ಮುಖ್ಯಮಂತ್ರಿಯಾಗಿ ಮುಂದುವರಿಯಲು ಕುಮಾರಸ್ವಾಮಿ ನಿರ್ಧಾರ

0
431

ಬೆಂಗಳೂರು,ಮೇ25: ಲೋಕಸಭಾ ಚುನಾವಣೆಯ ಫಲಿತಾಂಶದ ಬೆನ್ನಿಗೆ ಕರ್ನಾಟಕದ ದೋಸ್ತಿ ಸರಕಾರ ಬೀಳದಂತೆ ನೋಡಿಕೊಳ್ಳಲು ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ನಾಯಕರು ಮತ್ತು ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು ಅವರ ವಸತಿಯಲ್ಲಿ ಸಭೆ ನಡೆಸಿದ್ದು ತದನಂತರ ಮುಖ್ಯಮಂತ್ರಿಯ ವಸತಿಯಲ್ಲಿ ಅನಧಿಕೃತ ಸಚಿವ ಸಂಪುಟ ಸಭೆ ನಡೆದಿದೆ.

ಅಗತ್ಯತೆ ಕಂಡುಬಂದಲ್ಲಿ ಕಾಂಗ್ರೆಸ್‍ಗೆ ಮುಖ್ಯಮಂತ್ರಿ ಸ್ಥಾನ ಕೊಡಬಹುದು ಎಂದು ಎಚ್‍.ಡಿ.ಕುಮಾರಸ್ವಾಮಿ ಹೇಳಿದರು. ಆದರೆ ಅವರನ್ನೇ ಮುಖ್ಯಮಂತ್ರಿಯನ್ನಾಗಿ ಮುಂದುವರಿಸಬೇಕೆಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯ ಸೂಚನೆಯನ್ನು ಕಾಂಗ್ರೆಸ್ ಸಭೆಯಲ್ಲಿ ಹಸ್ತಾಂತರಿಸಿತು. ಮೈತ್ರಿಗೆ ಹಾನಿಯೊಡ್ಡುವ ಯಾವ ಚಟುವಟಿಕೆಗಳೂ ನಾಯಕರಿಂದ ನಡೆಯಬಾರದು, ನಾಯಕತ್ವ ಬದಲಾವಣೆ ಅಗತ್ಯವಿಲ್ಲ ಎಂದು ಹೈಕಮಾಂಡ್ ತಿಳಿಸಿದೆ. ಕುಮಾರಸ್ವಾಮಿಯನ್ನು ಬದಲಾಯಿಸಿ ಅಧಿಕಾರ ಎತ್ತಿಕೊಂಡರೆ ಕಾಂಗ್ರೆಸ್‍ಗೆ ಇನ್ನಷ್ಟು ಹಾನಿಕರವಾಗಲಿದೆ. ಮೈತ್ರಿಯಲ್ಲಿ ಭಿನ್ನಮತದ ಚಟುವಟಿಕೆಗಳು ನಡೆಯದು ಎಂದು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹೇಳಿದ್ದಾರೆ.