ಸ್ಪೀಕರ್ ತಿರ್ಮಾನವೇ ಅಂತಿಮ- ಸುಪ್ರೀಂಕೋರ್ಟು; ನನ್ನ ಮೇಲೆ ಸುಪ್ರೀಂ ಇಟ್ಟಿರುವ ವಿಶ್ವಾಸವನ್ನು ಉಳಿಸಿಕೊಳ್ಳುವೆ- ಸ್ಪೀಕರ್

0
799

ಹೊಸದಿಲ್ಲಿ, ಜು. 17: ಅತೃಪ್ತ ಶಾಸಕರ ಕುರಿತು ಸುಪ್ರೀಂಕೋರ್ಟು ತೀರ್ಪು ಪ್ರಕಟಿಸಿದ್ದು ಸ್ಪೀಕರ್ ತೀರ್ಮಾನವೇ ಅಂತಿಮ ಎಂದಿದೆ. ಸ್ಪೀಕರ್ ನಿರ್ಧಾರ ಹೊರಬರುವವರೆಗೆ ಅವರು ಸದನಕ್ಕೆ ಹಾಜರಾಗಬೇಕಿಲ್ಲ. ಅತೃಪ್ತ ಶಾಸಕರ ರಾಜೀನಾಮೆಯನ್ನು ಸ್ಪೀಕರ್ ತೀರ್ಮಾನಿಸಬೇಕಾಗಿದೆ. ನಿರ್ದಿಷ್ಟ ಕಾಲಮಿತಿಯಲ್ಲಿ ಸ್ಪೀಕರ್ ತೀರ್ಮಾನ ಪ್ರಕಟಿಸಬೇಕೆಂದು ಸುಪ್ರೀಂಕೋರ್ಟು ತೀರ್ಪಿನಲ್ಲಿ ಹೇಳಿದ್ದರೂ ಕಾಲಮಿತಿ ನಿಗದಿಗೊಳಿಸಿಲ್ಲ.

ಒಟ್ಟಿನಲ್ಲಿ ಸುಪ್ರೀಂಕೋರ್ಟು ಸ್ಪೀಕರ್ ಗೆ ಯಾವುದೇ ಸ್ಪಷ್ಟ ಸೂಚನೆ ನೀಡಿಲ್ಲ. ಆದ್ದರಿಂದ ಅತೃಪ್ತ ಶಾಸಕರು, ಸರಕಾರದ ಅಳಿವು ಉಳಿವಿನ ಕುರಿತು ಚೆಂಡು ಈಗ ಸ್ಪೀಕರ್ ಅಂಗಳಲದಲ್ಲಿದೆ. ಸಂವಿಧಾನದ ಸಮತೋಲನದ ಅಗತ್ಯವಿದೆ. ಸಂವಿಧಾನಕ್ಕೆ ಸಂಬಂಧಿಸಿದ ವಿಚಾರಗಳನ್ನು ಮುಂದೆ ತೀರ್ಮಾನಿಸುತ್ತೇವೆ ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗೊಯಿ ಅಧ್ಯಕ್ಷತೆಯ ಸುಪ್ರೀಂಕೋರ್ಟು ಪೀಠ ಎಂದು ತೀರ್ಪು ನೀಡಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಸ್ಪೀಕರ್ ರಮೇಶ್ ಕುಮಾರ್ ಸುಪ್ರೀಂಕೋರ್ಟು ಸ್ಪೀಕರ್ ಮೇಲೆ ಇಟ್ಟಿರುವ ವಿಶ್ವಾಸವನ್ನು ಉಳಿಸಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ಆದರೆ ಗುರುವಾರ ವಿಶ್ವಾಸ ಮತಯಾಚನೆ ನಡೆಯಲಿದ್ದು ಅದಕ್ಕೆ ಯಾವುದೇ ಅಡ್ಡಿಯಿಲ್ಲ ಎಂದು ಅವರು ಹೇಳಿದರು.