿಬಲ್ ಅವರು 1,066 ಮತಗಳನ್ನು ಪಡೆದರೆ ಅವರ ಸಮೀಪದ ಪ್ರತಿಸ್ಪರ್ಧಿ ಹಿರಿಯ ವಕೀಲ ಪ್ರದೀಪ್ ರೈ ಅವರು 689 ಮತಗಳನ್ನು ಪಡೆದಿದ್ದಾರೆ. ಹಾಲಿ ಅಧ್ಯಕ್ಷರಾಗಿದ್ದ, ಹಿರಿಯ ವಕೀಲ ಡಾ. ಆದೀಶ್ ಸಿ ಅಗರ್‌ವಾಲಾ ಅವರು 296 ಮತಗಳನ್ನು ಪಡೆದಿದ್ದಾರೆ.

ಪ್ರಿಯಾ ಹಿಂಗೋರಾಣಿ, ತ್ರಿಪುರಾರಿ ರೇ ಮತ್ತು ನೀರಜ್ ಶ್ರೀವಾಸ್ತವ ಅಧ್ಯಕ್ಷ ಸ್ಥಾನದ ಸ್ಪರ್ಧೆಯಲ್ಲಿದ್ದರು.

ಸಿಬಲ್ ಅವರು 2001-02ರಲ್ಲಿ SCBA ಅಧ್ಯಕ್ಷರಾಗಿ ಕೊನೆಯ ಬಾರಿ ಸೇವೆ ಸಲ್ಲಿಸಿದ್ದರು. ಅವರು ಅದಕ್ಕೂ ಮೊದಲು ಎರಡು ಬಾರಿ ಆಯ್ಕೆಯಾಗಿದ್ದು, 1995-1996, 1997-1998 ರಲ್ಲಿ ಸೇವೆ ಸಲ್ಲಿಸಿದ್ದಾರೆ.