ಕೇರಳ: ಅಪ್ರಾಪ್ತೆಯ ಅತ್ಯಾಚಾರಕ್ಕೆ ಯತ್ನಿಸಿದ ಆರೆಸ್ಸೆಸ್ ಕಾರ್ಯಕರ್ತನ ಬಂಧನ

0
1674

ಸನ್ಮಾರ್ಗ ವಾರ್ತೆ

ಪಾರಶ್ಸಾ: ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಅತ್ಯಾಚಾರ ಮಾಡಲು ಯತ್ನಿಸಿದ ಪ್ರಕರಣದಲ್ಲಿ ಆರೆಸ್ಸೆಸ್ ಕಾರ್ಯಕರ್ತ ಪ್ರಮೋದ್(36) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈತ ಚೆಂಗಲ್ ವ್ಲಾಂತಂಗರ ಕೊಡಿತ್ತರ ಎಂಬಲ್ಲಿನ ನಿವಾಸಿಯಾಗಿದ್ದಾನೆ.

ಮನೆಯ ಹೊರಗೆ ಶುಚೀಕರಣ ಮಾಡುವ ವೇಳೆಯಲ್ಲಿ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಬಾಲಕಿ ಬೊಬ್ಬೆ ಹೊಡೆದಾಗ ಮನೆಮಂದಿ ಗಾಬರಿಯಾಗಿ ಓಡಿ ಬಂದದ್ದರಿಂದ ಆರೋಪಿ ಪ್ರಮೋದ್ ಸ್ಥಳದಿಂದ ತಪ್ಪಿಸಿಕೊಂಡಿದ್ದಾನೆ. ಸಂಬಂಧಿಕರು ಪೊಲೀಸರಿಗೆ ದೂರು ನೀಡಿದ ನಂತರ ತನಿಖೆ ಮಾಡಿದ ಪೊಲೀಸರು ಪ್ರಮೋದ್‍ನನ್ನು ಬಂಧಿಸಿರುವುದಾಗಿ ತಿಳಿದು ಬಂದಿದೆ. ಆರೋಪಿ ಪ್ರಮೋದ್ ಈ ಹಿಂದೆ ಕೂಡ ಹೆಣ್ಣು ಮಕ್ಕಳನ್ನು ಅತ್ಯಾಚಾರಕ್ಕೆ ಯತ್ನಿಸಿದ್ದ ಎಂಬ ಆರೋಪ ಕೂಡ ಕೇಳಿಬಂದಿದೆ.

ಪಾರಶ್ಶಾಲ ಎಚ್‍ಎಸ್‍ಒ ಇ.ಕೆ ಸೊಲ್ಜಿಮೋನ್, ಸಬ್ ಇನ್ಸ್‍ಪೆಕ್ಟರ್ ಶ್ರೀಜಿತ್ ಜನಾರ್ದನ್ ನೇತೃತ್ವದಲ್ಲಿ ಆರೋಪಿಯನ್ನು ಬಂಧಿಸಲಾಗಿದ್ದು ರಿಮಾಂಡ್ ವಿಧಿಸಲಾಗಿದೆ.