ಕೇರಳಿಗರ ನಿದ್ದೆಗೆಡಿಸಿದ ಬ್ಲಾಕ್ ಮ್ಯಾನ್: ಇದ್ದಕ್ಕಿದ್ದಂತೆ ಬೆಕ್ಕಿನ ತಲೆ

0
1032

ಸನ್ಮಾರ್ಗ ವಾರ್ತೆ

ತೃಶೂರ್, ಎ. 8: ಶಾಸಕರ ಮನೆಗೂ ಕಿಡಿಗೇಡಿ ಬ್ಲಾಕ್‍ಮ್ಯಾನ್ ತಲುಪಿದ್ದಾನೆ. ಶಾಸಕ ಅನಿಲ್ ಅಕ್ಕರೆ ಎಂಬವರ ಮನೆಯ ನೀರಿನ ತೊಟ್ಟಿಯಲ್ಲಿ ಬೆಕ್ಕಿನ ತಲೆಕಡಿದು ಹಾಕಲಾಗಿದೆ. ಘಟನೆಯಲ್ಲಿ ಪೇರಮಂಗಲಂ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ದನದ ಹಾಲು ಕರೆಯುವ ಮೊದಲು ತೊಳೆಯಲು ಉಪಯೋಗಿಸುವ ನೀರಿನ ತೊಟ್ಟಿಯಲ್ಲಿ ಬೆಕ್ಕಿನ ರುಂಡ ಕಂಡು ಬಂದಿದೆ. ಬೆಳಗ್ಗೆ ಏಳೂವರೆ ಗಂಟೆಗೆ ಘಟನೆ ಗಮನಕ್ಕೆ ಬಂದಿತ್ತು. ಆದರೆ ಮೊದಲು ಇದನ್ನು ಯಾರೂ ಗಂಭೀರವಾಗಿ ಪರಿಗಣಿಸಿರಲಿಲ್ಲ. ನಂತರ ಸ್ಥಳೀಯರು ರಸ್ತೆಯಲ್ಲಿ ಅಜ್ಞಾತ ವ್ಯಕ್ತಿ ಹೋಗುವುದನ್ನು ನೋಡಿದ್ದೇವೆ ಎಂದು ತಿಳಿಸಿದ ಮೇಲೆ ಘಟನೆ ಪ್ರಾಮುಖ್ಯವನ್ನು ಪಡೆದುಕೊಂಡಿತು.

ಈ ಹಿಂದೆ ಜಿಲ್ಲೆಯಲ್ಲಿ ಹಲವಾರು ಕಡೆ ಬ್ಲಾಕ್‍ಮೆನ್ ಪ್ರತ್ಯಕ್ಷನಾಗಿ ಬೆದರಿಕೆ ಹುಟ್ಟಿಸಿದ್ದಾನೆ. ಇದು ಜನರಲ್ಲಿ ಹೆದರಿಕೆ ಸೃಷ್ಟಿಸಲು ಯಾರೋ ಮಾಡಿದ ತಂತ್ರವೆಂದು ಶಾಸಕರೇ ಸಂದೇಹ ವ್ಯಕ್ತಪಡಿಸಿದ್ದಾರೆ. ಪೊಲೀಸರು ಕೇಸು ದಾಖಲಿಸಿ ಬ್ಲಾಕ್‍ಮ್ಯಾನ್‍ನನ್ನು ಹುಡುಕುವ ಕೆಲಸದಲ್ಲಿ ನಿರತರಾಗಿದ್ದಾರೆ. ಶಾಸಕರ ಮನೆಯ ಸಮೀಪದಲ್ಲಿರುವ ಸಿಸಿಟಿವಿಯ ಪರಿಶೀಲನೆ ನಡೆಯುತ್ತಿದ್ದು. ಬೆಕ್ಕಿನ ತಲೆಯನ್ನು ತಂದ ವ್ಯಕ್ತಿಯನ್ನು ಗುರುತಿಸಲು ಸಾಧ್ಯವಾಗಬಹುದು ಎಂದು ಪೊಲೀಸರು ನಿರೀಕ್ಷೆ ವ್ಯಕ್ತಪಡಿಸಿದ್ದಾರೆ.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.