ಬೆಂಗಳೂರು,ಜು. 18: ದೋಸ್ತಿ ಸರಕಾರ ಉಳಿಯುತ್ತದೊ ಎನ್ನುವುದು ಪ್ರಧಾನವಲ್ಲ. ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವ ಸಂಚು ಚರ್ಚಿಸಬೇಕಾಗುತ್ತದೆ” ಎಂದು ವಿಶ್ವಾಸ ಮತವನ್ನು ಯಾಚಿಸಿ ಮುಖ್ಯಮಂತ್ರಿ ಹೇಳಿದರು. ಸಭೆಯಲ್ಲಿ ವಿಶ್ವಾಸ ಮತವನ್ನು ಸಾಬೀತುಪಡಿಸುವುದಾಗಿ ಅವರು ಹೇಳಿದರು. ದೋಸ್ತಿ ಸರಕಾರ ಮುಂದೆ ಕೊಂಡು ಹೋಗಲು ಸಾಧ್ಯವೇ ಎಂಬ ಪ್ರಶ್ನೆಗೆ ಉತ್ತರ ನೀಡಲು ನಾನು ಇಲ್ಲಿ ನಿಂತಿದ್ದೇನೆ. ಸ್ಪೀಕರ್ ರ ಅಧಿಕಾರಕ್ಕೂ ಬೆದರಿಕೆಯೊಡ್ಡುವ ರೀತಿಯಲ್ಲಿ ಕೆಲವು ವಿಧಾನಸಭಾ ಸದಸ್ಯರು ವರ್ತಿಸಿದರು ಎಂದು ಕುಮಾರಸ್ವಾಮಿ ಹೇಳಿದರು.
ಸುಪ್ರೀಂಕೋರ್ಟು ಆದೇಶ ಚರ್ಚಿಸಬೇಕಾಗಿಲ್ಲ. ನಿರಾಧಾರವಾದ ಆರೋಪವನ್ನು ನಿಮ್ಮ ವಿರುದ್ಧ ಎತ್ತಿದ್ದಾರೆ. ಬಿಜೆಪಿ ನಾಯಕ ಯಾಕೆ ವಿಶ್ವಾಸ ಮತವನ್ನು ಶೀಘ್ರಗೊಳಿಸಬೇಕೆಂದು ಹೇಳುತ್ತಿದ್ದಾರೆ ಎಂದು ಕುಮಾರ ಸ್ವಾಮಿ ಪ್ರಶ್ನಿಸಿದರು.
ಹಲವು ಶಾಸಕರು ನನ್ನ ಕೆಲಸದಲ್ಲಿ ತೃಪ್ತಿಯಿದೆ ಎಂದು ತಿಳಿಸಿದ್ದಾರೆ. ಕೆಲವರಿಗೆ ನನ್ನೊಂದಿಗಿನ ಗೌರವ ಹೋಗಿದೆ. ಆದರೆ ತನಗೆ ಆತ್ಮಾಭಿಮಾನ ಇದೆ. ಸರಕಾರ ಅಸ್ಥಿರಗೊಳಿಸುವುದಕ್ಕೆ ಯತ್ನಿಸಿದ್ದಕ್ಕೆ ಜವಾಬ್ದಾರರು ಯಾರು ಎಂಬ ವಿಷಯದಲ್ಲಿ ಇಲ್ಲಿ ಸ್ಪಷ್ಟಪಡಿಸಬೇಕಾಗಿದೆ ಎಂದು ಕುಮಾರಸ್ವಾಮಿ ಹೇಳಿದರು. ಇದೇವೇಳೆ ವಿಶ್ವಾಸ ಮತಯಾಚನೆ ಮಾಡಬೇಕೆಂದು ಯಡಿಯೂರಪ್ಪ ಹೇಳಿದರು. ವಿಪ್ನಲ್ಲಿ ಸ್ಪಷ್ಟತೆ ನೀಡದೆ ಮತಯಾಚನೆ ನಡೆಸಬಾರದೆಂದು ಕಾಂಗ್ರೆಸ್ ಶಾಸಕಾಂಗ ಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದರು. ಸಭೆಯನ್ನು ಸ್ಪೀಕರ್ ಮೂರುಗಂಟೆಗೆ ಮುಂದೂಡಿದರು. ಎಲ್ಲ ಶಾಸಕರಿಗೂ ಮಾತಾಡಲು ಗರಿಷ್ಠ ಸಮಯ ನೀಡಿ ನಂತರ ವಿಶ್ವಾಸ ಮತಕ್ಕೆ ಹಾಕಬೇಕೆಂದು ಸರಕಾರ ತೀರ್ಮಾನಿಸಿದೆ. ಚರ್ಚೆ ನಾಳೆಯೂ ಪೂರ್ತಿಯಾಗದಿದ್ದರೆ ವಿಶ್ವಾಸ ಮತ ಪ್ರಕ್ರಿಯೆ ಮುಂದಿನ ವಾರಕ್ಕೆ ಹೋಗಲಿದೆ.












