ತಿರುವನಂತಪುರಂ,ಮೇ 24: ಕಮ್ಯುನಿಸ್ಟ್ ಪಾರ್ಟಿಯೊಂದಿಗೆ ಜನರಲ್ಲಿ ನಂಬಿಕೆ ಕಡಿಮೆಯಾಗುತ್ತಿದೆ. ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ಅವುಗಳು ವೈಫಲ್ಯ ಅನುಭವಿಸುತ್ತಿವೆ ಎಂದು ತಿರುವನಂತಪುರಂನ ಎಲ್ಡಿಎಫ್ ಅಭ್ಯರ್ಥಿ ಸಿ.ದಿವಾಕರನ್ ಹೇಳಿದರು.
ಕೇರಳದಲ್ಲಿ ಇಂತಹ ಹಿನ್ನಡೆಯ ಕಾರಣದಿಂದ ಎಡಪಕ್ಷಗಳು ರಾಜಕೀಯ ಪರಿಶೀಲನೆಗೊಳಗಾಗಬೇಕೆಂದು ಅವರು ಆಗ್ರಹಿಸಿದರು. ಕೇರಳದಲ್ಲಿ ಎಲ್ಡಿಎಫ್ ತೀವ್ರ ಹಿನ್ನಡೆ ಅನುಭವಿಸಿತು. ಕೇರಳದ 20 ಸ್ಥಾನಗಳಲ್ಲಿ ಒಂದೆಡೆ ಮಾತ್ರ ಎಲ್ಡಿಎಫ್ಗೆ ಗೆಲ್ಲಲು ಆಗಿದೆ. ಅದು ಕೂಡ ಕಡಿಮೆ ಬಹುಮತದಲ್ಲಿ ಎನ್ನುವುದು ಗಮನಾರ್ಹ ಎಂದು ದಿವಾಕರನ್ ಹೇಳಿದರು. ಸಿಪಿಎಂ ಕುರಿತು ಅವುಗಳ ನಾಯಕರಿಂದ ಈಗ ಅಪಸ್ವರ ಕೇಳಿ ಬರುತ್ತಿದೆ.












