ಕಾಶ್ಮೀರದಲ್ಲಿ ಇಂಟರ್ ನೆಟ್ ಭಾಗಶಃ ಪುನರಾರಂಭ

0
595

ಸನ್ಮಾರ್ಗ ವಾರ್ತೆ

ಶ್ರೀನಗರ, ಜ. 15: ಆರು ತಿಂಗಳ ಬಳಿಕ ಜಮ್ಮು ವಿನ ಹಲವು ಕಡೆ ಇಂಟರ್ ನೆಟ್ ಭಾಗಶಃ ಆರಂಭವಾಗಿದೆ. ಜಮ್ಮುವಿನ ಕೆಲವು ಕಡೆ ಮೊಬೈಲ್ ಇಂಟರ್ ನೆಟ್ ಒದಗಿಸಲು ಅನುಮತಿಸಿದ್ದು ಹೊಟೇಲ್, ಯಾತ್ರಾ ಸ್ಥಳಗಳು, ಆಸ್ಪತ್ರೆಗೆ ಬ್ರಾಡ್‍ ಬಾಂಡ್ ಸಂಪರ್ಕ ಪುನಃ ಕಲ್ಪಿಸಲಾಗಿದೆ. ಸುಪ್ರೀಂಕೋರ್ಟಿನ ನಿರ್ದೇಶದಂತೆ ಇಂಟರ್ ನೆಟ್ ಸೇವೆ ಲಭ್ಯಗೊಳಿಸಲಾಗಿದೆ.

ಕಾಶ್ಮೀರ ಡಿವಿಷನ್‍ನ 400 ಇಂಟರ್ ನೆಟ್ ಕಿಯೊಸ್ಕ್‍ಗಳು ಸ್ಥಾಪಿಸಲಾಗುವುದೆಂದು ಗೃಹ ಇಲಾಖೆ ತಿಳಿಸಿದೆ. ಅಗತ್ಯ ಸೇವೆ, ಆಸ್ಪತ್ರೆ, ಬ್ಯಾಂಕುಗಳು, ಸರಕಾರಿ ಕಚೇರಿಗಳಿಗೆ ಇಂಟರ್ ನೆಟ್ ಸೇವೆ ಲಭ್ಯಗೊಳಿಸಲಾಗುವುದು. ಟೂರಿಸಂಗೆ ಅಡ್ಡಿಯಾಗದಿರಲಿಕ್ಕಾಗಿ ಹೊಟೇಲಿನಲ್ಲಿ ಪ್ರವಾಸ ಸಂಸ್ಥೆಗಳಿಗೆ ಬ್ರಾಡ್‍ ಬಾಂಡ್ ಇಂಟರ್ ನೆಟ್ ಒದಗಿಸಲಾಗುವುದು. ಜಮ್ಮು ಸಾಂಬ, ಕಟುವ, ಉದಾಂಪುರ, ರಿಯಾಸಿ ಜಿಲ್ಲೆಗಳಲ್ಲಿ ಈ ಬ್ಯಾಂಕ್ ಸಹಿತ ಸೇವೆಗಳನ್ನು ಲಭ್ಯಗೊಳಿಸುವುದಕ್ಕಾಗಿ ಪೋಸ್ಟ್ ಪೆಯ್ಡ್ ಮೊಬೈಲ್‍ಗಳಿಗೆ 2ಜಿ ಮೊಬೈಲ್ ಸೇವೆ ಅನುಮತಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.