ರಂಜಾನ್ ಸಾಹೇಬ: ಕರ್ನಾಟಕದ ಏಕೀಕರಣಕ್ಕಾಗಿ ಪ್ರಾಣ ತ್ಯಾಗ ಮಾಡಿದ ಮೊದಲಿಗ

0
2918

ಎಸ್ ವೈ ಕೆ

ಭಾರತವು ಸ್ವತಂತ್ರವಾದ ಮತ್ತು ದೇಶ ವಿಭಜನೆಯಾದ ಬಳಿಕ ಭಾಷಾವಾರು ಮತ್ತು ಇತರ ಮಾನದಂಡಗಳನ್ನು ಆಧರಿಸಿ ರಾಜ್ಯಗಳನ್ನು ರಚಿಸಲು ಪುನರ್ವಿಂಗಡಣೆಯ ಗಡಿಗಳನ್ನು ಗುರುತಿಸಲಾಯಿತು. ಸ್ವಾತಂತ್ರ್ಯದ ನಂತರ, ಒಡೆಯರ್ ಅವರು ಜನರ ಚಳುವಳಿಯನ್ನು ಗಮನಿಸಿ ಅವರ ಅಪೇಕ್ಷೆ ಮನ್ನಿಸಿ ಭಾರತದ ಭಾಗವಾಗಲು ಸಮ್ಮತಿಸಿದರು. 1950 ರಲ್ಲಿ ಮೈಸೂರು ಭಾರತದ ರಾಜ್ಯವಾಯಿತು, ಮಹಾರಾಜರು 1975 ರ ವರೆಗೆ ಅದರ ರಾಜ ಪ್ರಮುಖ ಅಥವಾ ರಾಜ್ಯಪಾಲರಾದರು. ಏಕೀಕರಣ ಚಳುವಳಿ 19ನೆಯ ಶತಮಾನದ ಎರಡನೇ ಭಾಗದಲ್ಲಿ ಆರಂಭವಾಗಿ, 1956 ರಲ್ಲಿ ರಾಜ್ಯ ಪುನಸ್ಸಂಘಟನೆ ಕಾಯಿದೆಯೊಂದಿಗೆ ಚಳುವಳಿ ಮುಕ್ತಾಯವಾಯಿತು. ಇದರಿಂದ ಕೊಡಗು, ಮದ್ರಾಸ್` ಪ್ರಾಂತ್ಯ , ಹೈದರಾಬಾದ್ ಹಾಗೂ ಮುಂಬಯಿ ರಾಜ್ಯದಲ್ಲಿ ಬಹುಸಂಖ್ಯಾತ ಕನ್ನಡಿಗರಿರುವ ಭಾಗಗಳನ್ನು ಮೈಸೂರು ರಾಜ್ಯಕ್ಕೆ ಸೇರ್ಪಡಿಸಲಾಯಿತು. ಇದನ್ನು ಕರ್ಣಾಟಕ ಎಂದು ಕರೆಯಲಾಗುತ್ತಿತ್ತು. ಹೊಸ ಮೈಸೂರು ರಾಜ್ಯವು ನಂತರ ವಿಶಾಲ ಮೈಸೂರು ತದನಂತರ ಕರ್ನಾಟಕ 1956 ನವೆಂಬರ್ 1ರಂದು ರಚನೆಯಾಯಿತು. ಅಂದಿನಿಂದ 1 ನವೆಂಬರ್ ಕನ್ನಡ ರಾಜ್ಯೋತ್ಸವ / ಕರ್ನಾಟಕ ರಾಜ್ಯೋತ್ಸವವಾಗಿ ಆಚರಿಸಲಾಗುತ್ತದೆ. ಈ ಇತಿಹಾಸವನ್ನು ನಾವು ಮತ್ತೊಮ್ಮೆ ನೆನಪಿಸಬೇಕಾದ ಪರಿಸ್ಥಿತಿ ಇಂದಿನ ರಾಜಕೀಯ ಕುತಂತ್ರಗಳು ಹುಟ್ಟುಹಾಕುತ್ತಿವೆ.

