ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, ಮಾ.13: ಉನ್ನಾವ ಬಾಲಕಿಯ ತಂದೆಯ ಕೊಲೆ ಪ್ರಕರಣದಲ್ಲಿ ಮಾಜಿ ಬಿಜೆಪಿ ನಾಯಕ ಮತ್ತು ಶಾಸಕ ಕುಲ್ದೀಪ್ ಸಿಂಗ್ ಸೇಂಗರ್ ಮತ್ತು ಏಳು ಮಂದಿ ಆರೋಪಿಗಳಿಗೆ ಹತ್ತುವರ್ಷ ಜೈಲುಶಿಕ್ಷೆಯನ್ನು ವಿಧಿಸಿ ದಿಲ್ಲಿ ಕೋರ್ಟು ತೀರ್ಪು ನೀಡಿದೆ. ಕುಲ್ದೀಪ್ ಸೇಂಗರ್, ಸಹೋದರ ಅತುಲ್ ಸೇಂಗರ್ ಪ್ರಕರಣದ ಮುಖ್ಯ ಆರೋಪಿಗಳಾಗಿದ್ದು, ಈಗ ಅತ್ಯಾಚಾರ ಪ್ರಕರಣದಲ್ಲಿ ಇವರು ಶಿಕ್ಷೆ ಅನುಭವಿಸುತ್ತಿದ್ದಾರೆ.
ಕುಲ್ದೀಪ್ ಸೇಂಗರ್ 30 ಲಕ್ಷ ರೂಪಾಯಿ ದಂಡ ತೆರಬೇಕಿದೆ. ದಂಡದ ಮೊತ್ತವನ್ನು ಕೊಲೆಯಾದವರ ಕುಟುಂಬಕ್ಕೆ ನೀಡಬೇಕೆಂದು ಕೋರ್ಟು ಆದೇಶಿಸಿದೆ. ಜ್ಯೂಡಿಷಿಯಲ್ ಕಸ್ಟಡಿಯಲ್ಲಿ ಬಾಲಕಿಯ ತಂದೆ ಕೊಲೆಯಾಗಿದ್ದರು. ಕುಲ್ದೀಪ್ ಸಿಂಗ್ ಸೇಂಗರ್ ಮತ್ತು ಸಂಗಡಿಗರು ಬಾಲಕಿಯ ತಂದೆಗೆ ಹಲ್ಲೆ ಮಾಡಿದ್ದರು. ನಂತರ ಅವರನ್ನು ಅಕ್ರಮ ಆಯುಧ ಪ್ರಕರಣದಲ್ಲಿ ಬಂಧಿಸಲಾಗಿತ್ತು.












