ಕೊವಿಶೀಲ್ಡ್ ವ್ಯಾಕ್ಸಿನಲ್ಲಿ ಅಡ್ಡ ಪರಿಣಾಮಗಳಿವೆ ಎಂದ ವ್ಯಾಕ್ಸಿನ್ ತಯಾರಕ ಕಂಪೆನಿ ಆಸ್ಟ್ರೋಜನಿಕ

0
298

ಸನ್ಮಾರ್ಗ ವಾರ್ತೆ

ಕೊರೋನಾದ ಸಮಯದಲ್ಲಿ ಯಾರೆಲ್ಲಾ ಕೊವಿಶೀಲ್ಡ್ ವ್ಯಾಕ್ಸಿನನ್ನು ಚುಚ್ಚಿಸಿಕೊಂಡಿದ್ದಾರೋ ಅವರೆಲ್ಲರನ್ನೂ ಭೀತಿಯಲ್ಲಿ ಕೆಡಹುವ ಮಾಹಿತಿ ಹೊರಬಿದ್ದಿದೆ. ಈ ವ್ಯಾಕ್ಸಿನಲ್ಲಿ ಗಂಭೀರ ಅಡ್ಡ ಪರಿಣಾಮಗಳಿವೆ ಎಂದು ಇದೇ ಮೊದಲ ಬಾರಿ ವ್ಯಾಕ್ಸಿನ್ ತಯಾರಕ ಕಂಪೆನಿಯಾಗಿರುವ ಆಸ್ಟ್ರೋಜನಿಕ ಒಪ್ಪಿಕೊಂಡಿದೆ. ಲಂಡನ್ ನ್ಯಾಯಾಲಯದಲ್ಲಿ ನಡೆದ ವಿಚಾರಣೆಯ ವೇಳೆ ಆಸ್ಟ್ರೋಜನಿಕ ಕಂಪೆನಿ ಈ ತಪ್ಪು ಒಪ್ಪಿಕೊಂಡ ಘಟನೆ ನಡೆದಿದೆ.

ಈ ಬಗ್ಗೆ ದ ಟೆಲಿಗ್ರಾಫ್ ಪತ್ರಿಕೆ ವಿಸ್ತೃತವಾಗಿ ವರದಿ ಮಾಡಿದೆ. ಕೊರೊನಾದ ಸಮಯದಲ್ಲಿ ಬ್ರಿಟಿಷ್ ಫಾರ್ಮಸುಟಿಕಲ್ ಕಂಪೆನಿಯಾದ ಆಸ್ಟ್ರೋಜನಿಕ ಮತ್ತು ಆಕ್ಸ್ಫರ್ಡ್ ಯೂನಿವರ್ಸಿಟಿ ಜೊತೆ ಸೇರಿ ಕೊವಿಶೀಲ್ಡ್ ಲಸಿಕೆಯನ್ನು ತಯಾರಿಸಿತ್ತು. ಆದರೆ ಈ ವ್ಯಾಕ್ಸಿನ್ ಸಾವಿಗೆ ಮತ್ತು ಗಂಭೀರ ಅಡ್ಡ ಪರಿಣಾಮಕ್ಕೆ ಕಾರಣವಾಗಿದೆ ಎಂದು ಹೇಳಿ ಬ್ರಿಟನಿನ ಅನೇಕ ಮಂದಿ ಕೋರ್ಟಿನಲ್ಲಿ ದಾವೆ ಹೂಡಿದ್ದರು.. ಬ್ರಿಟನಿನ ಹೈಕೋರ್ಟಿಗೆ ಅರ್ಜಿ ಹಾಕಿರುವ 51 ಮಂದಿ 100 ದಶಲಕ್ಷ ಪೌಂಡು ಪರಿಹಾರವನ್ನು ಆಗ್ರಹಿಸಿದ್ದರು.

ಕೊವಿಶೀಲ್ಡ್ ಲಸಿಕೆಯು ಅಪರೂಪದಲ್ಲಿ ಮೆದುಳು ಸ್ತಂಭದನ ಮತ್ತು ಹೃದಯಘಾತ ಮುಂತಾದ ಅಡ್ಡ ಪರಿಣಾಮಗಳಿಗೆ ಕಾರಣವಾಗಬಹುದು ಎಂದು ಕಂಪೆನಿ ಇದೀಗ ನ್ಯಾಯಾಲಯದಲ್ಲಿ ಒಪ್ಪಿಕೊಂಡಿದೆ.

LEAVE A REPLY

Please enter your comment!
Please enter your name here