ಹಂಚಿಹೋದ ಕರ್ನಾಟಕ ಮತ್ತು ಕನ್ನಡದ ಪರಿಸ್ಥಿತಿ:-
ಕನ್ನಡ ಭಾಷಿಕರೇ ಅಧಿಕವಾಗಿದ್ದ ಪ್ರಾಂತಗಳು ಬ್ರಿಟೀಷ್ ಆಡಳಿತದಲ್ಲಿ 20 ಘಟಕಗಳಲ್ಲಿ ಹಂಚಿಹೋಗಿದ್ದವು. ಮೈಸೂರು ಸಂಸ್ಥಾನವನ್ನು ಹೊರತುಪಡಿಸಿ ಉಳಿದ ಹತ್ತೊಂಬತ್ತು ಘಟಕಗಳಾಗಿ
1. ಮದ್ರಾಸ್ ಪ್ರಾಂತ್ಯ – ದಕ್ಷಿಣ ಕನ್ನಡ, ಬಳ್ಳಾರಿ ಮತ್ತು ನೀಲಗಿರಿ ಜಿಲ್ಲೆಗಳು, ಕೊಳ್ಳೇಗಾಲ, ಹೊಸೂರು ಮತ್ತು ಮಡಕಶಿರಾ ತಾಲ್ಲೂಕುಗಳು.
2. ಮುಂಬಯಿ ಪ್ರಾಂತ್ಯ- ಉತ್ತರ ಕನ್ನಡ, ಬೆಳಗಾವಿ, ಧಾರವಾಡ ಮತ್ತು ಬೆಳಗಾವಿ ಜಿಲ್ಲೆಗಳು- ಸೊಲ್ಲಾಪುರ ಮತ್ತು ಮಂಗಳವೇಢೆ ಪ್ರಾಂತಗಳು.
3. ಹೈದರಾಬಾದ್ ಸಂಸ್ಥಾನ- ಗುಲ್ಬರ್ಗ, ಬೀದರ್ ಮತ್ತು ರಾಯಚೂರು ಜಿಲ್ಲೆಗಳು.
4. ಕೊಡಗು ಜಿಲ್ಲೆ.
5. ಕೊಲ್ಲಾಪುರ ಸಂಸ್ಥಾನ- ರಾಯಭಾಗ್, ಕಡಕೋಳ, ತೊರಗಲ್ಲು ಪ್ರದೇಶಗಳು.
6. ಸಾಂಗಲಿ ಸಂಸ್ಥಾನ- ತೇರದಾಳ, ಶಹಾಪೂರ, ದೊಡ್ಡವಾಡ, ಶಿರಹಟ್ಟಿ ಪ್ರದೇಶಗಳು.
7. ಮೀರಜ್ ಸಂಸ್ಥಾನ ಮತ್ತು ಲಕ್ಷ್ಮೇಶ್ವರ.
8. ಕಿರಿ ಮೀರಜ್ ಸಂಸ್ಥಾನ- ಬುಧಗಾವ್, ಗುಡಗೇರಿ.
9. ಹಿರಿ ಕುರಂದವಾಡ ಸಂಸ್ಥಾನ.
10. ಕಿರಿ ಕುರಂದವಾಡ ಸಂಸ್ಥಾನ.
11. ಜಮಖಂಡಿ ಸಂಸ್ಥಾನ- ಕುಂದಗೋಳ, ಚಿಪ್ಪಲಕಟ್ಟಿ ಪ್ರದೇಶಗಳು.
12. ಮುಧೋಳ ಸಂಸ್ಥಾನ.
13. ಜತ್ ಸಂಸ್ಥಾನ.
14. ಅಕ್ಕಲಕೋಟೆ ಸಂಸ್ಥಾನ.
15. ಔಂಧ್ ಸಂಸ್ಥಾನ.
16. ರಾಮದುರ್ಗ ಸಂಸ್ಥಾನ.
17. ಸೊಂಡೂರು ಸಂಸ್ಥಾನ.
18. ಸವಣೂರು ಸಂಸ್ಥಾನ.
19. ಬೆಗಳೂರು, ಬೆಳಗಾವಿ ಮತ್ತು ಬಳ್ಳಾರಿ ದಂಡು ಪ್ರದೇಶಗಳು.
ಈ ಎಲ್ಲ ಸಂಸ್ಥಾನಗಳ ಪೈಕಿ ಮೈಸೂರನ್ನು ಹೊರತು ಪಡಿಸಿದರೇ ಉಳಿದೆಲ್ಲ ಸಂಸ್ಥಾನಗಳಲ್ಲಿ ರಾಜರು ಮರಾಠಿ ಬಾಷಿಕರಾಗಿದ್ದರು.
ಮುಂಬಯಿ ಪ್ರಾಂತ್ಯದಲ್ಲಿ ಮರಾಠಿ ಹೈದರಾಬಾದ್ ಪ್ರಾಂತ್ಯದಲ್ಲಿ ಉರ್ದು ಮತ್ತು ಮರಾಠಿ, ಮದ್ರಾಸ್ ಭಾಗದಲ್ಲಿ ತೆಲುಗು ಮತ್ರು ತಮಿಳು ಭಾಷೆಗಳೊಂದಿಗೆ ಕನ್ನಡವು ಹಣಾಹಣಿ ನಡೆಸಬೇಕಿತ್ತು.
ಆಡಳಿತ ಭಾಷೆ ಆಯಾ ಸಂಸ್ಥಾನಗಳ ರಾಜರ ಭಾಷೆಯಾದುದರಿಂದ ಕನ್ನಡಿಗರಿಗೆ ಇವುಗಳು ಅರ್ಥವಾಗಲು ಬಹಳ ಸಮಯಾವಕಾಶ ಪಡೆಯಿತು.

