ದೋಸ್ತಿ ಸರಕಾರ ಉಳಿಸಲು ಕಸರತ್ತು: ಜೆ ಡಿ ಎಸ್‍ನ 9 ಸಚಿವರಿಂದ ರಾಜೀನಾಮೆ ಕೊಡುಗೆ

0
675

ಬೆಂಗಳೂರು, ಜು.8: ಜೆಡಿಎಸ್-ಕಾಂಗ್ರೆಸ್ ಸರಕಾರ ಉಳಿಸಿಕೊಳ್ಳುವುದಕ್ಕೆ ಬಿರುಸಿನ ಚಟುವಟಿಕೆಗಳು ನಡೆಯುತ್ತಿವೆ. ನಿನ್ನೆ ನಡೆದ ಜೆಡಿಎಸ್ ಸಭೆಯ ನಂತರ ಜೆಡಿಎಸ್‍ನ ಒಂಬತ್ತು ಸಚಿವರು ರಾಜೀನಾಮೆ ನೀಡಲು ಸಿದ್ಧರಾಗಿದ್ದಾರೆ.

ಇನ್ನೊಂದೆಡೆ ಕಾಂಗ್ರೆಸ್ ಸಚಿವರು ಕೂಡ ಸರಕಾರ ಉಳಿಸಿಕೊಳ್ಳುವುದಕ್ಕಾಗಿ ರಾಜೀನಾಮೆ ಸಿದ್ಧ ಎಂಬ ಸೂಚನೆಯನ್ನು ಡಿಕೆ ಶಿವಕುಮಾರ್ ನೀಡಿದ್ದಾರೆ. ಬಿಜೆಪಿ ಸರಕಾರಕ್ಕೆ ಅವಕಾಶ ನೀಡಬಾರದೆನ್ನುವ ಏಕ ಕಾರ್ಯಕ್ರಮದಡಿಯಲ್ಲಿ ಯಾವ ತ್ಯಾಗಕ್ಕೂ ಸಿದ್ಧ ಎಂದು ಅವರು ಹೇಳಿದರು. ಸಿದ್ಧರಾಮಯ್ಯ ಮತ್ತು ಮುಖ್ಯಮಂತ್ರಿ ಕುಮಾರ ಸ್ವಾಮಿಯವರ ನಡುವೆ ಚರ್ಚೆ ನಡೆದಿದ್ದು ಸರಕಾರ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಈಗ ಸಚಿವರಾಗಿರುವವರನ್ನು ಬದಲಾಯಿಸಿ ಅತೃಪ್ತರಿಗೆ ಮಣೆ ಹಾಕುವ ನಿರ್ಧಾರ ತಳೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.

ಮುಖ್ಯಮಂತ್ರಿ ಕೈ ಬಲಪಡಿಸುವುದು ಮತ್ತು ಕಾಂಗ್ರೆಸ್ ಪಕ್ಷವನ್ನು ಬಲಪಡಿಸುವುದು ನಮಗೆ ಮುಖ್ಯವೆಂದು ಡಿ ಕೆ ಶಿವಕುಮಾರ್ ಹೇಳಿದರು. ಜೂನ್ 14ರಂದು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ಎಚ್. ನಾಗೇಶ್ ಅತೃಪ್ತರ ಬಣ ಸೇರಲು ಸಿದ್ಧರಾಗಿದ್ದವರು ನಿಲುವು ಬದಲಿಸಿ ತಾನು ಕಾಂಗ್ರೆಸನ್ನು ಬೆಂಬಲಿಸಲು ಸಿದ್ಧ ಎಂದು ಹೇಳಿಕೆ ನೀಡಿದೆ. ಏನಿದ್ದರೂ ಸರಕಾರದ ಭವಿಷ್ಯ ಕೆಲವು ಗಂಟೆಗಳಲ್ಲಿ ನಿರ್ಧಾರವಾಗುವುದು ಖಚಿತ ಎಂದು ಮೂಲಗಳು ತಿಳಿಸಿವೆ.