ಕರ್ನಾಟಕದಲ್ಲಿ ಕಾಂಗ್ರೆಸ್‍ಗೆ ಮುಖ್ಯಮಂತ್ರಿ ಸ್ಥಾನ?

0
782

ಬೆಂಗಳೂರು,ಮೇ 24: ಲೋಕಸಭಾ ಚುನಾವಣೆಯ ಘೋರ ಸೋಲಿನ ಬೆನ್ನಿಗೆ ಕರ್ನಾಟಕದಲ್ಲಿ ಸರಕಾರವನ್ನು ಉಳಿಸಿಕೊಳ್ಳುವ ತಂತ್ರಗಳು ಆರಂಭವಾಗಿದೆ. ಕಾಂಗ್ರೆಸ್ಸಿನಿಂದ ಮುಖ್ಯಮಂತ್ರಿ ಜೆಡಿಎಸ್‍ನ ಉಪಮುಖ್ಯಮಂತ್ರಿ ಸ್ಥಾನದ ಕುರಿತು ರಾಜಿ ಏರ್ಪಟ್ಟಿದೆ ಎಂದು ಮೂಲಗಳು ತಿಳಿಸಿವೆ. ರಾಜ್ಯದಲ್ಲಿ ಬಿಜೆಪಿ ಬುಡಮೇಲು ಗೊಳಿಸಿ ಅಧಿಕಾರವನ್ನು ಕಿತ್ತುಕೊಳ್ಳುವುದೇ ಎಂದು ಕಾಂಗ್ರೆಸ್-ಜೆಡಿಎಸ್‍ಗಳು ಹೆದರುತ್ತಿವೆ. ಇದನ್ನು ತಡೆಯಲು ಹೊಸ ಫಾರ್ಮುಲಾವನ್ನು ಹೊರ ತೆಗೆಯಲಾಗಿದೆ.

ಕಾಂಗ್ರೆಸ್ ಮತ್ತು ಜೆಡಿಎಸ್ ಯಾಕೆ ವಿಫಲವಾಯಿತು ಎನ್ನುವುದನ್ನು ಚರ್ಚಿಸಲು ಅವೆರಡು ಪಕ್ಷಗಳು ಬೇರೆ ಬೇರೆಯಾಗಿ ಸಭೆ ಸೇರಲಿದೆ. ದಲಿತ ಮತಗಳು ಬಿಜೆಪಿಗೆ ಹರಿದಿದೆ ಎಂದು ಕಾಂಗ್ರೆಸ್ ಅಭಿಪ್ರಾಯ. ಆದ್ದರಿಂದ ದಲಿತರಿಂದ ಒಬ್ಬ ಮುಖ್ಯಮಂತ್ರಿಯನ್ನು ತರುವುದಕ್ಕೆ ಪ್ರದೇಶ ಕಾಂಗ್ರೆಸ್ ಸಮಿತಿಯಲ್ಲಿ ಚಿಂತನೆ ಹರಿಯುತ್ತಿದೆ. ಆದ್ದರಿಂದ ಜಿ. ಪರಮೇಶ್ವರ್ ಮುಖ್ಯಮಂತ್ರಿಯಾಗುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.