ಈ ಸಂದರ್ಭದಲ್ಲಿ ಕನ್ನಡ ಕಾವ್ಯ ಲೋಕವು ಕನ್ನಡ ನಾಡಿನ ಮತ್ತು ಭಾಷೆಯ ಕುರಿತಾದ ಅಚ್ಚಳಕವನ್ನು ಜನರ ಮನಸಿನಲ್ಲಿ ಬೇರುರುವಂತೆ ಮಾಡಿತು. ತೀ.ನಂ.ಶ್ರೀಕಂಠಯ್ಯ, ಕೈಯ್ಯಾರ ಕಿಞ್ಞಣ್ಣ ರೈ, ಹುಯಿಲಗೋಳ ನಾರಾಯಣರಾಯರ ಕವನಗಳು ಮೂಡಿ ಬಂದವು.

ತೆಲುಗು ಹೇರಿಕೆಯ ವಿರುದ್ದ ಆಂದೋಲನ ನಡೆಸಿದ ಚಂದ್ರಶೇಖರ್ ಪಾಟೀಲ, ಕನ್ನಡ ಮತ್ರು ಕನ್ನಡಿಗರಿಗೆ ತೊಂದರೆ ಆದಾಗ ಪ್ರತಿಭಟಿಸುವ
ಶ್ರೀ ಪಾಟೀಲ ಪುಟ್ಟಪ್ಪ, ಕರ್ನಾಟಕ ಏಕೀಕರಣಕ್ಕಾಗಿ ಜಾನಪದ ಕ್ಷೇತ್ರ ಮತ್ರು ಚಲನಚಿತ್ರ ರಂಗಕ್ಕೆ ಕರ್ನಾಟಕದ ಹೊಸ ಹುರುಪು ನೀಡಿದ ಕೆ. ಕರೀಂ ಖಾನ್ (ಜಾನಪದ ಶ್ರೀ ಪ್ರಶಸ್ತಿ ವಿಜೇತರು ).

