ಅಹ್ಮದಾಬಾದ್, ಜು. 17: ಮದುವೆಯಾಗದ ಮಹಿಳೆಯರು ಮೊಬೈಲ್ ಫೋನ್ ಉಪಯೋಗಿಸಬಾರದು ಎಂದು ಗುಜರಾತಿನ ಬನಾಸ್ಕಾಮಡ ಜಿಲ್ಲೆಯ ಠಾಕೂರ್ ಸಮುದಾಯ ನಿಷೇಧ ಹೇರಿದೆ. ಕಳೆದ ದಿವಸ ನಡದಿದ್ದ ಠಾಕೂರ್ ಸಮುದಾಯದ ಸಭೆಯಲ್ಲಿ ಈ ತೀರ್ಮಾನವಾಗಿದ್ದು ಮದುವೆಯಾಗದ ಮಹಿಳೆಯರಲ್ಲಿ ಮೊಬೈಲ್ ಫೋನ್ ಕಂಡು ಬಂದರೆ ಹೆತ್ತವರಿಗೆ 1.50 ಲಕ್ಷ ದಂಡ ವಿಧಿಸಲು ತೀರ್ಮಾನಿಸಲಾಗಿದೆ.
ಸಮುದಾಯದ ಹೊರಗಿನ ವ್ಯಕ್ತಿಗಳನ್ನು ಮದುವೆಯಾದರೆ ಅವರ ತಂದೆ ತಾಯಿಗಳಿಗೆ ದಂಡ ವಿಧಿಸಲು ಕೂಡ ಸೂಚಿಸಲಾಗಿದೆ. ಈ ಅಪರಾಧಕ್ಕಾಗಿ ಒಂದೂವರೆ ಲಕ್ಷದಿಂದ ಎರಡು ಲಕ್ಷ ರೂಪಾಯಿ ವರೆಗೆ ಹೆತ್ತವರು ದಂಡ ತೆರಬೇಕಾಗುತ್ತದೆ. ಠಾಕೂರ್ ಸಮುದಾಯದ 14 ಗ್ರಾಮ ಮುಖ್ಯಸ್ಥರು ಸಭೆಯಲ್ಲಿದ್ದರು. ಮದುವೆಯಲ್ಲಿ ಡಿಜೆ ಪಾರ್ಟಿಯನ್ನು ಕೂಡ ನಿಷೇಧಿಸಲಾಗಿದೆ.












