ಕುರ್‌ಆನ್ ಓದಿದ ಬಳಿಕ ಇಸ್ಲಾಂ ಸ್ವೀಕರಿಸಿದ ಖ್ಯಾತ ತಮಿಳು ಸಾಮಾಜಿಕ ಕಾರ್ಯಕರ್ತೆ ಶಬರಿಮಲ ಜಯಕಾಂತನ್

0
456

ಸನ್ಮಾರ್ಗ ವಾರ್ತೆ

ಚೆನ್ನೈ: ಕುರ್‌ಆನ್ ಓದಿದ ಬಳಿಕ ಇಸ್ಲಾಂ ಧರ್ಮ ಸ್ವೀಕರಿಸಿರುವುದಾಗಿ ಖ್ಯಾತ ತಮಿಳು ವಾಗ್ಮಿ ಹಾಗೂ ಸಾಮಾಜಿಕ ಕಾರ್ಯಕರ್ತೆ ಶಬರಿಮಲ ಜಯಕಾಂತನ್  ಘೋಷಿಸಿದ್ದಾರೆ. ಸೌದಿ ಅರೇಬಿಯಾಕ್ಕೆ ಭೇಟಿ ನೀಡಿದ ಅವರು ಮಕ್ಕಾದಲ್ಲಿನ ಹರಮ್ ಮಸೀದಿಯ ಕಾಬಾ ಭವನದ ಮುಂದೆ ಇಸ್ಲಾಂ ಸ್ವೀಕರಿಸಿ ತನ್ನ ಹೆಸರನ್ನು ಫಾತಿಮಾ ಶಬರಿಮಲ ಎಂದು ಬದಲಾಯಿಸಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಇಸ್ಲಾಮ್ ಧರ್ಮ ಸ್ವೀಕರಿಸಲು ಕಾರಣವೇನೆಂಬುದನ್ನು ತಿಳಿಸಿದ ಅವರು, “ಪ್ರಪಂಚದಾದ್ಯಂತ ಮುಸ್ಲಿಮರ ಮೇಲೆ ಯಾಕೆ ಇಷ್ಟೊಂದು ದ್ವೇಷವಿದೆ ಎಂದು ನನ್ನನ್ನು ನಾನು ಕೇಳಿಕೊಂಡೆ. ನಂತರ ತಟಸ್ಥ ಮನಸ್ಸಿನಿಂದ ಕುರ್‌ಆನ್ ಓದಲು ಪ್ರಾರಂಭಿಸಿದೆ. ನಾನು ಆ ಸತ್ಯವನ್ನು ಅರ್ಥಮಾಡಿಕೊಂಡೆ. ನಾನು ಈಗ ನನಗಿಂತ ಹೆಚ್ಚಾಗಿ ಇಸ್ಲಾಂ ಅನ್ನು ಪ್ರೀತಿಸುತ್ತೇನೆ,” ಎಂದು ಅವರು ಹೇಳಿದ್ದಾರೆ.

ಮುಸ್ಲಿಮರಾಗಿರುವುದು ದೊಡ್ಡ ಗೌರವ ಮತ್ತು ಅದೃಷ್ಟ ಎಂದು ಹೇಳಿದ ಫಾತಿಮಾ ಶಬರಿಮಲ, ಮುಸ್ಲಿಮರು ತಮ್ಮ ಪವಿತ್ರ ಗ್ರಂಥ ಕುರ್‌ಆನ್ ಅನ್ನು ಸುತ್ತಮುತ್ತಲಿನ ಎಲ್ಲರಿಗೂ ಪರಿಚಯಿಸಬೇಕೆಂದು ಕೇಳಿಕೊಂಡಿದ್ದಾರೆ. “ನಿಮ್ಮ ಕೈಯಲ್ಲಿ ಅದ್ಭುತವಾದ ಪುಸ್ತಕವಿದೆ. ಅದನ್ನು ಮನೆಯಲ್ಲಿ ಮುಚ್ಚಿಟ್ಟುಕೊಂಡಿದ್ದೀರಾ. ಜಗತ್ತು ಅದನ್ನು ಓದಬೇಕು,” ಎಂದು ಅವರು ಹರಮ್ ಮಸೀದಿಯಿಂದ ನೀಡಿದ ವೀಡಿಯೊ ಸಂದೇಶದಲ್ಲಿ ಹೇಳಿದ್ದಾರೆ.