ಕರ್ನಾಟಕ ಕ್ರಿಯಾ ಸಮಿತಿಯ ಸದಸ್ಯ ರಾದ ರಂಜಾನ್ ಸಾಹೇಬ್ ಬಳ್ಳಾರಿ – ಮೈಸೂರು ವಿಲೀನದ ವೇಳೆ ಉಸ್ತುವಾರಿ ಹಾಗೂ ಸಭಾ ಮಂಟಪದ ರಚನೆಯ ಜವಾಬ್ದಾರಿ ಹೊತ್ತು ಸಭಾ ಮಂಟಪವನ್ನು ಸುಟ್ಟುಹಾಕಲು ಬಂದ ಕೆಲವು ದುಷ್ಟರಿಂದ ಮುಖಕ್ಕೆ ಆಸಿಡ್ ಎಸೆಯಲ್ಪಟ್ಟು ದಾಳಿಗೊಳಗಾಗಿ ಸಾವನ್ನಪ್ಪಿದರು. ಕರ್ನಾಟಕದ ಏಕೀಕರಣಕ್ಕಾಗಿ ಪ್ರಾಣವನ್ನೇ ಬಲಿ ನೀಡಿದ ವ್ಯಕ್ತಿ ರಂಜಾನ್ ಸಾಹೇಬರಾದರು. ಮುಸ್ಲಿಮರಾಗಿದ್ದರೂ ಕೂಡ ಅವರ ಮಾತೃಭಾಷೆಯು ಕನ್ನಡವಾಗಿಯೇ ಇತ್ತು. ಬಳ್ಳಾರಿ ತೆಲುಗು ನಾಡಿಗೆ ಸೇರುತ್ತದೆನ್ನುವಾಗ ಎಚ್ಚೆತ್ತುಕೊಂಡು ಕರ್ನಾಟಕದ ಕನಸನ್ನು ಕಂಡವರಲ್ಲಿ ಪೈಲ್ವಾನ್ ರಂಜಾನ್ ಸಾಹೇಬರು ಪ್ರಮುಖರು. ೧೯೫೩ರ ಸೆಪ್ಟೆಂಬರ್ ೩೦ ರಂದು ಬಳ್ಳಾರಿ ಮೈಸೂರು ವಿಲೀನದ ಕಾರ್ಯಕ್ರಮದ ಸಭಾಮಂಟಪದ ಕಾವಲುಗಾರರಾಗಿ ಮಲಗಿದ್ದ ರಂಜಾನ್ ರವರ ಮುಖದ ಮೇಲೆ ದುಷ್ಟರು ಆಸಿಡ್ ಲೈಟನ್ನು ಎಸೆದರು. ತತ್ಪರಿಣಾಮವಾಗಿ ಅವರ ಮುಖದ ಮೇಲಿನ ಚರ್ಮವು ಸುಟ್ಟುಹೋಯಿತು. ದುಷ್ಟರನ್ನು ಬೆಂಬತ್ತಿ ಹಿಡಿಯಲು ಸ್ವತಃ ಪ್ರಯತ್ನಿಸಿದರೂ ಪ್ರಯತ್ನ ಫಲಿಸಲಿಲ್ಲ . ಮಧ್ಯರಾತ್ರಿ ಅವರನ್ನು ಆಸ್ಪತ್ರೆಗೆ ಸೇರಿಸಲಾಯ್ತಾದರೂ ಅವರು ಆಸ್ಪತ್ರೆಯಲ್ಲಿಯೇ ಅಕ್ಟೋಬರ್ ೨ರಂದು ಮರಣಹೊಂದಿದರು

ಅಂದಾನೆಪ್ಪ ದೊಡ್ಡಮೇಟಿ, ಅದರಗುಂಚಿ ಶಂಕರಗೌಡ , ಆರ್ ಅನಂತರಾಮನ್ ,ಆಲೂರು ವಡಂಕಟರಾಯರು, ಉರವಕೊಂಡ ಜಗದ್ಗುರುಗಳು, ಎನ್ . ಕೆ ಉಪಾಧ್ಯಾಯ,ಎಸ್. ಕೆ ಕರೀಂ ಖಾನ್, ಗೊರೂರು ರಾಮಸ್ವಾಮಿ ಅಯ್ಯಂಗಾರ್,ಕೆಂಗಲ್ ಹನುಮಂತಯ್ಯ, ಆರ್ .ವಿ. ಜಹಗೀರ್ ದಾರ್, ಎನ್ ಬಿ ದಾತಾರ್, ದೇವುಡು ನರಸಿಂಹಶಾಸ್ತ್ರೀ,ಎಸ್ ನಿಜಲಿಂಗಪ್ಪ, ಕುವೆಂಪು, ಜೆ. ಎಫ್ ಪ್ಲೀಟ್, ಆನಂದಕಂದ, ಬೀಚಿ, ಮಿರ್ಜಾ ಇಸ್ಮಾಯಿಲ್ ರಂತಹ ಹಲವು ಮಹನಿಯರು ಕರ್ನಾಟಕ ಏಕೀಕರಣಕ್ಕಾಗಿ ದುಡಿದರು.
ಜಾತಿ ಮತ ಬೇಧ ಭಾವಗಳನ್ನು ತೊರೆದು ಕನ್ನಡಿಗರೆಲ್ಲರೂ ಒಂದಾಗಬೇಕೆಂಬ ಕರೆಯು ಕರ್ನಾಟಕದ ಏಕೀಕರಣಕ್ಕೆ ನಾಂದಿ ಹಾಡಿತು.

