ಕೊರೊನವನ್ನು ಧರ್ಮಕ್ಕೆ ಸೇರಿಸಬೇಡಿ: ಭಾರತಕ್ಕೆ ಸೂಚಿಸಿದ ವಿಶ್ವ ಆರೋಗ್ಯ ಸಂಘಟನೆ

0
3847

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಎ. 8: ಭಾರತದಲ್ಲಿ ಕೊರೊನಾವನ್ನು ತಬ್ಲೀಗಿ ಜಮಾಅತ್‍ಗೆ ಸೇರಿಸಿ ಸರಕಾರವೇ ವಿವರ ನೀಡುತ್ತಿರುವುದನ್ನು ವಿಶ್ವ ಆರೋಗ್ಯ ಸಂಘಟನೆ ವಿರೋಧಿಸಿದೆ. ದೇಶಗಳು ಯಾವುದಾದರೂ ಧರ್ಮ ವಿಭಾಗಕ್ಕೆ ಸೇರಿಸಿ ಕೊರೊನಾವನ್ನು ಬಿಂಬಿಸಬಾರದೆಂದು ಅದು ಹೇಳಿದೆ. ಹೀಗೆ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ವಿಶ್ವಾರೋಗ್ಯ ಸಂಘಟನೆಯ ನಿರ್ದೇಶಕ ಮೈಕ್ ರಯಾನ್ ಹೇಳಿದರು. ಕೊರೊನಾ ಯಾರದೋ ಅಪರಾಧದಿಂದ ಬಂದಿಲ್ಲ. ಪ್ರತಿಯೊಂದು ಘಟನೆಯಲ್ಲಿಯೂ ಅದು ಬಾಧಿಸುವ ವ್ಯಕ್ತಿ ಬಲಿಪಶುವಾಗುತ್ತಾನೆ. ಆದರಿಂದ ಕೊರೊನಾ ಪೀಡಿತರ ವಂಶ, ಧರ್ಮ, ಸಮುದಾಯವನ್ನು ಉಲ್ಲೇಖಿಸಿ ಹೇಳಬಾರದು, ಭಾರತದಲ್ಲಿ ನಡೆದ ಇಂತಹ ಘಟನೆಗಳನ್ನು ಅವರು ಪತ್ರಿಕಾಗೋಷ್ಠಿಯಲ್ಲಿ ಸೂಚಿಸಿದರು.

ಆರೋಗ್ಯ ಕಾರ್ಯಕರ್ತರ ವಿರುದ್ಧ ದಾಳಿಯೂ ಅಪಮಾನಕರವಾಗಿದೆ. ಅವರಿಗೆ ಸಂರಕ್ಷಣೆ ನೀಡಬೇಕು ಎಂದರು. ಇಂದೋರಿನಲ್ಲಿ ಆರೋಗ್ಯ ಕಾರ್ಯಕರ್ತರು ದಾಳಿಗೊಳಗಾಗಿದ್ದ ಘಟನೆಯನ್ನು ಪತ್ರಿಕಾಗೋಷ್ಠಿಯಲ್ಲಿ ಸೂಚಿಸಿದರು.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.