ಸನ್ಮಾರ್ಗ ವಾರ್ತೆ
ತಿರುವನಂತಪುರಂ: ಕೇರಳದಲ್ಲಿ ಆರಾಧನಾಲಯಗಳನ್ನು ಶೀಘ್ರ ತೆರೆಯುವುದಿಲ್ಲ ಎಂದು ಕೇರಳ ಮುಜರಾಯಿ(ದೇವಸ್ವಂ) ಸಚಿವ ಕೆ. ರಾಧಾಕೃಷ್ಣನ್ ಹೇಳಿದ್ದಾರೆ. ಭಕ್ತರ ಸುರಕ್ಷೆಗೆ ಆದ್ಯತೆ ನೀಡಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
ಆರಾಧಾನಾಲಯಗಳು ತೆರೆಯದಿರುವುದು ರೋಗ ಹರಡುವ ಕಾರಣದಿಂದಾಗಿದೆ. ಜನರು ಗುಂಪು ಸೇರಿದರೆ ರೋಗ ವ್ಯಾಪಿಸಲು ಅದು ಕಾರಣವಾಗಬಹುದು. ಭಕ್ತರನ್ನು ತಡೆಯುವುದು ಸರಕಾರದ ಉದ್ದೇಶವಾಗಿಲ್ಲ ಎಂದರು.
ಮಂದಿರಗಳು, ಮಸೀದಿಗಳು ಯಾವಾಗ ತೆರೆಯಬಹುದು ಎಂದು ಹೇಳಲಾಗದು. ರೋಗ ಹರಡುವಿಕೆ ಕಡಿಮೆಯಾದ ಕೂಡಲೇ ಈ ವಿಷಯದಲ್ಲಿ ಅನುಮತಿ ನೀಡಲಾಗುವುದು ಎಂದು ಕೆ. ರಾಧಾಕೃಷ್ಣನ್ ಹೇಳಿದರು. ಆರಾಧಾನಾಲಯಗಳು ತೆರೆಯಬೇಕೆಂದು ವಿವಿಧ ಧರ್ಮ ವಿಭಾಗದ ಸಂಘಟನೆಗಳು ನಿರಂತರ ಒತ್ತಾಯಿಸುತ್ತಿದ್ದು ಈ ಹಿನ್ನೆಲೆಯಲ್ಲಿ ಸಚಿವರು ಪ್ರತಿಕ್ರಿಯೆ ನೀಡಿದ್ದಾರೆ. ಎನ್ಎಸ್, ಮಲಂಗರ ಆರ್ಥೊಡೆಕಸ್ ಸಭ, ಸಮಸ್ತ ಕೇರಳ ಜಮ್ಇಯ್ಯತುತಲ್ ಉಲಮಾ , ಜಮಾಅತೆ ಇಸ್ಲಾಮಿ ಹಿಂದ್ , ಕೆಎನ್ಎಂ, ಆಲ್ ಇಂಡಿಯ ಇಮಾಮ್ಸ್ ಕೌನ್ಸಿಲ್, ವಿಸ್ಢಂ ಇಸ್ಲಾಮಿಕ್ ಆರ್ಗನೈಝೇಶನ್, ಕೇರಳ ಮುಸ್ಲಿಂ ಜಮಾಅತ್ ಫೆಡರೇಶನ್ ಆರಾಧಾನಾಲಯಗಳು ತೆರೆಯಲು ಸರಕಾರವನ್ನು ಒತ್ತಾಯಿಸಿದ್ದವು.












