ಇಸ್ಲಾಮಾಬಾದ್,ಮಾ.25: ಲೋಕಸಭಾ ಚುನಾವಣೆಯಲ್ಲಿ ಐತಿಹಾಸಿಕ ವಿಜಯ ಗಳಿಸಿದ ಭಾರತದ ಪ್ರಧಾನಿ ನರೇಂದ್ರ ಮೋದಿಗೆ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅಭಿನಂದನೆ ಸಲ್ಲಿಸಿದ್ದಾರೆ. ಉಭಯ ದೇಶಗಳು ಪರಸ್ಪರ ಶಾಂತಿ, ಸಹಯೋಗದೆಡೆಗೆ ಹೆಜ್ಜೆ ಹಾಕಬೇಕಾಗಿದೆ ಎಂದು ಇಮ್ರಾನ್ ಕರೆ ನೀಡಿದರು. ಇಮ್ರಾನ್ರ ಅಭಿನಂದನೆಗೆ ಮೋದಿ ಕೃತಜ್ಞತೆ ಸೂಚಿಸಿ ಟ್ವೀಟ್ ಮಾಡಿದರು. ವಲಯದಲ್ಲಿ ಶಾಂತಿ,ಪ್ರಗತಿ ತರುವುದು ಉದ್ದೇಶವಾಗಿದೆ ಎಂದು ಮೋದಿಯೂ ಹೇಳಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ವಿಜಯವನ್ನು ಪಾಕಿಸ್ತಾನ ಬೇರೆ ರೀತಿಯಲ್ಲಿಯೇ ಕಂಡಿದೆ. ರಾಷ್ಟ್ರದ ಸುರಕ್ಷೆಗೆ ಬೆದರಿಕೆ, ಬಾಲಕೋಟ್ ದಾಳಿಯನ್ನು ಮತವಾಗಿ ಬದಲಾಯಿಸಿದ ಮೋದಿ ಸರಕಾರದ ವಿಜಯದ ವಿರುದ್ಧ ಪಾಕಿಸ್ತಾನದ ಮಾಧ್ಯಮಗಳು ಉತ್ತಮ ಪ್ರಾಮುಖ್ಯತೆ ನೀಡಿತು. ಮೋದಿ ವಿರೋಧಿ ವಾರ್ತೆ ಬರದಂತೆ ಎಚ್ಚರವಹಿಸಿತು. ಕೆಲವು ಮಾಧ್ಯಮಗಳು ಮೋದಿಯ ಗೆಲುವನ್ನು ಅನಿರೀಕ್ಷಿತವಲ್ಲ ಎಂದು ವಿಶ್ಲೇಷಿದವು. ಆದರೂ ಕೆಲವು ಮಾಧ್ಯಮಗಳು ಮೋದಿಯ ಪುನರಾಗಮನ ಮುಸ್ಲಿಮರಿಗೆ, ಅಲ್ಪಸಂಖ್ಯಾತರಿಗೆ ಲಾಭದಾಯಕವಲ್ಲ ಎಂದು ಬರೆದವು. ಆದರೆ ಪ್ರಮುಖ ಮಾಧ್ಯಮಗಳು ಅಂತಹ ಆಳವಾದ ವಿಶ್ಲೇಷಣೆ ಮಾಡಲಿಲ್ಲ. ಡಾನ್ ಪತ್ರಿಕೆ ಮೊದಲ ಪುಟದಲ್ಲಿ ಮೋದಿ ವಿಜಯದ ಸುದ್ದಿ ಪ್ರಕಟಿಸಿತು. ಇಮ್ರಾನ್ ಖಾನ್ ಮೋದಿಯನ್ನು ಅಭಿನಂದಿಸಿದ್ದು ದನ್ಯಾಶನ್ ಪತ್ರಿಕೆ ಮುಖ್ಯ ಸುದ್ದಿಯನ್ನಾಗಿ ಮಾಡಿತು. ಟಿವಿಗಳು ಕೂಡ ಚುನಾವಣೆಯ ಬಳಿಕ ಭಾರತ-ಪಾಕ್ ಸಂಬಂಧ ಹೇಗಿರಬಹುದು ಎಂಬ ರೀತಿಯಲ್ಲಿ ಚರ್ಚಿಸಿದವು.
I congratulate Prime Minister Modi on the electoral victory of BJP and allies. Look forward to working with him for peace, progress and prosperity in South Asia
— Imran Khan (@ImranKhanPTI) May 23, 2019
Thank you PM @ImranKhanPTI.
I warmly express my gratitude for your good wishes. I have always given primacy to peace and development in our region. https://t.co/b01EjbcEAw
— Narendra Modi (@narendramodi) May 23, 2019












