ವಕ್ಫ್ ಆಸ್ತಿ ವಿವಾದವನ್ನು ಬಗೆಹರಿಸಲು ಆಯೋಗ ರಚಿಸಿದ ಕೇರಳ ಸರಕಾರ

0
745

ಕೋಝಿಕೋಡ್: ರಾಜ್ಯದ ವಿವಿಧ ವಕ್ಫ್ ಆಸ್ತಿ ಬಗೆಗಿನ ವಿವಾದಗಳನ್ನು ಪರಿಹರಿಸಲು ಮತ್ತು ಬಾಕಿ ಉಳಿದಿರುವ ಸಮೀಕ್ಷೆಯ ಚಟುವಟಿಕೆಗಳನ್ನು ಪೂರೈಸಲು ಸರ್ಕಾರವು ಜಂಟಿ ಸಮೀಕ್ಷಾ ಆಯೋಗವನ್ನು ನೇಮಿಸುತ್ತದೆ ಎಂದು ಉನ್ನತ ಶಿಕ್ಷಣ ಮತ್ತು ವಕ್ಫ್ ಸಚಿವ ಕೆಟಿ ಜಲೀಲ್ ತಿಳಿಸಿದ್ದಾರೆ.

ಮೂರು ಸದಸ್ಯರ ನ್ಯಾಯಮಂಡಳಿಯು ಈ ಪ್ರಕರಣಗಳನ್ನು ಶೀಘ್ರಗತಿಯಲ್ಲಿ ಇತ್ಯರ್ಥಗೊಳಿಸಲು ಸಹಾಯ ಮಾಡುತ್ತದೆ ಎಂದು ಮಂತ್ರಿ ಜಲೀಲ್ ವಿಶ್ವಾಸವನ್ನು ವ್ಯಕ್ತಪಡಿಸಿದರು. ಹೊಸ ನ್ಯಾಯಮಂಡಳಿಯು ಶೀಘ್ರ ತೀರ್ಮಾನದ ಭರವಸೆಯೊಂದಿಗೆ ವಕ್ಫ್ ಸಂಬಂಧಿತ ದೂರುಗಳನ್ನು ಪರಿಗಣಿಸುತ್ತದೆ ಎಂದು ಅವರು ಹೇಳಿದರು.

ಮೂವರು ಪ್ರಾದೇಶಿಕ ನ್ಯಾಯಾಧೀಶರು, ರಾಜ್ಯ ಮಟ್ಟದ ನ್ಯಾಯಮಂಡಳಿಯ ರಚನೆ ತನಕವೂ ಅಸ್ತಿತ್ವದಲ್ಲಿರುತ್ತಾರೆ, ಇತರ ಪ್ರಕರಣಗಳು ವಕ್ಫ್ ಪ್ರಕರಣಗಳ ತೀರ್ಮಾನದ ವಿಳಂಬಕ್ಕೆ ಕಾರಣವಾಗುವುದನ್ನು ಪರಿಗಣಿಸಲಾಗಿದೆ ಎಂದು ಅವರು ಹೇಳಿದರು.

ರಾಜ್ಯದಲ್ಲಿ ಪ್ರಾದೇಶಿಕ ಮಟ್ಟದ ವಕ್ಫ್ ನ್ಯಾಯಮಂಡಳಿಯಲ್ಲಿ ಸುಮಾರು 700 ವಖ್ಫ್ ಪ್ರಕರಣಗಳು ಬಾಕಿ ಉಳಿದಿವೆ ಎಂದು ಸಚಿವರು ತಿಳಿಸಿದ್ದಾರೆ. ರಾಜ್ಯ ಮಟ್ಟದ ನ್ಯಾಯಮಂಡಳಿಯ ರಚನೆಗೆ ಮುಂಚೆ ಪ್ರಾದೇಶಿಕ ನ್ಯಾಯಮಂಡಳಿಗಳ ಪರಿಗಣನೆಗೆ ಒಳಪಟ್ಟ ಪ್ರಕರಣಗಳನ್ನು ರಾಜ್ಯ ನ್ಯಾಯಮಂಡಳಿಗೆ ಹಸ್ತಾಂತರಿಸಲಾಗುವುದು ಎಂದು ಅವರು ಹೇಳಿದರು.

ಪ್ರಸ್ತುತ ರಾಜ್ಯದಲ್ಲಿ ಇತರ ನ್ಯಾಯಾಲಯಗಳ ಪರಿಗಣನೆಯಡಿಯಲ್ಲಿ, ಎಲ್ಲಾ ವಕ್ಫ್ ಸಂಬಂಧಿತ ಪ್ರಕರಣಗಳನ್ನು ಹೊಸದಾಗಿ ರಚಿಸಲಾದ ನ್ಯಾಯಮಂಡಳಿಗೆ ಬದಲಾಯಿಸುವ ಯೋಜನೆಯನ್ನು ಸಚಿವರು ಹಂಚಿಕೊಂಡರು, ಪ್ರಕರಣಗಳನ್ನು ಪರಿಣಾಮಕಾರಿಯಾಗಿ ಮತ್ತು ವೇಗವಾಗಿ ಪರಿಹರಿಸಲು ರಾಜ್ಯ ಸರ್ಕಾರವು ವಕ್ಫ್ ನ್ಯಾಯಮಂಡಳಿಯಲ್ಲಿ 29 ಹುದ್ದೆಗಳನ್ನು ರಚಿಸಿದೆ.

ಎಲ್ ಡಿ ಎಫ್ ಸರಕಾರವು ವಕ್ಫ್ ಮಂಡಳಿಗೆ ವಾರ್ಷಿಕ ಅನುದಾನವನ್ನು ರೂ. 75 ಲಕ್ಷದಿಂದ 2 ಕೋಟಿ ರೂಪಾಯಿಗಳಿಗೆ ಹೆಚ್ಚಿಸಿದೆ ಎಂದು ಅವರು ತಿಳಿಸಿದರು.