ಸಿಎಎ ವಿರುದ್ಧ ಭಾಷಣ: ಕಫಿಲ್ ಖಾನ್ ವಿರುದ್ಧ ದೇಶ ಸುರಕ್ಷಾ ಕಾನೂನು

0
616

ಸನ್ಮಾರ್ಗ ವಾರ್ತೆ

ಲಕ್ನೊ, ಫೆ. 14: ಕೋರ್ಟು ಜಾಮೀನು ನೀಡಿಯೂ ಜೈಲಲ್ಲಿರುವ ಉತ್ತರಪ್ರದೇಶ ವೈದ್ಯ ಕಫಿಲ್ ಖಾನ್ ವಿರುದ್ಧ ದೇಶ ಸುರಕ್ಷಾ ಕಾನೂನು ಪ್ರಕಾರ ಕೇಸು ದಾಖಲಿಸಲಾಗಿದೆ. ಪೌರತ್ವ ತಿದ್ದುಪಡಿ ಕಾನೂನು ವಿರುದ್ಧ ಡಿಸೆಂಬರ್ ಹನ್ನೆರಡರಂದು ಅಲಿಗಡದ ಮುಸ್ಲಿಂ ಯುನಿವರ್ಸಿಟಿಯಲ್ಲಿ ಮಾಡಿದ ಭಾಷಣಕ್ಕಾಗಿ ಕಫಿಲಾ ಖಾನ್ ವಿರುದ್ಧ ಹೊಸ ಕೇಸು ದಾಖಲಿಸಲಾಗಿದೆ. ದೇಶ ಸುರಕ್ಷೆ ಕಾನೂನು ಪ್ರಕಾರ ಖಾನ್ ವಿರುದ್ಧ ಕೇಸು ದಾಖಲಿಸುವ ಅಗತ್ಯವಿದೆ ಎಂದು ಅದಕ್ಕೆ ಅಗತ್ಯ ಸಾಕ್ಷ್ಯಗಳಿವೆ ಎಂದು ಉತ್ತರಪ್ರದೇಶ ಕ್ರೈಂ ಎಸ್ಪಿ ಡಾ. ಅರವಿಂದ್ ತಿಳಿಸಿದ್ದಾರೆ. ಪ್ರಚೋದನಾಕಾರಿ ಭಾಷಣದ ಹೆಸರಿನಲ್ಲಿದ್ದ ಪ್ರಕರಣದಲ್ಲಿ ಕಫಿಲ್ ಖಾನ್‍ಗೆ ಜಾಮೀನು ಸಿಕ್ಕಿತ್ತು. ಇದರ ಬೆನ್ನಿಗೆ ದೇಶ ಸುರಕ್ಷ ಕಾನೂನು ಪ್ರಕಾರ ಉತ್ತರಪ್ರದೇಶ ಪೊಲೀಸರು ಕೇಸು ದಾಖಲಿಸಿದ್ದಾರೆ.

ಇದೇ ವೇಳೆ ಕೋರ್ಟು ಜಾಮೀನು ನೀಡಿದರೂ ಕಫಿಲ್ ಖಾನ್‍ರ ಉತ್ತರಪ್ರದೇಶ ಪೊಲೀಸರು ಬಿಡಗಡೆಗೆ ಸಿದ್ಧವಾಗಿಲ್ಲ. ಜನವರಿ 29ಕ್ಕೆ ಅವರನ್ನು ವಿಶೇಷ ಟಾಸ್ಕ್ ಪೊರ್ಸ್ ಮುಂಬೈನಿಂದ ಬಂಧಿಸಿ ಕರೆತಂದಿತ್ತು. ಸಿಎಎ ವಿರುದ್ಧ ಅಲಿಗಡ ಮುಸ್ಲಿಂ ಯುನಿವರ್ಸಿಟಿಯಲ್ಲಿ ಮಾಡಿದ ಭಾಷಣಕ್ಕಾಗಿ ಅವರನ್ನು ಬಂಧಿಸಲಾಗಿತ್ತು. ಇದರ ನಂತರ ಅವರನ್ನು ಮಥುರಾದ ಜೈಲಿನಲ್ಲಿರಿಸಲಾಗಿತ್ತು.