ಕನ್ನಡ ಪತ್ರಿಕೆಗಳು, ಸಾರಿಗೆ, ಸಂಪರ್ಕ, ಅರಣ್ಯ ಕಲೆ ಮತ್ತು ಸಾಹಿತ್ಯ, ಬ್ಯಾಂಕಿಂಗ್ ಉದ್ಯಮ ಸೇರಿದಂತೆ ಎಲ್ಲ ರಂಗಗಳಲ್ಲಿ ಕನ್ನಡದ ಪ್ರಾಬಲ್ಯತೆಯನ್ನು ಸಾಧಿಸಲಾಯ್ತು. ಅಲ್ಪ ಸಂಖ್ಯೆಯಲ್ಲಿದ್ದ ಕನ್ನಡ ಶಾಲೆಗಳು ಸಾವಿರಾರು ಹೊಸ ಕನ್ನಡ ಮಾಧ್ಯಮ ಶಾಲೆಗಳಿಗೆ ಮೆರಗು ನೀಡಿದವು, ಕನ್ನಡ ಸಾಹಿತ್ಯ ಪರಿಷತ್ತು, ಕರ್ನಾಟಕ ವಿದ್ಯಾವರ್ಧಕ ಸಂಘ, ಅಖಿಲ ಕರ್ನಾಟಕ ಏಕೀಕರಣ ಸಂಘ, ಕರ್ನಾಟಕ ವಿದ್ಯಾಪೀಠ ಸಂಸ್ಥೆಗಳು ಏಕೀಕರಣಕ್ಕಾಗಿ ದುಡಿದವು.

ಹಲವು ರಾಜ ಮನೆತನಗಳ ಆಡಳಿತದಲ್ಲಿ ಹರಿದು ಹಂಚಿ ಹೋಗಿದ್ದ ಕರ್ನಾಟಕವು ಮರಾಠಿ, ತೆಲಗು, ತಮಿಳು, ಉರ್ದು, ಮಲಯಾಳಂ ಹಾಗೂ ಅಲ್ಪಾಂಶ ಹಿಂದಿ ಭಾಷೆಯ ಪ್ರಭಾವವನ್ನು ಹೊಂದಿತ್ತು. ಹೀಗಿರುತ್ತಾ ಭಾಷಾವಾರು ರಾಜ್ಯಗಳ ಸ್ಥಾಪನೆಯ ವೇಳೆ ಕನ್ನಡಿಗರನ್ನು ಒಗ್ಗೂಡಿಸುವುದು ಅಷ್ಟು ಸುಲಭದ ಮಾತಾಗಿರಲಿಲ್ಲ. ಮಲಯಾಳಂ ಪ್ರಭಾವವು ಅಲ್ಪಾಂಶವಿದ್ದ ಕಾಸರಗೋಡಿನಲ್ಲಿಯೂ ಕನ್ನಡದ ರಾಷ್ಟ್ರಕವಿ ಗೋವಿಂದ್ ಪೈ ಮಂಜೇಶ್ವರವನ್ನು ಕರ್ನಾಟಕದ ಭಾಗವಾಗಿಯೇ ಉಲ್ಲೇಖಿಸಿರುವುದನ್ನು ಅವರ ಭಾಷೆ ಹಾಗೂ ಕರ್ನಾಟಕ ಪ್ರೇಮದಲ್ಲಿ ಕಾಣಬಹುದು.
ಧರ್, ತ್ರಿಮೂರ್ತಿ, ಫಜಲ್ ಆಲಿ ಮುಂತಾದ ಸಮಿತಿಗಳ ಬಿಗಿ ಪಟ್ಟಿನಿಂದ ಮಿಂದೆದ್ದು ಇಂದು ಕರ್ನಾಟಕವು ತನ್ನ ಅಸ್ತಿತ್ವಕ್ಕೆ ಋಜುವಾತು ಹಾಕಿದೆ.