ಲಾಕ್ ಡೌನ್ ಮುಂದುವರಿಸುವ ತೀರ್ಮಾನ ಪ್ರಧಾನಿ- ಮುಖ್ಯಮಂತ್ರಿಗಳ ಭೇಟಿಯ ನಂತರ

0
621

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಎ. 8: ಲಾಕ್‍ಡೌನ್ ಮುಂದುವರಿಸುವ ಕುರಿತ ಅಂತಿಮ ತೀರ್ಮಾನ ಮುಖ್ಯಮಂತ್ರಿ ಮತ್ತು ಪ್ರಧಾನಿಗಳ ನಡುವೆ ಸಮಾಲೋಚನೆ ಆದ ಬಳಿಕ ಕೈಗೊಳ್ಳಲಾಗುವುದು ಎಂದು ವರದಿಯಾಗಿದೆ. ಶನಿವಾರ ವೀಡಿಯೊ ಕಾನ್ಫರೆನ್ಸ್ ನಡೆಯಲಿದ್ದು ಪ್ರಧಾನಿ ಮುಖ್ಯಮಂತ್ರಿಗಳ ನಡುವೆ ಚರ್ಚೆ ನಡೆಯಲಿದೆ. ಆನಂತರ ಲಾಕ್‍ಡೌನ್ ಮುಂದುವರಿಸುವ ಕುರಿತು ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎನ್ನಲಾಗಿದೆ.

ಲಾಕ್‍ಡೌನ್ ತೆರವುಗೊಳಿಸುವುದು ಕೇಂದ್ರ ಸರಕಾರದ ಅಭಿಪ್ರಾಯವಾಗಿದೆ. ಆರ್ಥಿಕ ವ್ಯವಸ್ಥೆ, ಮೂಲ ಆವಶ್ಯಕತೆ ವಿಭಾಗಗಳ ಕೆಲಸ ತ್ವರಿತವಾಗಿ ಆರಂಭಗೊಳಿಸಬೇಕೆಂದು ಕೇಂದ್ರ ಸರಕಾರ ಹೇಳುತ್ತಿದೆ. ಲಾಕ್‍ಡೌನ್ ಮುಂದುವರಿದರೆ ನಿರುದ್ಯೋಗ ಪ್ರಮಾಣ ಭಾರೀ ಹೆಚ್ಚಳವಾಗಬಹುದು ಎಂದು ಕೇಂದ್ರಕ್ಕೆ ಭೀತಿ ಇದೆ. ಕೆಲವು ವಿಭಾಗಗಳಿಗಾದರೂ ಕೆಲಸ ಮಾಡಲು ತೆರೆದುಕೊಡಲಾಗುವುದೆಂದು ಸೂಚನೆ ನೀಡಲಾಗುತ್ತಿದೆ. ಆದರೆ ಲಾಕ್ ಡೌನ್ ಮುಂದುವರಿಯಬೇಕೆಂದು ರಾಜ್ಯಗಳು ದೃಢವಾಗಿ ಹೇಳೀದರೆ ಮಾತ್ರ ಸಮಸ್ಯೆ ಉದ್ಭವಿಸಬಹುದು.

ಭಾರತದಲ್ಲಿ ಈವರೆಗೆ 5,356 ಕೊರೊನಾ ಕೇಸುಗಳು ದೃಢವಾಗಿವೆ. 160 ಮಂದಿ ಮೃತಪಟ್ಟಿದ್ದಾರೆ. 468 ಮಂದಿ ಗುಣಮುಖರಾಗಿದ್ದಾರೆ.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.